ಮುಂಬೈ ಬೊರಿವಾಲಿ ಶಾಪಿಂಗ್ ಮಾಲ್ ನಲ್ಲಿ ಅಗ್ನಿ ಆಕಸ್ಮಿಕ

ಉಪನಗರದ ಬೊರಿವಲಿಯ ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿ ಬೆಂಕಿ ಕಾಣಿಸಿಕೊಂಡು ಅಪಾರ ಪ್ರಮಾಣದ ನಷ್ಟ ಉಂಟಾಗಿದೆ, ಅದೃಷ್ಟ ವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.
ಮುಂಬಯಿಯಲ್ಲಿ ಅಗ್ನಿ ಆಕಸ್ಮಿಕ
ಮುಂಬಯಿಯಲ್ಲಿ ಅಗ್ನಿ ಆಕಸ್ಮಿಕ
Updated on

ಮುಂಬಯಿ: ಉಪನಗರದ ಬೊರಿವಲಿಯ ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿ ಬೆಂಕಿ ಕಾಣಿಸಿಕೊಂಡು ಅಪಾರ ಪ್ರಮಾಣದ ನಷ್ಟ ಉಂಟಾಗಿದೆ, ಅದೃಷ್ಟ ವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.

ಎಸ್ ವಿ ರಸ್ತೆಯಲ್ಲಿರುವ ಬೋರಿವಲಿಯ ಇಂದ್ರಪ್ರಸ್ತ ಮಾಲ್ ನ ಬೇಸ್ ಮೆಂಟ್ ನಲ್ಲಿ ಮುಂಜಾನೆ ಮೂರು ಗಂಟೆ ವೇಳೆಗೆ ಬೆಂಕಿ ಕಾಣಿಸಿಕೊಂಡಿದೆ.

ಮೂರು ಮಹಡಿಗಳ ಈ ಮಾಲ್ ನಲ್ಲಿ ಮೊದಲಿಗೆ ನೆಲಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡು ನಂತರ ಉಳಿದ 2 ಮಹಡಿಗಳಿಗೆ ವ್ಯಾಪಿಸಿದೆ ಎಂದು ಅಗ್ನಿ ಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.

ಮುಂಜಾನೆ 3ರಿಂದ 4 ಗಂಟೆಗೆ ಹೊತ್ತಿಕೊಂಡ ಬೆಂಕಿ ಬೆಳಗ್ಗೆ 6.25 ರ ವೇಳೆಗೆ ವ್ಯಾಪಕವಾಗಿ ಹಬ್ಬಿದೆ. ಸ್ಥಳಕ್ಕೆ  16 ಅಗ್ನಿ ಶಾಮಕ ವಾಹನ ಆಗಮಿಸಿದ್ದು  ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದವು. ಇನ್ನೂ ಬೆಂಕಿ ನಂದಿಸುವ ಕಾರ್ಯ ಮುಂದುವರಿದಿದೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com