ದೇಶ

ಹೈದರಾಬಾದ್: ಖ್ಯಾತ ಮಕ್ಕಳ ಹಕ್ಕುಗಳ ಕಾರ್ಯಕರ್ತ ಅಚ್ಯುತ ರಾವ್ ಕೊರೋನಾಗೆ ಬಲಿ

ಹೈದರಾಬಾದ್: ಖ್ಯಾತ ಮಕ್ಕಳ ಹಕ್ಕುಗಳ ಕಾರ್ಯಕರ್ತ ಅಚ್ಯುತ ರಾವ್ ಕೊರೋನಾಗೆ ಬಲಿ
ಅಚ್ಯುತ ರಾವ್
Published On :

ಹೈದರಾಬಾದ್: ಕೋವಿಡ್-19 ಮಾರಕ ಸೋಂಕು ತಗುಲಿದ ನಂತರ ಬಾಲಾ ಹಕ್ಕುಲ ಸಂಘಂ ಎಂಬ ಎನ್‌ಜಿಒದ ಮುಖ್ಯಸ್ಥ  ಮಕ್ಕಳ ಹಕ್ಕುಗಳ ಕಾರ್ಯಕರ್ತ ಅಚ್ಯುತ ರಾವ್ ಬುಧವಾರ ಹೈದರಾಬಾದ್ ನಲ್ಲಿ ನಿಧನರಾದರು.

ತೆಲಂಗಾಣ ಮತ್ತು ಆಂಧ್ರಪ್ರದೇಶ ದಲ್ಲಿ  ಮಕ್ಕಳ ಹಕ್ಕುಗಳ ಅಭಿಯಾನದಲ್ಲಿ 20 ವರ್ಷಗಳ ಅನುಭವ ಹೊಂದಿರುವ 59 ವರ್ಷದ ಅಚ್ಯುತ ರಾವ್  ಎಂಟು ದಿನಗಳ ಹಿಂದೆ ಮಲಕ್‌ಪೇಟೆಯ ಯಶೋಧ ಆಸ್ಪತ್ರೆಗೆ ದಾಖಲಿಸಲಾಗಿತ್ತು. 

ರಾವ್  2014-15ರಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ರಾಜ್ಯದಲ್ಲಿ ಬಾಲ್ಯ ವಿವಾಹಗಳನ್ನು ನಿಲ್ಲಿಸುವಲ್ಲಿ ಮತ್ತು ಮಕ್ಕಳ ಹಕ್ಕುಗಳ ಮೇಲೆ ಪರಿಣಾಮ ಬೀರುವ ವಿಷಯಗಳ ಬಗ್ಗೆ ಮಾನವ ಹಕ್ಕುಗಳ ಅರ್ಜಿಗಳನ್ನು ಸಲ್ಲಿಸುವ ಹೋರಾಟಕ್ಕೆ ಅವರು ಪ್ರಸಿದ್ಧರಾಗಿದ್ದರು.ಅಲ್ಲದೆ ಅಪ್ರಾಪ್ತ ವಯಸ್ಕರ ರಕ್ಷಣಾ ಕಾರ್ಯಾಚರಣೆ ನಡೆಸಲು ಅವರು ಪೊಲೀಸ್ ಮತ್ತು ಮಹಿಳಾ ಅಭಿವೃದ್ಧಿ ಮತ್ತು ಮಕ್ಕಳ ಕಲ್ಯಾಣ ಇಲಾಖೆಯೊಂದಿಗೆ ಸಕ್ರಿಯವಾಗಿ ಕೆಲಸ ಮಾಡಿದ್ದರು.

ರಾವ್ ಹೇಗೆ ವೈರಸ್‌ಗೆ ತುತ್ತಾದರು ಎಂಬುದು ಸ್ಪಷ್ಟವಾಗಿಲ್ಲ. ಆಸ್ಪತ್ರೆಗೆ ದಾಖಲಾಗಿದ್ದ ಅವರ ಅಣ್ಣನನ್ನು ಈಗ ಬಿಡುಗಡೆ ಮಾಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.