ಗಡಿ ಬಿಕ್ಕಟ್ಟು: ಭಾರತ, ಚೀನಾ ಸಭೆ ಇಂದು, ಲೆಫ್ಟಿನೆಂಟ್'ಗಳ ಮಟ್ಟದಲ್ಲಿ ಚರ್ಚೆ

ಲಡಾಖ್ ಹಾಗೂ ಸಿಕ್ಕಿಂ ಗಡಿ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ನಡುವೆ ಲೆಫ್ಟಿನೆಂಟ್ ಜನರಲ್ ಮಟ್ಟದ ಮಹತ್ವದ ಮಾತುಕತೆ ಶನಿವಾರ ನಡೆಯಲಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಲಡಾಖ್ ಹಾಗೂ ಸಿಕ್ಕಿಂ ಗಡಿ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ನಡುವೆ ಲೆಫ್ಟಿನೆಂಟ್ ಜನರಲ್ ಮಟ್ಟದ ಮಹತ್ವದ ಮಾತುಕತೆ ಶನಿವಾರ ನಡೆಯಲಿದೆ. 

ಲೇಹ್ ನಲ್ಲಿನ 14 ಕೋರ್ ಪಡೆಯ ಮುಖ್ಯಸ್ಥ ಲೆ.ಜ.ಹರಿಂದರ್ ಸಿಂಗ್ ಅವರು ಭಾರತವನ್ನು ಪ್ರತಿನಿಧಿಸಲಿದ್ದಾರೆ. ಮಾತುಕತೆಯು ಪೂರ್ವ ಲಡಾಖ್'ನ ಚುಶೂಲ್ ವಲಯದ ಮಾಲ್ಕೋದಲ್ಲಿ ಇಂದು ಬೆಳಿಗ್ಗೆ 8 ಗಂಟೆಗೆ ನಿಗದಿಯಾಗಿದೆ.

ಪಾಂಗಾಂಗ್ ತ್ಸೋ ಸರೋವರ, ಗಲ್ವಾನ್ ಕಣಿವೆ ಹಾಗೂ ಡಮ್ಚೋಕ್ ಎಂಬ ಲಡಾಖ್'ನ 3 ಭಾಗಗಳಲ್ಲಿ ಕಳೆದ ತಿಂಗಳು ಭಾರತ ಹಾಗೂ ಚೀನಾ ಪಡೆಗಳು ಚಕಮಕಿ ನಡೆಸಿದ್ದವು. ಈ ವಿಷಯದ ಬಗ್ಗೆ ಮಾತುಕತೆಯಲ್ಲಿ ಪ್ರಮುಖ ಚರ್ಚೆ ನಡೆಯಲಿದ್ದು, ಕಾದಾಟಕ್ಕೆ ಉಭಯ ರಾಷ್ಟ್ರಗಳು ಅಂತ್ಯ ಹಾಡುವ ಬಗ್ಗೆ ಗಮನಹರಿಸುವ ಸಾಧ್ಯತೆಗಳಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com