ದೇಶ

ಆತಂಕಕಾರಿ ವರದಿ: ಕೊರೋನಾ ವೈರಸ್ ನ ಒಂದು ಹನಿ ಅರ್ಧ ಆಸ್ಪತ್ರೆಗೆ ಸೋಂಕು ಹರಡಿಸುತ್ತೆ!

ಆತಂಕಕಾರಿ ವರದಿ: ಕೊರೋನಾ ವೈರಸ್ ನ ಒಂದು ಹನಿ ಅರ್ಧ ಆಸ್ಪತ್ರೆಗೆ ಸೋಂಕು ಹರಡಿಸುತ್ತೆ!
ಸಂಗ್ರಹ ಚಿತ್ರ
Published On :

ನವದೆಹಲಿ: ಮಹಾಮಾರಿ ಕೊರೋನಾ ವೈರಸ್ ಕೇವಲ 10 ಗಂಟೆ ಅವಧಿಯಲ್ಲಿ ಒಂದು ಸ್ಥಳದಿಂದ ಇಡೀ ಅರ್ಧ ಆಸ್ಪತ್ರೆಗೆ ಹರಡಬಹುದು ಎಂಬ ಆಘಾತಕಾರಿ ವಿಷಯ ಅಧ್ಯಯನದ ಮೂಲಕ ತಿಳಿದುಬಂದಿದೆ.

ಜರ್ನಲ್ ಆಫ್ ಹಾಸ್ಪಿಟಲ್ ಸೋಂಕಿನಲ್ಲಿ ಪ್ರಕಟವಾದ ಈ ಅಧ್ಯಯನದಲ್ಲಿ COVID-19 ಗೆ ಕಾರಣವಾಗುವ SARS-CoV-2 ಎಂಬ ವೈರಸ್ ಆಸ್ಪತ್ರೆಯ ಮೇಲ್ಮೈಗಳಲ್ಲಿ ಹೇಗೆ ಹರಡಬಹುದು ಎಂಬುದನ್ನು ವರದಿ ಮಾಡಿದೆ. 

ಯೂನಿವರ್ಸಿಟಿ ಕಾಲೇಜ್ ಹಾಸ್ಪಿಟಲ್ (ಯುಸಿಎಲ್) ಮತ್ತು ಯುಕೆ ಯ ಗ್ರೇಟ್ ಒರ್ಮಂಡ್ ಸ್ಟ್ರೀಟ್ ಆಸ್ಪತ್ರೆಯ ಸಂಶೋಧಕರು ಆಸ್ಪತ್ರೆಯ ಬೆಡ್ ರೈಲ್‌ನಲ್ಲಿ ಉಳಿದಿರುವ ವೈರಸ್ ಡಿಎನ್‌ಎ 10 ಗಂಟೆಗಳ ಒಳಗೆ ಒಂದು ವಾರ್ಡಿನಿಂದ ಕೆಲ ವಾರ್ಡ್ ಗಳಿಗೆ ಅರ್ಧದಷ್ಟು ಪತ್ತೆಯಾಗಿದೆ ಮತ್ತು ಕನಿಷ್ಠ ಐದು ದಿನಗಳವರೆಗೆ ಮುಂದುವರೆದಿದೆ ಎಂಬುದನ್ನು ಗಮನಿಸಿದ್ದಾರೆ. 

SARS-CoV-2 ವೈರಸ್ ಬದಲಿಗೆ, ಸಂಶೋಧಕರು ಸಸ್ಯ-ಸೋಂಕಿತ ವೈರಸ್‌ನಿಂದ ಡಿಎನ್‌ಎದ ಒಂದು ಭಾಗವನ್ನು ಕೃತಕವಾಗಿ ಸೃಷ್ಟಿಸಿ, ಇದು ಮನುಷ್ಯರಿಗೆ ಸೋಂಕು ಹರಡಲ್ಲ. ಸೋಂಕಿತ ರೋಗಿಗಳ ಉಸಿರಾಟದ ಮಾದರಿಗಳಲ್ಲಿ ಕಂಡುಬರುವ SARS-CoV-2 ಪ್ರತಿಗಳಿಗೆ ಹೋಲುವ ಸಾಂದ್ರತೆಯಲ್ಲಿ ಅವರು ವೈರಸ್ ಅನ್ನು ಮಿಲಿಲೀಟರ್ ನೀರಿಗೆ ಸೇರಿಸಿದರು. ಸಂಶೋಧಕರು ಈ ಡಿಎನ್‌ಎ ಹೊಂದಿರುವ ನೀರನ್ನು ಆಸ್ಪತ್ರೆಯ ಪ್ರತ್ಯೇಕ ಕೋಣೆಯಲ್ಲಿ ಇರಿಸಿದರು. ಇದು ಕೇವಲ 10 ಗಂಟೆಯಲ್ಲೇ ಇತರ ಕೋಣೆಗಳಿಗೂ ಹಬ್ಬಿದೆ. ಹಾಗೂ ಇದು 5 ದಿನಗಳವರೆಗೂ ಜೀವಂತವಾಗಿತ್ತು ಎಂಬುದನ್ನು ಗಮನಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.