ಬಹುತೇಕ ಕಂಟೈನ್ಮೆಂಟ್ ಝೋನ್ ನಲ್ಲಿರುವ ಜನರಿಂದ ಶೇ.15-30ರಷ್ಟು ಕೊರೋನಾ ಸ್ಫೋಟ: ಐಸಿಎಂಆರ್ ಸೆರೋಸರ್ವೇ

ದೇಶದಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗಿದ್ದು, ಇದೇ ಮೊದಲ ಬಾರಿಗೆ ಜನಸಂಖ್ಯೆ ಆಧಾರದ ಮೇಲೆ ದೇಶದಲ್ಲಿ ಸೆರೋಸರ್ವೇ (ಸೆರೋ ಸಮೀಕ್ಷೆ) ಯೊಂದನ್ನು ನಡೆಸಲಾಗಿದೆ. ಸಮೀಕ್ಷೆಯ ವರದಿಯಲ್ಲಿ ದೇಶದ ಹಲವು ಕಂಟೈನ್ಮೆಂಟ್ ಝೋನ್ ನಲ್ಲಿರುವ ಜನರಿಂದ ಶೇ.15-30ರಷ್ಟು ಕೊರೋನಾ ಸ್ಫೋಟಗೊಂಡಿದೆ ಎಂದು ಬಹಿರಂಗಗೊಂಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗಿದ್ದು, ಇದೇ ಮೊದಲ ಬಾರಿಗೆ ಜನಸಂಖ್ಯೆ ಆಧಾರದ ಮೇಲೆ ದೇಶದಲ್ಲಿ ಸೆರೋಸರ್ವೇ (ಸೆರೋ ಸಮೀಕ್ಷೆ) ಯೊಂದನ್ನು ನಡೆಸಲಾಗಿದೆ. ಸಮೀಕ್ಷೆಯ ವರದಿಯಲ್ಲಿ ದೇಶದ ಹಲವು ಕಂಟೈನ್ಮೆಂಟ್ ಝೋನ್ ನಲ್ಲಿರುವ ಜನರಿಂದ ಶೇ.15-30ರಷ್ಟು ಕೊರೋನಾ ಸ್ಫೋಟಗೊಂಡಿದೆ ಎಂದು ಬಹಿರಂಗಗೊಂಡಿದೆ. 

ಹಾಟ್'ಸ್ಪಾಟ್ ನಗರಗಳಲ್ಲಿನ ಅನೇಕ ಕಂಟೈನ್ಮೆಂಟ್ ಪ್ರದೇಶಗಳಲ್ಲಿನ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರು ಸೋಂಕಿಗೊಳಗಾಗಲಿದ್ದು, ನಂತರ ಪ್ರಕರಣ ಬೆಳಕಿಗೆ ಬಾರದೆ, ಚೇತರಿಸಿಕೊಂಡಿರಬಹುದು ಎಂದು ತಿಳಿಸಿದೆ. 

ಸಮೀಕ್ಷೆಯನ್ನು ಭಾರತೀಯ ವೈದ್ಯಕೀಯ ಸಂಶೋಧಾ ಮಂಡಳಿ ನಡೆಸಿದ್ದು, ಸಂಶೋಧನೆಯ ಕೆಲ ವರದಿಯನ್ನು ಕೇಂದ್ರ ಸಂಪುಟ ಕಾರ್ಯದರ್ಶಿಗಳು ಹಾಗೂ ಪ್ರಧಾನಮಂತ್ರಿ ಕಚೇರಿಯೊಂದಿಗೆ ಹಂಚಿಕೊಂಡಿದೆ. 

ರಾಷ್ಟ್ರೀಯ ರೋಗನಿಯಂತ್ರಣ ಕೇಂದ್ರ(ಎನ್ ಸಿ ಡಿಸಿ). ಭಾರತದಲ್ಲಿರುವ ವಿಶ್ವ ಆರೋಗ್ಯ ಸಂಸ್ಥೆಯ ಕಚೇರಿ ಹಾಗೂ ರಾಜ್ಯ ಸರ್ಕಾರಗಳ ಸಹಾಯದೊಂದಿಗೆ ಐಸಿಎಂಆರ್ ದೇಶದ 70 ಜಿಲ್ಲೆಗಳಲ್ಲಿ ಸುಮಾರು 24,000 ಜನರ ಸ್ಯಾಂಪಲ್ಸ್ ಸಂಗ್ರಹಿಸಿ ತಪಾಸಣೆಗೊಳಪಡಿಸಿದೆ. 

ದೇಶದಲ್ಲಿರುವ 10 ಹಾಟ್ ಸ್ಪಾಟ್ ನಗರಗಳಾಗಿರುವ ಮುಂಬೈ, ಅಹಮದಾಬಾದ್, ಪುಣೆ. ದೆಹಲಿ, ಕೋಲ್ಕತಾ, ಇಂದೋರ್, ಥಾಣೆ, ಜೈಪುರ, ಚೆನ್ನೈ ಹಾಗೂ ಸೂರತ್ ನಲ್ಲಿ ಸೇ.70ರಷ್ಟು ಜನರನ್ನು ಪರೀಕ್ಷೆಗೊಳಪಡಿಸಲಾಗಿದೆ. ಪ್ರತೀ ಪ್ರದೇಶದಲ್ಲಿಯೂ 500 ಸ್ಯಾಂಪಲ್ಸ್ ಗಳನ್ನು ಸಂಗ್ರಹಿಸಲಾಗಿದೆ. ಉಳಿದಂತೆ ಹೆಚ್ಚುವರಿಯಾಗಿ 21 ರಾಜ್ಯಗಳ 60 ಜಿಲ್ಲೆಗಳಲ್ಲಿ 400 ಸ್ಯಾಂಪಲ್ಸ್ ಗಳನ್ನು ಸಂಗ್ರಹಿಸಿ, ಹೆಚ್ಚು ಹಾಗೂ ಸಾಮಾನ್ಯ ಸಂಖ್ಯೆಯಲ್ಲಿ ಸೋಂಕಿತರ ಸಂಖ್ಯೆಯನ್ನು ಹೊಂದಿರುವ ಪ್ರದೇಶಗಳೆಂದು ವಿಭಾಗಿಸಲಾಗಿದೆ. 

ಸೂರತ್, ಕೋಲ್ಕತಾ ಹಾಗೂ ಇತರೆ 6 ಜಿಲ್ಲೆಗಳನ್ನು ಹೊರತುಪಡಿಸಿದರೆ, ಉಳಿಸಿದಂತೆ ಎಲ್ಲಾ ಕಂಟೈನ್ಮೆಂಟ್ ಜೋನ್ ಗಳಲ್ಲಿರುವ ಜನರಿಂದ ಕೊರೋನಾ ಸ್ಫೋಟಗೊಂಡಿದೆ. ಪ್ರಮುಖವಾಗಿ ಪುಣೆ, ಮುಂಬೈ, ದೆಹಲಿ, ಅಹಮದಾಬಾದ್ ಹಾಗೂ ಇಂದೋರ್ ನಲ್ಲಿರುವ ಕಂಟೈನ್ಮೆಂಟ್ ಝೋನ್ ನಿಂದ ಸೋಂಕು ಹೆಚ್ಚಾಗಿ ಹರಡಿದೆ. ಇತರೆ. ಕಂಟೈನ್ಮೆಂಟ್ ಜೋನ್ ಗಳಲ್ಲಿ ಕೈಗೊಂಡಿರುವ ಹಲವು ಕ್ರಮಗಳು ಫಲ ನೀಡಿಲ್ಲ. ಶ್ರೇಣಿ II ಮತ್ತು ಶ್ರೇಣಿ III ರಲ್ಲಿರುವ ನಗರಗಳಲ್ಲಿ ವೈರಸ್ ಹರಡುವುದು ಕಡಿಮೆಯಾಗಿದೆ ಎಂದು ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com