ಕೊರೋನಾ ನಿಭಾಯಿಸುವಲ್ಲಿ ವಿಫಲ: ತ.ನಾಡು ಆರೋಗ್ಯ ಇಲಾಖೆ ಕಾರ್ಯದರ್ಶಿ ಡಾ.ಬೀಲಾ ರಾಜೇಶ್ ವರ್ಗಾವಣೆ

ಕೊರೋನಾ ವೈರಸ್ ಪರಿಸ್ಥಿತಿ ನಿಭಾಯಿಸುವಲ್ಲಿ ವಿಫಲಗೊಂಡಿದ್ದಾರೆಂಬ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ವಲಯದಿಂದ ತೀವ್ರ ಟೀಕೆಗಳಿಗೆ ಗುರಿಯಾಗಿದ್ದ ಆರೋಗ್ಯ ಇಲಾಖೆಯ ಕಾರ್ಯದರ್ಶಿ ಡಾ.ಬೀಲಾ ರಾಜೇಶ್ ಅವರನ್ನು ತಮಿಳುನಾಡು ಸರ್ಕಾರ ವರ್ಗಾವಣೆ ಮಾಡಿದ್ದು, ಬೀಲಾ ಅವರ ಸ್ಥಾನಕ್ಕೆ ಡಾ.ಜೆ.ರಾಧಾಕೃಷ್ಣನ್ ಅವರನ್ನು ನೇಮಕ ಮಾಡಿದೆ. 
ಡಾ.ಬೀಲಾ ರಾಜೇಶ್ ಮತ್ತು ರಾಧಾಕೃಷ್ಣನ್
ಡಾ.ಬೀಲಾ ರಾಜೇಶ್ ಮತ್ತು ರಾಧಾಕೃಷ್ಣನ್

ಚೆನ್ನೈ: ಕೊರೋನಾ ವೈರಸ್ ಪರಿಸ್ಥಿತಿ ನಿಭಾಯಿಸುವಲ್ಲಿ ವಿಫಲಗೊಂಡಿದ್ದಾರೆಂಬ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ವಲಯದಿಂದ ತೀವ್ರ ಟೀಕೆಗಳಿಗೆ ಗುರಿಯಾಗಿದ್ದ ಆರೋಗ್ಯ ಇಲಾಖೆಯ ಕಾರ್ಯದರ್ಶಿ ಡಾ.ಬೀಲಾ ರಾಜೇಶ್ ಅವರನ್ನು ತಮಿಳುನಾಡು ಸರ್ಕಾರ ವರ್ಗಾವಣೆ ಮಾಡಿದ್ದು, ಬೀಲಾ ಅವರ ಸ್ಥಾನಕ್ಕೆ ಡಾ.ಜೆ.ರಾಧಾಕೃಷ್ಣನ್ ಅವರನ್ನು ನೇಮಕ ಮಾಡಿದೆ. 
    
ರಾಧಾಕೃಷ್ಣನ್ ಅವರು ಚೆನ್ನೈನ ಕೋವಿಡ್ ನಿಗಾ ಉಸ್ತುವರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಅವರನ್ನೇ ಆರೋಗ್ಯ ಇಲಾಖೆಯ ಕಾರ್ಯದರ್ಶಿಯಾಗಿ ತಮಿಳುನಾಡು ಸರ್ಕಾರ ನೇಮಕ ಮಾಡಿದೆ. 

ಲೋಕಶಭಾ ಚುನಾವಣೆಗೂ ಮುನ್ನ 2019ರ ಫೆಬ್ರವರಿ ತಿಂಗಳಿನಲ್ಲಿ ಬೀಲಾ ಅವರನ್ನು ಆರೋಗ್ಯ ಇಲಾಖೆಯ ಕಾರ್ಯದರ್ಶಿಯಾಗಿ ನೇಮಕ ಮಾಡಲ್ಗಿತ್ತು. ಕೊರೋನಾ ವಿರುದ್ಧದ ರಾಜ್ಯಗಳ ಹೋರಾಟದಲ್ಲಿ ಬೀಲಾ ಅವರು ಮುಂಚೂಣಿಯಲ್ಲಿದ್ದರು. ಆದರೆ, ತಮಿಳುನಾಡಿನಲ್ಲಿ ಏಕಾಏಕಿ ಸೋಂಕು ಪ್ರಕರಣಗಳು ಏರಿಕೆಯಾದ ಹಿನ್ನೆಲೆಯಲ್ಲಿ ಭಾರೀ ಟೀಕೆಗಳು ಎದುರಾಗಿವೆ. 

ತಮಿಳುನಾಡಿನ ಚೆನ್ನೈನಲ್ಲಿ 27 ಸಾವಿರಕ್ಕೂ ಹೆಚ್ಚು ಸೋಂಕು ಪ್ರಕರಣಗಳು ಬೆಳಕಿಗೆ ಬಂದಿದ್ದು, ತಮಿಳುನಾಡಿನಲ್ಲಿ ಒಟ್ಟಾರೆಯಾಗಿ ಸೋಂಕಿತರ ಸಂಖ್ಯೆ 38,716ಕ್ಕೆ ಏರಿಕೆಯಾಗಿದೆ. ಈಗಾಗಲೇ ಚೆನ್ನೈ ನಗರ ಕೊರೋನಾ ಹಾಟ್'ಸ್ಪಾಟ್ ಆಗಿ ಪರಿವರ್ತನೆಗೊಂಡಿದೆ. 

ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ಕೊರೋನಾ ಪರಿಸ್ಥಿತಿ ನಿಭಾಯಿಸುವಲ್ಲಿ ಬೀಲಾ ಅವರು ವಿಫಲರಾಗಿದ್ದಾರೆಂಬ ಆರೋಪಗಳು ಕೇಳಿ ಬಂದಿದ್ದವು. 

ರಾಧಾಕೃಷ್ಣನ್ ಅವರು ಈ ಹಿಂದೆ 2012-19ರ ಅವಧಿಯವರೆಗೆ ಒಟ್ಟು 6 ವರ್ಷಗಳ ಕಾಲ ಆರೋಗ್ಯ ಇಲಾಖೆಯ ಕಾರ್ಯದರ್ಶಿಯಾಗಿದ್ದರು. 2004ರಲ್ಲಿ ಚೆನ್ನೈನಲ್ಲಿ ಸುನಾಮಿ ಎದುರಾಗಿದ್ದಾಗ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com