ದೇಶದ ಭದ್ರತೆ, ಘನತೆ ಸಂಪೂರ್ಣವಾಗಿ ಕಾಪಾಡಿಕೊಳ್ಳಲಾಗುತ್ತಿದ್ದು, ಕೇಂದ್ರಕ್ಕೆ ಕಾಂಗ್ರೆಸ್ ಪ್ರಮಾಣಪತ್ರದ ಅಗತ್ಯವಿಲ್ಲ: ನಖ್ವಿ

ದೇಶದ ಭದ್ರತೆ ಹಾಗೂ ಘನತೆ ಸಂಪೂರ್ಣವಾಗಿ ಕಾಪಾಡಿಕೊಳ್ಳಲಾಗುತ್ತಿದ್ದು, ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ ನೀಡುವ ಪ್ರಮಾಣಪತ್ರದ ಅಗತ್ಯವಿಲ್ಲ ಎಂದು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿಯವರು ಬುಧವಾರ ಹೇಳಿದ್ದಾರೆ. 
ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ
ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ

ನವದೆಹಲಿ: ದೇಶದ ಭದ್ರತೆ ಹಾಗೂ ಘನತೆ ಸಂಪೂರ್ಣವಾಗಿ ಕಾಪಾಡಿಕೊಳ್ಳಲಾಗುತ್ತಿದ್ದು, ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ ನೀಡುವ ಪ್ರಮಾಣಪತ್ರದ ಅಗತ್ಯವಿಲ್ಲ ಎಂದು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿಯವರು ಬುಧವಾರ ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ದೇಶ ಮುನ್ನಡೆಯುತ್ತಿದ್ದು, ಭಾರತದ ಭದ್ರತೆ ಹಾಗೂ ಘನತೆಯನ್ನು ಸಂಪೂರ್ಣವಾಗಿ ಕಾಪಾಡಲಾಗುತ್ತಿದೆ. ಇತಿಹಾಸ ಹಾಗೂ ಭೂಗೋಳಶಾಸ್ತ್ರದ ಬಗ್ಗೆ ಅರ್ಥಮಾಡಿಕೊಳ್ಳದೆಯೇ ಕಾಂಗ್ರೆಸ್ ನಾಯಕರು ಬೇಜವಾಬ್ದಾರಿತನದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕಾಂಗ್ರೆಸ್ ನಲ್ಲಿರುವ ಸಾಕಷ್ಟು ಜನರಿಗೇ ತಮ್ಮ ಪಕ್ಷದ ನಾಯಕರು ನೀಡುತ್ತಿರುವ ಹೇಳಿಕೆಗಳು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದೇಶದ ಭದ್ರತೆ ಹಾಗೂ ಘನತೆ ಸಂಪೂರ್ಣವಾಗಿ ಕಾಪಾಡಿಕೊಳ್ಳಲಾಗುತ್ತಿದ್ದು, ಕಾಂಗ್ರೆಸ್ ನಿಂದ ನಮಗೆ ಪ್ರಮಾಣಪತ್ರ ಬೇಕಿಲ್ಲ ಎಂದು ಹೇಳಿದ್ದಾರೆ. 

ಕಾಂಗ್ರೆಸ್ ಪಕ್ಷವು ಮಾನಸಿಕವಾಗಿ ಉತ್ತಮ ಕಾರ್ಯನಿರ್ವಹಿಸುತ್ತಿಲ್ಲ ಎಂಬಂತೆ ತೋರುತ್ತಿದೆ. ನಮ್ಮ ಕೊರೋನಾ ವಾರಿಯರ್ಸ್ ಹಾಗೂ ಸೈನಿಕರನ್ನು ಗೇಲಿ ಮಾಡಲು ಹೋಗಿ ನಗೆಪಾಟಲಿಗೀಡಾಗುತ್ತಿದ್ದಾರೆ. ಪ್ರತಿಪಕ್ಷ ಎಂದರೆ, ಕಾಂಗ್ರೆಸ್ ಒಂದೇ ಅಲ್ಲ. ಬಿಎಸ್'ಪಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಸೇರಿದಂತೆ ಹಲವು ಪಕ್ಷದ ನಾಯಕರು ಈ ಸಮಯದಲ್ಲಿ ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ. 

ಕಾಂಗ್ರೆಸ್ ಎಂದರೆ ಪ್ರತಿಪಕ್ಷವಲ್ಲ. ಒಂದು ಫೋಟೋ ಫ್ರೇಮ್ ನಲ್ಲಿರುವ ಕುಟುಂಬ. ಊಳಿಗಮಾನ್ಯದ ಕುಟುಂಬದ ಸದಸ್ಯರು ತಮ್ಮದೇ ಆದ ವಿರೋಧ ಹಾಗೂ ದನಿಯನ್ನು ಹೊಂದಿದ್ದಾರೆ. ಅದು ಒಂದು ರೀತಿ ಇಂದಿರಾ ಎಂದರೆ ಭಾರತ, ಭಾರತ ಎಂದರೆ ಇಂದಿರಾ ಹಾಗಿರುತ್ತದೆ. ಅದೇ ರೀತಿ ಕಾಂಗ್ರೆಸ್ ಎಂದರೆ ಪ್ರತಿಪಕ್ಷ ಮತ್ತು ಪ್ರತಿಪಕ್ಷ ಎಂದರೆ ಕಾಂಗ್ರೆಸ್ ಎಂಬಂತೆ ಚಿಂತಿಸುತ್ತಾರೆಂದು ವ್ಯಂಗ್ಯವಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com