ಕೊರೋನಾ ಪೀಡಿತಳಂತೆ ನಟನೆ ಮಾಡಿದ ಐಐಟಿ ಪಿಹೆಚ್ ಡಿ ವಿದ್ಯಾರ್ಥಿನಿ: ಎಂಥಾ ಕ್ಷುಲ್ಲಕ ಕಾರಣ ಗೊತ್ತೇ?

ಕೊರೋನಾ ಪೀಡಿತಳಂತೆ ಪಿಹೆಚ್ ಡಿ ವಿದ್ಯಾರ್ಥಿನಿಯೊಬ್ಬಳು ನಟನೆ ಮಾಡಿದ್ದು, ಪೊಲೀಸರು, ಆರೋಗ್ಯ ಅಧಿಕಾರಿಗಳು ಆಕೆಯನ್ನು ಎಚ್ಚರಿಕೆ ನೀಡಿ ಬಿಟ್ಟುಕಳಿಸಿರುವ ಘಟನೆ ಚೆನ್ನೈ ನಲ್ಲಿ ನಡೆದಿದೆ. 
ಕೊರೋನಾ ಪೀಡಿತಳಂತೆ ನಟನೆ ಮಾಡಿದ ಐಐಟಿ ಪಿಹೆಚ್ ಡಿ ವಿದ್ಯಾರ್ಥಿ: ಎಂಥಾ ಕ್ಷುಲ್ಲಕ ಕಾರಣ ಗೊತ್ತೇ?
ಕೊರೋನಾ ಪೀಡಿತಳಂತೆ ನಟನೆ ಮಾಡಿದ ಐಐಟಿ ಪಿಹೆಚ್ ಡಿ ವಿದ್ಯಾರ್ಥಿ: ಎಂಥಾ ಕ್ಷುಲ್ಲಕ ಕಾರಣ ಗೊತ್ತೇ?
Updated on

ಚೆನ್ನೈ: ಕೊರೋನಾ ಪೀಡಿತಳಂತೆ ಪಿಹೆಚ್ ಡಿ ವಿದ್ಯಾರ್ಥಿನಿಯೊಬ್ಬಳು ನಟನೆ ಮಾಡಿದ್ದು, ಪೊಲೀಸರು, ಆರೋಗ್ಯ ಅಧಿಕಾರಿಗಳು ಆಕೆಯನ್ನು ಎಚ್ಚರಿಕೆ ನೀಡಿ ಬಿಟ್ಟುಕಳಿಸಿರುವ ಘಟನೆ ಚೆನ್ನೈ ನಲ್ಲಿ ನಡೆದಿದೆ. 

ಚೆನ್ನೈ ನಿಂದ ಕೊಯಂಬತ್ತೂರಿಗೆ ಹೋಗುತ್ತಿದ್ದ ಬಸ್ ನಲ್ಲಿ ಪಿಹೆಚ್ ಡಿ ವಿದ್ಯಾರ್ಥಿನಿ ಹಾಗೂ ಆಕೆಯ ಸ್ನೇಹಿತರು ತೆರಳುತ್ತಿದ್ದರು. ಪೆರುಂಗಲತೂರ್ ದಾಟುತ್ತಿದ್ದಂತೆಯೇ ಪಿಹೆಚ್ ಡಿ ವಿದ್ಯಾರ್ಥಿನಿ ಹಾಗೂ ಆಕೆಯೊಂದಿಗೆ ಪ್ರಯಾಣಿಸುತ್ತಿದ್ದವರು ಬಸ್ ನ್ನು ನಿಲ್ಲಿಸುವಂತೆ ಡ್ರೈವರ್ ಗೆ ಆಗ್ರಹಿಸಿದ್ದಾರೆ. ಆದರೆ ಇದಕ್ಕೆ ಚಾಲಕ ನಿರಾಕರಿಸಿದ ಬೆನ್ನಲ್ಲೇ  ತಾನು ಕೊರೋನಾ ವೈರಸ್ ಪೀಡಿತೆ ಎಂದು ಘೋಷಿಸಿದ್ದಾಳೆ. ಬಸ್ ನಲ್ಲಿದ್ದವರು ಸ್ಥಳೀಯ ಅಧಿಕಾರಿಗಳಿಗೆ, ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಲುಪಿಸಿದ್ದಾರೆ. ತಕ್ಷಣವೇ ಎಚ್ಚೆತ್ತ ಆಡಳಿತ, ಚಾಲಕನಿಗೆ ಕರೆ ಮಾಡಿ ಬಸ್ ನಿಲ್ಲಿಸುವಂತೆ  ಮೆಲ್ಮರುವಾತೂರ್ ಬಳಿ ಬಸ್ ನ್ನು ತಡೆದು ನಿಲ್ಲಿಸಿದ್ದಾರೆ. ಆಕೆಯನ್ನು ಇಳಿಸಿ ಬೇರೆ ಪ್ರಯಾಣಿಕರಿಗೆ ಹ್ಯಾಂಡ್ ಸ್ಯಾನಿಟೈಸರ್ ಕೊಟ್ಟು ಪ್ರಯಾಣ ಮುಂದುವರೆಸುವಂತೆ ಹೇಳಿದ್ದಾರೆ. 

ಕೊನೆಗೆ ಕೊರೋನಾ ವೈರಸ್ ವೈದ್ಯಕೀಯ ಸೇವೆಗಳ ವಿಭಾಗಕ್ಕೆ ಬರುವಂತೆ ಸೂಚಿಸಿದರು ಆದರೆ ಆಕೆ ನಿರಾಕರಿಸಿದಾಗ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ ನಂತರ ಆಕೆ ಸಹ ಪ್ರಯಾಣಿಕರೊಂದಿಗೆ ಟ್ರುತ್ ಆರ್ ಡೇರ್ ಆಟ ಆಡುತ್ತಿದ್ದರು. ಇದರ ಭಾಗವಾಗಿ ತಾನು ಕೊರೋನಾ ವೈರಸ್ ಪೀಡಿತೆ ಎಂದು ಹೇಳಿಕೊಂಡಿದ್ದಾಗಿ ಬಾಯಿಬಿಟ್ಟಿದ್ದಾಳೆ, ಕೊನೆಗೆ ಬೇಷರತ್ ಕ್ಷಮಾಪಣ ಪತ್ರ ಬರೆಸಿಕೊಂಡು ಪೊಲೀಸರು ಆಕೆಯನ್ನು ಬಿಡುಗಡೆಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com