ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ತಮಿಳುನಾಡಿನಲ್ಲಿ ಕೊರೊನವೈರಸ್‍ ರೋಗಲಕ್ಷಣವಿದ್ದ ವ್ಯಕ್ತಿ ಸಾವು

ಕೊರೋನವೈರಸ್ ರೋಗಲಕ್ಷಣಗಳೊಂದಿಗೆ ಆಸರಿಪಲ್ಲಂನ ಕನ್ಯಾಕುಮಾರಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ (ಕೆಜಿಎಂಸಿಎಚ್) ಪ್ರತ್ಯೇಕ ವಾರ್ಡ್‌ಗೆ ದಾಖಲಾಗಿದ್ದ 40 ವರ್ಷದ ವ್ಯಕ್ತಿ ಗುರುವಾರ ಮೃತಪಟ್ಟಿದ್ದಾನೆ.

ಕನ್ಯಾಕುಮಾರಿ: ಕೊರೋನವೈರಸ್ ರೋಗಲಕ್ಷಣಗಳೊಂದಿಗೆ ಆಸರಿಪಲ್ಲಂನ ಕನ್ಯಾಕುಮಾರಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ (ಕೆಜಿಎಂಸಿಎಚ್) ಪ್ರತ್ಯೇಕ ವಾರ್ಡ್‌ಗೆ ದಾಖಲಾಗಿದ್ದ 40 ವರ್ಷದ ವ್ಯಕ್ತಿ ಗುರುವಾರ ಮೃತಪಟ್ಟಿದ್ದಾನೆ.

ಕನ್ಯಾಕುಮಾರಿಯ ಕೋಡಿಮುನೈ ಗ್ರಾಮದ ನಿವಾಸಿಯಾದ ರೋಗಿಯು ಮಾರ್ಚ್ 3 ರಂದು ಕುವೈತ್‌ನಿಂದ ತವರಿಗೆ ಮರಳಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಮೆದುಳು ಜ್ವರ ಮತ್ತು ಪಿತ್ತಜನಕಾಂಗದ ಕಾಯಿಲೆಯಿಂದ ಬಳಲುತ್ತಿದ್ದ ರೋಗಿಯನ್ನು ಬುಧವಾರ ಶೀತ ಮತ್ತು  ಉಸಿರಾಟದ ತೊಂದರೆಯೊಂದಿಗೆ ಆಸ್ಪತ್ರೆಯ ಕೊರೋನಾ ವಾರ್ಡ್‌ಗೆ ದಾಖಲಿಸಲಾಗಿತ್ತು.

ರೋಗಿಯ ರಕ್ತ ಮತ್ತು ಗಂಟಲು ದ್ರವ ಮಾದರಿಗಳನ್ನು ಪರೀಕ್ಷೆಗಾಗಿ ತಿರುನೆಲ್ವೇಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಲಾಗಿದ್ದರಿಂದ ಆತನನ್ನು ಪ್ರತ್ಯೇಕ ವಾರ್ಡ್‍ನಲ್ಲಿ ಇರಿಸಲಾಗಿತ್ತು. ವೈದ್ಯರು ಮಾದರಿಗಳ ಪರೀಕ್ಷಾ ವರದಿಗಳನ್ನು ಪಡೆಯುವ ಮೊದಲೇ ರೋಗಿ ಚಿಕಿತ್ಸೆಯ ಹೊರತಾಗಿಯೂ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬುಧವಾರ ಪ್ರತ್ಯೇಕ ವಾರ್ಡ್‌ನಲ್ಲಿ ಮೃತಪಟ್ಟ 73 ವರ್ಷದ ವ್ಯಕ್ತಿಯ ರಕ್ತ ಮತ್ತು ಗಂಟಲು ದ್ರವ ಮಾದರಿಗಳ ಪರಿಕ್ಷಾ ವರದಿಯನ್ನು ಕೆಜಿಎಚ್‌ಸಿಎಂ ಅಧಿಕಾರಿಗಳು ನಿರೀಕ್ಷಿಸುತ್ತಿದ್ದಾರೆ.ರೋಗಿಯು ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗಿದ್ದರು. ಉಸಿರಾಟದ ತೊಂದರೆ ಮತ್ತು ಶೀತ ಹೆಚ್ಚಾಗಿದ್ದರಿಂದ  ಅವರನ್ನು ಮಂಗಳವಾರ ಪ್ರತ್ಯೇಕ ವಾರ್ಡ್‍ನಲ್ಲಿ ಇರಿಸಲಾಗಿತ್ತು.

Related Stories

No stories found.

Advertisement

X
Kannada Prabha
www.kannadaprabha.com