ಮುಂಬೈ: ಲಾಕ್ ಡೌನ್ ವೇಳೆ ದಿನಸಿ ತರಲು ಮನೆಯಿಂದ ಹೊರಬಂದ ತಮ್ಮನನ್ನು ಹತ್ಯೆಗೈದ ಅಣ್ಣ!

ಕೊರೋನಾವೈರಸ್ ಕಾರಣ ಲಾಕ್ ಡೌನ್ ಜಾರಿಯಲ್ಲಿದ್ದರೂ ಮನೆಯಿಂದ ಹೊರಗಡೆ ಹೋಗುವ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ನಡೆದು ತನ್ನ ಸಹೋದರನನ್ನೇ ಕೊಲೆ ಮಾಡಿದ ವ್ಯಕ್ತಿಯೊಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು
ಪೊಲೀಸರು
Updated on: 

ಮುಂಬೈ: ಕೊರೋನಾವೈರಸ್ ಕಾರಣ ಲಾಕ್ ಡೌನ್ ಜಾರಿಯಲ್ಲಿದ್ದರೂ ಮನೆಯಿಂದ ಹೊರಗಡೆ ಹೋಗುವ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ನಡೆದು ತನ್ನ ಸಹೋದರನನ್ನೇ ಕೊಲೆ ಮಾಡಿದ ವ್ಯಕ್ತಿಯೊಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂಬೈಯ ಕಾಂಡಿವಾಲಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ರಾಜೇಶ್ ಲಕ್ಷ್ಮೀ ಠಾಕೂರ್ ಬಂಧಿತ ಆರೋಪಿಯಾಗಿದ್ದಾನೆ. ಬುಧವಾರ ಲಾಕ್ ಡೌನ್ ನಡುವೆಯೂ ದಿನಸಿ ಖರೀದಿಸಲು ತನ್ನ ಪತ್ನಿಯೊಂದಿಗೆ ಮನೆಯಿಂದ ಹೊರಬಂದ ತಮ್ಮ ದುರ್ಗೇಶ್ ಎಂಬವರನ್ನು ರಾಜೇಶ್ ಲಕ್ಷ್ಮಿ ಠಾಕೂರ್ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

 ದಂಪತಿಗಳು ಮಾರುಕಟ್ಟೆಯಿಂದ ಹಿಂದಿರುಗಿದಾಗ ಲಾಕ್ ಡೌನ್ ಮಧ್ಯೆಯೂ ದಿನಸಿ ವಸ್ತುಗಳನ್ನು ಖರೀದಿಸುವ ತುರ್ತು ಅಗತ್ಯವೇನಿತ್ತು ಎಂದು ದುರ್ಗೇಶ್ ನನ್ನು ಠಾಕೂರ್ ಪ್ರಶ್ನಿಸಿದ್ದಾನೆ. ಇದರಿಂದಾಗಿ ಪರಸ್ಪರ ವಾಗ್ವಾದ ನಡೆದಿದ್ದು, ರಾಜೇಶ್ ಪತ್ನಿಯ ಕಪಾಳಕ್ಕೆ ದುರ್ಗೇಶ್ ಹೊಡೆದಿದ್ದಾನೆ. ಇದರಿಂದ ಕ್ರೋಧಗೊಂಡ ರಾಜೇಶ್ ಅಡುಗೆ ಮನೆಯಿಂದ ಚಾಕು ತಂದು ದುರ್ಗೇಶ್ ಗೆ ಇರಿದಿದ್ದಾನೆ.

ತೀವ್ರ ರೀತಿಯ ಗಾಯಗಾಂಡ ದುರ್ಗೇಶ್ ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ. ಆರೋಪಿಯ ವಿರುದ್ಧ ಕೊಲೆ ಕೇಸ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com