ಕೊರೋನಾ ಲಾಕ್'ಡೌನ್ ಎಫೆಕ್ಟ್: ಶಾಸಕರು, ನೌಕರರ ಶೇ.75ರಷ್ಚು ವೇತನಕ್ಕೆ ಕತ್ತರಿ ಹಾಕಿದ ತೆಲಂಗಾಣ ಸರ್ಕಾರ

ದೇಶದಾದ್ಯಂತ ಕೊರೋನಾ ಲಾಕ್ ಡೌನ್ ಬೆನ್ನಲ್ಲೇ, ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ, ಶಾಸಕರ ವೇತನ ಹಾಗೂ ಪಿಂಚಣಿ ಮೊತ್ತದಲ್ಲಿ ಭಾರೀ ಕಡಿತ ಮಾಡುವುದಾಗಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಸರ್ಕಾರ ಘೋಷಣೆ ಮಾಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಹೈದರಾಬಾದ್: ದೇಶದಾದ್ಯಂತ ಕೊರೋನಾ ಲಾಕ್ ಡೌನ್ ಬೆನ್ನಲ್ಲೇ, ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ, ಶಾಸಕರ ವೇತನ ಹಾಗೂ ಪಿಂಚಣಿ ಮೊತ್ತದಲ್ಲಿ ಭಾರೀ ಕಡಿತ ಮಾಡುವುದಾಗಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಸರ್ಕಾರ ಘೋಷಣೆ ಮಾಡಿದೆ. 

ಪ್ರಗತಿ ಭವನದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನ ಕೈಗೊಂಡಿರುವ ತೆಲಂಗಾಣ ಸರ್ಕಾರಕೊರೋನಾ ಕರಿನೆರಳಿನ ಪರಿಣಾಮ ಸರ್ಕಾರದ ಬೊಕ್ಕಸಕ್ಕೆ ರೂ.12 ಸಾವಿರ ಕೋಟಿ ಖೋತಾ ಆಗಿದೆ. ಹೀಗಾಗಿ ನೌಕರರ ವೇತನ ಕತ್ತರಿಗೆ ನಿರ್ಧರಿಸಲಾಗಿದೆ ಎಂದು ಹೇಳಿದೆ. 

ಇದರನ್ವಯ, ಏಪ್ರಿಲ್ ತಿಂಗಳಿನಲ್ಲಿ ಸಿಎಂ, ಸಚಿರು, ಶಾಸಕರು, ಜನಪ್ರತಿನಿಧಿಗಳ ಶೇ.75ರಷ್ಟು ವೇತನ, ಐಎಎಸ್ ಅಧಿಕಾರಿಗಳ ಶೇ.60 ಇತರೆ ನೌಕರರ ಶೇ.50 ಹಾಗೂ ಡಿ ದರ್ಜೆ ಹಾಗೂ ಗುತ್ತಿಗೆ ನೌಕರರ ಶೇ.10ರಷ್ಟು ವೇತನವನ್ನು ಕಡಿತಗೊಳಿಸಲಾಗುತ್ತದೆ ಎಂದು ಸರ್ಕಾರ ಮಾಹಿತಿ ನೀಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com