ಕೊರೋನಾ ಗೆದ್ದ 12 ದಿನಗಳ ಹಸುಗೂಸು: ಪ್ರಕೃತಿ ಎಂದು ನಾಮಕರಣ

ಕೊರೋನಾ ಸೋಂಕಿನಿಂದ ಗುಣಮುಖವಾಗಿದ್ದ ಮಧ್ಯಪ್ರದೇಶದ 12 ದಿನದ ಹಸುಗೂಸಿಗೆ ಪ್ರಕೃತಿ ಎಂದು ನಾಮಕರಣ ಮಾಡಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಭೂಪಾಲ್: ಕೊರೋನಾ ಸೋಂಕಿನಿಂದ ಗುಣಮುಖವಾಗಿದ್ದ ಮಧ್ಯಪ್ರದೇಶದ 12 ದಿನದ ಹಸುಗೂಸಿಗೆ ಪ್ರಕೃತಿ ಎಂದು ನಾಮಕರಣ ಮಾಡಲಾಗಿದೆ.

9 ದಿನಗಳಾಗಿದ್ದಾಗ ಮಗುವಿಗೆ ಕೊರೋನಾ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಬಂದಿತ್ತು, ಶಿಶು, ಕೇವಲ ಒಂಬತ್ತು ದಿನಗಳವಳಿದ್ದಾಗ ಪರೀಕ್ಷೆಗೆ ತೆಗೆದುಕೊಂಡಿದ್ದಾಳೆ, ಮಾರಣಾಂತಿಕ ಸೋಂಕಿನಿಂದ ಚೇತರಿಸಿಕೊಂಡ ನಂತರ ಶುಕ್ರವಾರ ರಾತ್ರಿ ಮಗು ಮನೆಗೆ ಮರಳಿದೆ ಎಂದು ಜಿಲ್ಲೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಏಪ್ರಿಲ್ 7 ರಂದು ಜನಿಸಿದ್ದು , ಆರೋಗ್ಯ ಕಾರ್ಯಕರ್ತೆಯಿಂದಾಗಿ ಮಗುವಿಗೆ ಸೋಂಕು ತಗುಲಿದ್ದು,ಮಗುವಿಗೆ ಸೋಂಕು ತಗಗುಲಿತ್ತು.

ಮಗು ಸದ್ಯ ಗುಣಮುಖವಾಗಿದ್ದು. ಕಳೆದ ರಾತ್ರಿ ಮನೆಗೆ ಕರೆದುಕೊಂಡು ಬಂದಿದ್ದಾಗಿ ಮಗುವಿನ ತಂದೆ ತಿಳಿಸಿದ್ದಾರೆ. ಜೊತೆಗೆ ಮಗುವಿಗೆ ಪ್ರಕೃತಿ ಎಂದು ನಾಮಕರಣ ಮಾಡಿದ್ದಾಗಿ ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com