ವಂದೇ ಭಾರತ್ ಮಿಷನ್: 15 ರಿಂದ ಎರಡನೇ ಹಂತದ ಕಾರ್ಯಾಚರಣೆ

ಲಾಕ್ ಡೌನ್, ಕರೋನ ಹಾವಳಿಯ ಕಾರಣದಿಂದ ವಿದೇಶಗಳಲ್ಲಿ ತೊಂದರೆಗೆ ಸಿಲುಕಿರುವ ಭಾರತೀಯರ ರಕ್ಷಣೆಗಾಗಿ ವಂದೇ ಭಾರತ್ ಮಿಷನ್ ಹೆಸರಿನಲ್ಲಿ ಇದೇ 15 ರಿಂದ ಎರಡನೇ ಹಂತದಲ್ಲಿ ಮತ್ತೆ 7 ದೇಶಗಳಿಂದ ಭಾರತೀಯರನ್ನು ಸುರಕ್ಷಿತವಾಗಿ ವಾಪಾಸ್ ಕರೆತರಲು ಸರ್ಕಾರ ನಿರ್ಧರಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಲಾಕ್ ಡೌನ್, ಕರೋನ ಹಾವಳಿಯ ಕಾರಣದಿಂದ ವಿದೇಶಗಳಲ್ಲಿ ತೊಂದರೆಗೆ ಸಿಲುಕಿರುವ ಭಾರತೀಯರ ರಕ್ಷಣೆಗಾಗಿ ವಂದೇ ಭಾರತ್ ಮಿಷನ್ ಹೆಸರಿನಲ್ಲಿ ಇದೇ 15 ರಿಂದ ಎರಡನೇ ಹಂತದಲ್ಲಿ ಮತ್ತೆ 7 ದೇಶಗಳಿಂದ ಭಾರತೀಯರನ್ನು ಸುರಕ್ಷಿತವಾಗಿ ವಾಪಾಸ್ ಕರೆತರಲು ಸರ್ಕಾರ ನಿರ್ಧರಿಸಿದೆ. 

ಈ ಹಂತದಲ್ಲಿ ರಷ್ಯಾ, ಜರ್ಮನಿ, ಥೈಲ್ಯಾಂಡ್, ಫ್ರಾನ್ಸ್, ಸ್ಪೇನ್, ಉಜ್ಜಕಿಸ್ತಾನ, ಖಜಕಿಸ್ತಾನದಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಸಿದ್ದವಾಗುತ್ತಿದೆ. ಸುಮಾರು 60 ಸಾವಿರ ಭಾರತೀಯರು ದೇಶಕ್ಕೆ ಕರೆದೊಯ್ಯುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. 
ಈಗಾಗಲೇ ಗಲ್ಫ್ ರಾಷ್ಟ್ರಗಳು ಸೇರಿದಂತೆ ವಿವಿಧೆಡೆ ಸಿಲುಕಿದ್ದ ನೂರಾರು ಪ್ರಯಾಣಿಕರನ್ನು ಯಶಸ್ವಿಯಾಗಿ ಕರೆತರಲಾಗಿದ್ದು, ಎಲ್ಲರಿಗೂ ಆರೋಗ್ಯ ತಪಾಸಣೆ ನಡೆಸಿ ಕ್ವಾರೆಂಟೈನ್ ಗೆ ಒಳಪಡಿಸಲಾಗುತ್ತಿದೆ. 

12 ದೇಶಗಳಿಂದ 64 ವಿಮಾನ, 11 ಹಡಗುಗಳ ಮೂಲಕ ಅನಿವಾಸಿ ಭಾರತೀಯರನ್ನು ಕರೆತರಲಾಗುತ್ತಿದೆ. ಮಾಲ್ಡೀವ್ಸ್ನಲ್ಲಿರುವ ಭಾರತೀಯರನ್ನು ಸಮುದ್ರ ಸೇತು ಮೂಲಕ ಐಎನ್ಎಸ್ ಜಲಾಶ್ವ ಹಡಗಿನ ಮೂಲಕ ಕರೆತರಲಾಗುತ್ತಿದೆ. 

ದುಬೈ ಸಿಂಗಾಪುರ್, ಅಬುಧಾಬಿ ಮುಂತಾದ ದೇಶಗಳಿಂದ ಭಾರತೀಯರನ್ನು ಕರೆತರಲಾಗಿದೆ. ಇದೆ 14ರವರೆಗೂ ಈ ರಕ್ಷಣಾ ಕಾರ್ಯಾಚರಣೆ ನಡೆಯಲಿದ್ದು, ಇದರ ಮುಂದುವರಿದ ಭಾಗವಾಗಿ ಇದೆ 15 ರಿಂದ ಎರಡನೆ ಹಂತದ ವಂದೇ ಭಾರತ್ ಮಿಷನ್ ಪ್ರಾರಂಭವಾಗಲಿದೆ. ಈ ಹಂತದಲ್ಲೂ 15 ಸಾವಿರ ಭಾರತೀಯರನ್ನು ತಾಯಿನಾಡಿಗೆ ಕರೆತರಲು ತಯಾರಿ, ಅಗತ್ಯ ಸಿದ್ದತೆ ನಡೆಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com