ಸವಾಲಿಗೆ ತಕ್ಕ ಪ್ರತ್ಯುತ್ತರ: ಗಡಿಯಲ್ಲಿ ಹಾರಾಡಿದ ಚೀನಾ ಹೆಲಿಕಾಪ್ಟರ್‌ಗಳು, ರಂಗಕ್ಕಿಳಿದ ಭಾರತದ ಯುದ್ಧ ವಿಮಾನಗಳು!

ಕೊರೋನಾ ಮಹಾಮಾರಿಯನ್ನು ಬಿಟ್ಟಿದ್ದಲ್ಲದೆ ಚೀನಾ ಮತ್ತೊಮ್ಮೆ ಅಕ್ರಮಣಕಾರಿ ಕೃತ್ಯದಲ್ಲಿ ಭಾಗಿಯಾಗಿದೆ. ಇತ್ತೀಚಿಗೆ ಸಿಕ್ಕಿಂನ ನಾಕು ಲಾ ಪಾಸ್ ವಲಯದಲ್ಲಿ ಭಾರತೀಯ ಸೇನೆಯೊಂದಿಗೆ ಘರ್ಷಣೆಗೆ ಇಳಿದಿದ್ದ ಚೀನಾ ಪಡೆಗಳು, ಮತ್ತೊಮ್ಮೆ ಪ್ರಚೋದಾನಾತ್ಮಕ ಕೃತ್ಯ ನಡೆಸಿವೆ.
ಚೀನಾ ಹೆಲಿಕಾಫ್ಟರ್-ಐಎಎಫ್-ಯುದ್ಧ ವಿಮಾನ
ಚೀನಾ ಹೆಲಿಕಾಫ್ಟರ್-ಐಎಎಫ್-ಯುದ್ಧ ವಿಮಾನ
Updated on

ಲಡಾಖ್: ಕೊರೋನಾ ಮಹಾಮಾರಿಯನ್ನು ಬಿಟ್ಟಿದ್ದಲ್ಲದೆ ಚೀನಾ ಮತ್ತೊಮ್ಮೆ ಅಕ್ರಮಣಕಾರಿ ಕೃತ್ಯದಲ್ಲಿ ಭಾಗಿಯಾಗಿದೆ. ಇತ್ತೀಚಿಗೆ ಸಿಕ್ಕಿಂನ ನಾಕು ಲಾ ಪಾಸ್ ವಲಯದಲ್ಲಿ ಭಾರತೀಯ ಸೇನೆಯೊಂದಿಗೆ ಘರ್ಷಣೆಗೆ ಇಳಿದಿದ್ದ ಚೀನಾ ಪಡೆಗಳು, ಮತ್ತೊಮ್ಮೆ ಪ್ರಚೋದಾನಾತ್ಮಕ ಕೃತ್ಯ ನಡೆಸಿವೆ.

ವಾಸ್ತವ ಗಡಿ ರೇಖೆಯ ಅತಿ ಸಮೀಪದಲ್ಲಿ ಲಡಾಕ್ ವಾಯು ಪ್ರದೇಶಗಳ ಮೇಲೆ ಚೀನಾ ಸೇನಾ ಹೆಲಿಕಾಪ್ಟರ್‌ಗಳು ಹಾರಾಟ ನಡೆಸಿವೆ. ಇದನ್ನು ಗಮನಿಸಿದ ಕೂಡಲೇ ಜಾಗೃತಗೊಂಡ ಭಾರತೀಯ ವಾಯುಪಡೆ ತನ್ನ ಯುದ್ದ ವಿಮಾನಗಳನ್ನು ತಕ್ಷಣ ಗಸ್ತಿಗೆ ರವಾನಿಸಿದೆ. ಈ ಘಟನೆ ಕಳೆದ ವಾರ ನಡೆದಂತೆ ಕಂಡುಬರುತ್ತಿದೆ.

ವಾಸ್ತ ಗಡಿ ರೇಖೆ (ಎಲ್ಎಸಿ) ಬಳಿ ಚೀನಾದ ಸೇನಾ ಹೆಲಿಕಾಪ್ಟರ್ಗಳು ಹಾರಾಡಿದ ತಕ್ಷಣ ಭಾರತ ವಾಯುಪಡೆ ಕೂಡಲೇ ಸ್ಪಂದಿಸಿದೆ. ಕೂಡಲೇ ಯುದ್ದ ವಿಮಾನಗಳನ್ನು ಗಸ್ತಿಗೆ ರವಾನಿಸಿರುವುದು ಇದೇ ಮೊದಲ ಬಾರಿ ಎಂದು ರಕ್ಷಣಾ ತಜ್ಞರು ಹೇಳುತ್ತಿದ್ದಾರೆ.
 
ಸುಖೋಯ್ 30 ಏಮ್ ಕೆ ಐ ಫೈಟರ್ ಏರ್ ಕ್ರಾಪ್ಟರ್ ಗಳ ಮೂಲಕ ಗಸ್ತು ನಡೆಸುವ ಮೂಲಕ ಭಾರತೀಯ ವಾಯುಪಡೆ ಚೀನಾ ಸೇನೆಗೆ ಬಲಿಷ್ಠ ಪ್ರತ್ಯುತ್ತರ ನೀಡಿದೆ.

ವಾರದ ಹಿಂದೆ ಸಿಕ್ಕಿಂ ನಾಕು ಲಾ ಪಾಸ್ ವಲಯದ ಬಳಿ ಚೀನಾ ಸೇನೆ ಭಾರತದ ಯೋಧರೊಂದಿಗೆ ಘರ್ಷಣೆಗಿಳಿದಿತ್ತು. ಈ ಘಟನೆಯಲ್ಲಿ ಕೆಲವರಿಗೆ ಗಾಯಗಳೂ ಆಗಿವೆ ಎಂದು ವರದಿಯಾಗಿದೆ. ಅಷ್ಟರೊಳಗೆ ಏಲ್ಎಸಿ ಬಳಿ ಚೀನಾ ಹೆಲಿಕಾಪ್ಟರ್ ಗಳು ಹಾರಾಟ ನಡೆಸಿರುವುದನ್ನು ರಕ್ಷಣಾ ರಂಗದ ತಜ್ಞರು ಲಘುವಾಗಿ ಪರಿಗಣಿಸಿಲ್ಲ , ಇದೊಂದು ಗಂಭೀರ ಬೆಳವಣಿಯಾಗಿದ್ದು, ಭಾರತ ಜಾಗೃತವಾಗಿರಬೇಕು ಎಂದು ಸೂಚಿಸಿದ್ದಾರೆ.

ಅತ್ತ ... ಹಂದ್ವಾರಾ ಘಟನೆ ವಿರುದ್ದ ಎಲ್ಲಿ ಭಾರತ ತನ್ನ ಮೇಲೆ ಪ್ರತಿಕಾರ ತೀರಿಸಿಕೊಳ್ಳಲಿದೆಯೋ..? ಎಂಬ ಭಯದಿಂದ ಪಾಕಿಸ್ತಾನ ಯುದ್ದವಿಮಾನಗಳು ಇತ್ತೀಚಿಗೆ ಗಡಿಗಳ ಬಳಿ ಹಾರಾಟ ನಡೆಸಿದ್ದವು. ಈ ಹಿನ್ನಲೆಯಲ್ಲಿ ಚೀನಾ ಸೇನಾ ಪಡೆಗಳ ಕ್ರಮ ಕೂಡಾ ಭಾರತೀಯ ಸೇನೆ ನಿಕಟವಾಗಿ ಎಚ್ಚರಿಕೆಯಿಂದ ಗಮನಿಸಿ ಜಾಗ್ರತೆಯಿಂದ ವ್ಯವಹರಿಸುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com