4 ಕೊರೋನಾ ಲಸಿಕೆ ಭಾರತದಲ್ಲಿ ಶೀಘ್ರವೇ ಕ್ಲಿನಿಕಲ್ ಟ್ರೈಲ್ ಹಂತಕ್ಕೆ: ಹರ್ಷವರ್ಧನ್

 4 ಕೊರೋನಾಗೆ ಲಸಿಕೆ ಭಾರತದಲ್ಲಿ ಶೀಘ್ರವೇ ಕ್ಲಿನಿಕಲ್ ಟ್ರೈಲ್ ಹಂತಕ್ಕೆ ತಲುಪಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ. 
ಹರ್ಷವರ್ಧನ್
ಹರ್ಷವರ್ಧನ್
Updated on: 

ನವದೆಹಲಿ: 4 ಕೊರೋನಾಗೆ ಲಸಿಕೆ ಭಾರತದಲ್ಲಿ ಶೀಘ್ರವೇ ಕ್ಲಿನಿಕಲ್ ಟ್ರೈಲ್ ಹಂತಕ್ಕೆ ತಲುಪಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ. 

ಕೊರೋನಾ ತಡೆಗಾಗಿ ಸಿದ್ಧಪಡಿಸಲಾಗಿರುವ 14 ಲಸಿಕೆಗಳ ಪೈಕಿ 4 ಲಸಿಕೆಗಳು ಶೀಘ್ರವೇ ಕ್ಲಿನಿಕಲ್ ಟ್ರೈಲ್ ಗೆ ಹಂತಕ್ಕೆ ಹೋಗಲಿವೆ ಎಂದು ಬಿಜೆಪಿ ನಾಯಕ ಜಿವಿಎಲ್ ನರಸಿಂಹ ರಾವ್ ಜೊತೆಗೆ ನಡೆಸಿದ ಸಾಮಾಜಿಕ ಜಾಲತಾಣ ಸಂವಹನದಲ್ಲಿ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ. 

ಆರೋಗ್ಯ ಸಚಿವರೊಂದಿಗೆ ನಡೆದ ಮಾತುಕತೆಯಲ್ಲಿ ಬಿಜೆಪಿ ನಾಯಕ ನರಸಿಂಹ ರಾವ್, ದೇಶದಲ್ಲಿ ಕೊರೋನಾ ತಡೆಗೆ ಸಿದ್ಧವಾಗುತ್ತಿರುವ ಲಸಿಕೆಗಳ ಬಗ್ಗೆ ಕೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಹರ್ಷವರ್ಧನ್, ವಿಶ್ವಾದ್ಯಂತ ಕೋವಿಡ್-19 ತಡೆಗೆ 100 ಕ್ಕೂ ಹೆಚ್ಚಿನ ಲಸಿಕೆಗಳು ವಿವಿಧ ಹಂತಗಳ ಪ್ರಯೋಗಗಳಲ್ಲಿವೆ. ವಿಶ್ವ ಆರೋಗ್ಯ ಸಂಸ್ಥೆ ಈ ಪ್ರಯತ್ನಗಳಿಗೆ ಸಹಕರಿಸುತ್ತಿದೆ. ಭಾರತವೂ ಸಕ್ರಿಯವಾಗಿ ಇದಕ್ಕೆ ಕೊಡುಗೆ ನೀಡುತ್ತಿದೆ. ಈಗಲೇ ಈ ಕೊರೋನಾ ರೋಗಕ್ಕೆ ಲಸಿಕೆ ಮದ್ದು ಸಿಗುತ್ತದೆ ಎಂಬುದು ಖಾತ್ರಿ ಇಲ್ಲ. ಕೊರೋನಾಗೆ ಲಸಿಕೆ ಕಂಡುಹಿಡಿಯುವುದು ದೀರ್ಘಕಾಲಿಕ ಕೆಲಸ ಎಂದು ಹರ್ಷವರ್ಧನ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com