ಕೋವಿಡ್-19ನಿಂದ ಅತಿ ಹೆಚ್ಚು ಅಪಾಯಕ್ಕೀಡಾಗಿರುವ ನಗರ ಬೆಂಗಳೂರು: ಹೆಚ್ಚಾಗುತ್ತಲೇ ಇದೆ ಸೋಂಕಿತರ ಸಂಖ್ಯೆ

ಕಳೆದ ಅಕ್ಟೋಬರ್ 8ರಂದು ಬೆಂಗಳೂರಿನಲ್ಲಿ 5 ಸಾವಿರದ 121 ಕೋವಿಡ್-19 ಕೇಸುಗಳು ದಾಖಲಾಗಿವೆ. 5 ಸಾವಿರಕ್ಕಿಂತಲೂ ಹೆಚ್ಚು ಕೊರೋನಾ ಕೇಸುಗಳು ಬೆಂಗಳೂರಿನಲ್ಲಿ ಸತತ ಮೂರು ದಿನಗಳು ದಾಖಲಾದವು. ಬೆಂಗಳೂರು ನಗರದಲ್ಲಿ ಸತತವಾಗಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ತಜ್ಞರು ಆತಂಕಕ್ಕೀಡಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಕಳೆದ ಅಕ್ಟೋಬರ್ 8ರಂದು ಬೆಂಗಳೂರಿನಲ್ಲಿ 5 ಸಾವಿರದ 121 ಕೋವಿಡ್-19 ಕೇಸುಗಳು ದಾಖಲಾಗಿವೆ. 5 ಸಾವಿರಕ್ಕಿಂತಲೂ ಹೆಚ್ಚು ಕೊರೋನಾ ಕೇಸುಗಳು ಬೆಂಗಳೂರಿನಲ್ಲಿ ಸತತ ಮೂರು ದಿನಗಳು ದಾಖಲಾದವು. ಬೆಂಗಳೂರು ನಗರದಲ್ಲಿ ಸತತವಾಗಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ತಜ್ಞರು ಆತಂಕಕ್ಕೀಡಾಗಿದ್ದಾರೆ.

ವಿಶ್ವದಲ್ಲಿ ಕೊರೋನಾ ಪ್ರಕರಣದಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ಸದ್ಯ ಕೊರೋನಾ ಸೋಂಕಿತರ ಸಂಖ್ಯೆ 70 ಲಕ್ಷ ಗಡಿ ದಾಟಿದೆ. 1 ಲಕ್ಷದ 8 ಸಾವಿರದ 334 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ದೇಶದ ರಾಜಧಾನಿ ದೆಹಲಿ, ನಂತರ ಪುಣೆ, ಥಾಣೆಯಂತಹ ನಗರಗಳಲ್ಲಿ ಇತ್ತೀಚೆಗೆ ಕೊರೋನಾ ಪ್ರಕರಣಗಳು ಕಡಿಮೆಯಾಗುತ್ತಿದ್ದರೆ ಬೆಂಗಳೂರು, ಮುಂಬೈ, ಕೋಲ್ಕತ್ತಾಗಳಲ್ಲಿ ಹೆಚ್ಚಾಗುತ್ತಿದೆ. ನಗರಗಳ ಪೈಕಿ ದೇಶದಲ್ಲಿ ಸದ್ಯ ಪುಣೆ ಮೊದಲಿನ ಸ್ಥಾನದಲ್ಲಿದ್ದು ಬೆಂಗಳೂರು ಮೂರನೇ ಸ್ಥಾನದಲ್ಲಿದೆ. ಪುಣೆ ನಗರದಲ್ಲಿ 3 ಲಕ್ಷದ 14 ಸಾವಿರದ 118 ಕೋವಿಡ್ ಪ್ರಕರಣಗಳಿದ್ದು ಬೆಂಗಳೂರು ಅದನ್ನು ಸದ್ಯದಲ್ಲಿಯೇ ಹಿಂದಿಕ್ಕುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಬೆಂಗಳೂರಿನಲ್ಲಿ ಪುಣೆಗಿಂತ ಸದ್ಯಕ್ಕೆ ಕೊರೋನಾ ಸೋಂಕಿಗೆ ಸಾಯುವವರ ಸಂಖ್ಯೆ ಕಡಿಮೆಯಿದೆ. ಇದುವರೆಗೆ ನಗರದಲ್ಲಿ 3 ಸಾವಿರದ 320 ಮಂದಿ ಮೃತಪಟ್ಟಿದ್ದಾರೆ. ಕಳೆದ ಏಳು ದಿನಗಳಲ್ಲಿ ಬೆಂಗಳೂರಿನಲ್ಲಿ ಸರಾಸರಿ 39 ಮಂದಿ ಮೃತಪಟ್ಟಿದ್ದಾರೆ. ಮುಂಬೈಯಲ್ಲಿ ಸರಾಸರಿ 47 ಸಾವುಗಳು ಸಂಭವಿಸಿದ್ದವು. ಅದಕ್ಕೆ ತೀರಾ ಹತ್ತಿರದಲ್ಲಿಯೇ ಬೆಂಗಳೂರು ಇದೆ.

ಮುಂಬೈಯಲ್ಲಿ ಏಪ್ರಿಲ್-ಮೇ ತಿಂಗಳಿನಿಂದ ಸತತ ಏರಿಕೆ ಕಂಡುಬರುತ್ತಿದ್ದು ಕಡಿಮೆಯಾಗಲೇ ಇಲ್ಲ. ಸದ್ಯ ಅಲ್ಲಿ 2 ಲಕ್ಷದ 27 ಸಾವಿರದ 276 ಕೊರೋನಾ ಪ್ರಕರಣಗಳಿದ್ದು ಪ್ರತಿದಿನ ಸರಾಸರಿ 2 ಸಾವಿರದ 800 ಹೊಸ ಕೇಸುಗಳು ವರದಿಯಾಗಿವೆ.

ಅಧಿಕ ಜನಸಾಂದ್ರತೆಯಿರುವ ದೆಹಲಿ, ಪುಣೆ ಮತ್ತು ಥಾಣೆ ನಗರಗಳಲ್ಲಿ ಕೊರೋನಾ ಪ್ರಕರಣಗಳು ಕಡಿಮೆಯಾಗುತ್ತಿದ್ದರೆ ಬೃಹತ್ ನಗರಗಳಾದ ಬೆಂಗಳೂರು, ಮುಂಬೈ ಮತ್ತು ಕೋಲ್ಕತ್ತಾಗಳಲ್ಲಿ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ ಎಂದು ಡಾ ರಿಜೊ ಎಂ ಜಾನ್ ಹೇಳುತ್ತಾರೆ. ಇದರರ್ಥ ದೇಶದ ಹಲವು ನಗರಗಳಲ್ಲಿ ಇನ್ನೂ ಕೊರೋನಾ ಹರಡುವಿಕೆ ಆರಂಭಿಕ ಹಂತದಲ್ಲಿಯೇ ಇದೆ.

ನಗರಗಳಲ್ಲಿ ನೆಲೆಸಿರುವ ಜನರ ದೇಹದಲ್ಲಿ ರೋಗನಿರೋಧಕ ಶಕ್ತಿ, ಆರೋಗ್ಯವನ್ನು ಕೊರೋನಾ ಹರಡುವಿಕೆ ಅವಲಂಬಿಸಿದೆ ಎನ್ನುತ್ತಾರೆ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡಾ.ಅಮಿತಾಬ್ ಬ್ಯಾನರ್ಜಿ. ನಗರಗಳಲ್ಲಿ ಎಲ್ಲಾ ಚಟುವಟಿಕೆಗಳು ಹೆಚ್ಚಾಗುತ್ತಿರುವುದು ಸೋಂಕು ಹರಡಲು ಕಾರಣವಾಗಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com