ಕಾಂಗ್ರೆಸ್ ಗೆ ಸಂಕಷ್ಟ: ಕಮಲ್ ನಾಥ್‌ರನ್ನು ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಕಿತ್ತೊಗೆದ ಚುನಾವಣಾ ಆಯೋಗ!

ಬಿಜೆಪಿ ಶಾಸಕಿಯನ್ನು ಐಟಂ ಎಂದು ಹೇಳುವ ಮೂಲಕ ವಿವಾದಕ್ಕೆ ಸಿಲುಕಿದ್ದ ಕಾಂಗ್ರೆಸ್ ಮಾಜಿ ಸಿಎಂ ಕಮಲ್ ನಾಥ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಕಮಲ್ ನಾಥ್
ಕಮಲ್ ನಾಥ್
Updated on

ನವದೆಹಲಿ: ಬಿಜೆಪಿ ಶಾಸಕಿಯನ್ನು ಐಟಂ ಎಂದು ಹೇಳುವ ಮೂಲಕ ವಿವಾದಕ್ಕೆ ಸಿಲುಕಿದ್ದ ಕಾಂಗ್ರೆಸ್ ಮಾಜಿ ಸಿಎಂ ಕಮಲ್ ನಾಥ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. 

ಮಧ್ಯಪ್ರದೇಶದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಟಾರ್ ಪ್ರಚಾರಕ ಪಟ್ಟಿಯಿಂದ ಕಮಲ್ ನಾಥ್ ರನ್ನು ಚುನಾವಣಾ ಆಯೋಗ ತೆಗೆದು ಹಾಕಿದೆ. 

ಬಿಜೆಪಿ ಶಾಸಕಿ ಇಮ್ರತಿ ದೇವಿ ಅವರನ್ನು ಐಟಂ ಎಂದು ಕಮಲ್ ನಾಥ್ ಅವರು ಕರೆದಿದ್ದು ಈ ಹೇಳಿಕೆ ಕಾಂಗ್ರೆಸ್ ಗೆ ತೀವ್ರ ಮುಜುಗರ ತಂದಿತ್ತು. 

ಚುನಾವಣಾ ನೀತಿ ಸಂಹಿತೆಯನ್ನು ಪದೇ ಪದೇ ಉಲ್ಲಂಘಿಸಿದ ಆರೋಪದ ಮೇಲೆ ಕಮಲ್ ನಾಥ್ ರನ್ನು ಪ್ರಚಾರಕರ ಪಟ್ಟಿಯಿಂದ ತೆಗೆದಿರುವುದಾಗಿ ಚುನಾವಣಾ ಆಯೋಗ ತಿಳಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com