ತಬ್ಲಿಘಿ ಕಾರ್ಯಕ್ರಮಕ್ಕೆ ಓರ್ವ ಐಎಎಫ್ ಸಿಬ್ಬಂದಿ ಭೇಟಿ? 3 ಮಂದಿ ಕ್ವಾರಂಟೈನ್ ಗೆ, ತನಿಖೆ! 

ಲಾಕ್ ಡೌನ್ ನ್ನೂ ಲೆಕ್ಕಿಸದೇ ತಬ್ಲಿಘಿ ಜಮಾತ್‌ ಕಾರ್ಯಕ್ರಮ ನಡೆಯುತ್ತಿದ್ದ ದೆಹಲಿಯ ನಿಜಾಮುದ್ದೀನ್ ಮರ್ಕಜ್ ಮಸೀದಿ ಪ್ರದೇಶಕ್ಕೆ ಅದೇ ದಿನ ಭಾರತೀಯ ವಾಯುಪಡೆ (ಐಎಎಫ್) ನ ಓರ್ವ ಸಿಬ್ಬಂದಿ ಭೇಟಿ ನೀಡಿದ್ದರು. ಪರಿಣಾಮ ಈಗ ಇಂಡಿಯನ್ ಏರ್ ಫೋರ್ಸ್ ನ ಮೂವರು ಸಿಬ್ಬಂದಿಗಳನ್ನು ಕ್ವಾರಂಟೈನ್ ಗೆ ಕಳಿಸಲಾಗಿದೆ. 
ತಬ್ಲಿಘಿ ಕಾರ್ಯಕ್ರಮಕ್ಕೆ ಓರ್ವ ಐಎಎಫ್ ಸಿಬ್ಬಂದಿ ಭೇಟಿ? 3 ಮಂದಿ ಕ್ವಾರಂಟೈನ್ ಗೆ, ತನಿಖೆ!
ತಬ್ಲಿಘಿ ಕಾರ್ಯಕ್ರಮಕ್ಕೆ ಓರ್ವ ಐಎಎಫ್ ಸಿಬ್ಬಂದಿ ಭೇಟಿ? 3 ಮಂದಿ ಕ್ವಾರಂಟೈನ್ ಗೆ, ತನಿಖೆ!

ನವದೆಹಲಿ: ಲಾಕ್ ಡೌನ್ ನ್ನೂ ಲೆಕ್ಕಿಸದೇ ತಬ್ಲಿಘಿ ಜಮಾತ್‌ ಕಾರ್ಯಕ್ರಮ ನಡೆಯುತ್ತಿದ್ದ ದೆಹಲಿಯ ನಿಜಾಮುದ್ದೀನ್ ಮರ್ಕಜ್ ಮಸೀದಿ ಪ್ರದೇಶಕ್ಕೆ ಅದೇ ದಿನ ಭಾರತೀಯ ವಾಯುಪಡೆ (ಐಎಎಫ್) ನ ಓರ್ವ ಸಿಬ್ಬಂದಿ ಭೇಟಿ ನೀಡಿದ್ದರು. ಪರಿಣಾಮ ಈಗ ಇಂಡಿಯನ್ ಏರ್ ಫೋರ್ಸ್ ನ ಮೂವರು ಸಿಬ್ಬಂದಿಗಳನ್ನು ಕ್ವಾರಂಟೈನ್ ಗೆ ಕಳಿಸಲಾಗಿದೆ. 

ಈ ಮಾಹಿತಿಯನ್ನು ಸ್ವತಃ ಐಎಎಫ್ ನ ವಕ್ತಾರರು ಸ್ಪಷ್ಟಪಡಿಸಿದ್ದಾರೆ. ಜಮಾತ್ ಸಭೆ ನಡೆಯುತ್ತಿದ್ದಾಗಲೇ ನಿಜಾಮುದ್ದೀನ್ ಪ್ರದೇಶಕ್ಕೆ ಭೇಟಿ ನೀಡಿದ್ದರು. 

ತಬ್ಲಿಘಿ ಸಭೆಯಲ್ಲಿ ಭಾರತೀಯ ವಾಯುಪಡೆ ಸಿಬ್ಬಂದಿ ಭಾಗಿಯಾಗಿದ್ದರೇ ಇಲ್ಲವೇ ಎಂಬ ಬಗ್ಗೆ ಐಎಎಫ್ ನಿಂದ ತನಿಖೆ ನಡೆಯುತ್ತಿದೆ ಎಂದು ವಕ್ತಾರರು ತಿಳಿಸಿದ್ದಾರೆ. 

ಮಸೀದಿ ಇದ್ದ ಸ್ಥಳಕ್ಕೆ ಭೇಟಿ ನೀಡಿದ್ದ ವ್ಯಕ್ತಿ ವಾಪಸ್ಸಾದ ಬಳಿಕ ಇಬ್ಬರು ಸಿಬ್ಬಂದಿಗಳೊಂದಿಗೆ ಸಂಪರ್ಕದಲ್ಲಿದ್ದ, ಮೂವರನ್ನೂ ಈಗ ಕ್ವಾರಂಟೈನ್ ನಲ್ಲಿಡಲಾಗಿದೆ ಎಂದು ಐಎಎಫ್ ತಿಳಿಸಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com