ಕರ್ತಾರ್‌ಪುರ ಗುರುದ್ವಾರ ಗುಮ್ಮಟ ಕುಸಿತ: ಕಾರಣ ಪರಿಶೀಲಿಸುವಂತೆ ಪಾಕ್ ಗೆ ಹೇಳಿದ ಭಾರತ
ಸಿಖ್ಖರ ಪವಿತ್ರ ಧಾರ್ಮಿಕ ಕ್ಷೇತ್ರ ಕರ್ತಾರ್ ಪುರ ಸಾಹೀಬ್ ಗುರುದ್ವಾರದಲ್ಲಿನ ಗುಮ್ಮಟ ಕುಸಿತ ವಿಚಾರವನ್ನು ಭಾರತ ಪಾಕಿಸ್ತಾನದ ಗಮನಕ್ಕೆ ತಂದಿದೆ ಎಂಬುದು ಸರ್ಕಾರದ ಮೂಲಗಳಿಂದ ತಿಳಿದುಬಂದಿದೆ.
Published: 19th April 2020 07:08 PM | Last Updated: 19th April 2020 07:08 PM | A+A A-

ಗುರುದ್ವಾರ ಗುಮ್ಮಟ ಕುಸಿದಿರುವ ಚಿತ್ರ
ನವದೆಹಲಿ: ಸಿಖ್ಖರ ಪವಿತ್ರ ಧಾರ್ಮಿಕ ಕ್ಷೇತ್ರ ಕರ್ತಾರ್ ಪುರ ಸಾಹೀಬ್ ಗುರುದ್ವಾರದಲ್ಲಿನ ಗುಮ್ಮಟ ಕುಸಿತ ವಿಚಾರವನ್ನು ಭಾರತ ಪಾಕಿಸ್ತಾನದ ಗಮನಕ್ಕೆ ತಂದಿದೆ ಎಂಬುದು ಸರ್ಕಾರದ ಮೂಲಗಳಿಂದ ತಿಳಿದುಬಂದಿದೆ.
ಗುರುದ್ವಾರದಲ್ಲಿನ ಗುಮ್ಮಟ ಕುಸಿತ ಸಿಖ್ ಸಮುದಾಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ ಎಂದು ಪಾಕಿಸ್ತಾನಕ್ಕೆ ತಿಳಿಸಲಾಗಿದೆ. ಸಿಖ್ ಸಮುದಾಯದ ಭಾವನೆಗಳಿಗೆ ಅನುಗುಣವಾಗಿ, ಹೊಸದಾಗಿ ನಿರ್ಮಿಸಲಾದ ರಚನೆಗಳಿಗೆ ಹಾನಿಯಾಗಲು ಕಾರಣವಾದ ನ್ಯೂನತೆಗಳನ್ನು ತುರ್ತಾಗಿ ಸರಿಪಡಿಸಿ ಪರಿಹಾರ ನೀಡಬೇಕೆಂದು ಭಾರತ ಪಾಕಿಸ್ತಾನವನ್ನು ಒತ್ತಾಯಿಸಿದೆ.
ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಭಾರತದಲ್ಲಿನ ಗುರುದಾಸ್ ಪುರದ ದೇರಾ ಬಾರಾ ಸಾಹೀಬ್ ಮತ್ತು ಪಾಕಿಸ್ತಾನದ ಕರ್ತಾರ್ ಪುರ ಸಾಹೀಬ್ ಗುರುದ್ವಾರ ನಡುವಣ ಸಂಪರ್ಕ ಕಲ್ಪಿಸುವ ಕಾರಿಡಾರ್ ನ್ನು ಉಭಯ ರಾಷ್ಟ್ರಗಳ ನಡುವಣ ಒಪ್ಪಂದದಿಂದ ಪ್ರಾರಂಭಿಸಲಾಗಿದೆ.
ಪವಿತ್ರ ತಾಣದ ಬಗ್ಗೆ ಸಿಖ್ ಸಮುದಾಯ ಹೊಂದಿರುವ ಬಲವಾದ ನಂಬಿಕೆ ಮತ್ತು ಭಕ್ತಿಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬೇಕು ಎಂದು ಪಾಕಿಸ್ತಾನಕ್ಕೆ ಭಾರತ ಸೂಚಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.