ಮುಂಬೈಗಾಗಿ ಯಾವ ಸೇವೆಗೂ ಸಿದ್ಧ: ಕೊರೋನಾ ವೈರಸ್ ವಿರುದ್ಧ ಹೋರಾಡಲು ಸ್ವತ: ನರ್ಸ್ ಆದ ಮುಂಬೈ ಮೇಯರ್‌!

ಮಹಾರಾಷ್ಟ್ರದಲ್ಲಿ ಮಾರಕ ಕೊರೋನಾ ವೈರಸ್ ಆರ್ಭಟ ಜೋರಾಗಿರುವಂತೆಯೇ ಕೊರೋನಾ ವಾರಿಯರ್ಸ್ ರಲ್ಲಿ ಧೈರ್ಯ ಮತ್ತು ಆತ್ಮಸ್ಥೈರ್ಯ ತುಂಬಲು ಸ್ವತಃ ಮುಂಬೈ ಮಹಾನಗರಿಯ ಮೇಯರ್ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮೇಯರ್ ಕಿಶೋರಿ ಪೆಡ್ನೇಕರ್‌
ಮೇಯರ್ ಕಿಶೋರಿ ಪೆಡ್ನೇಕರ್‌

ಮುಂಬೈ: ಮಹಾರಾಷ್ಟ್ರದಲ್ಲಿ ಮಾರಕ ಕೊರೋನಾ ವೈರಸ್ ಆರ್ಭಟ ಜೋರಾಗಿರುವಂತೆಯೇ ಕೊರೋನಾ ವಾರಿಯರ್ಸ್ ರಲ್ಲಿ ಧೈರ್ಯ ಮತ್ತು ಆತ್ಮಸ್ಥೈರ್ಯ ತುಂಬಲು ಸ್ವತಃ ಮುಂಬೈ ಮಹಾನಗರಿಯ ಮೇಯರ್ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಹೌದು.. ಮಹಾರಾಷ್ಟ್ರ ರಾಜಧಾನಿಯಲ್ಲಿ 5 ಸಾವಿರಕ್ಕೂ ಅಧಿಕ ಜನರಿಗೆ ಕೊರೊನಾ ವೈರಸ್‌ ಸೋಂಕು ತಗುಲಿದೆ. ಈ ಹಿನ್ನೆಲೆ ಇಂತಹ ಸಮಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ಧೈರ್ಯ ತುಂಬಲು ಸ್ವತ: ಮುಂಬಯಿ ಮೇಯರ್‌ ನರ್ಸ್ ಉಡುಪು ತೊಟ್ಟು  ಕಾರ್ಯ ನಿರ್ವಹಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. 

ಮೇಯರ್ ಕಿಶೋರಿ ಪೆಡ್ನೇಕರ್‌ ಅವರು ನರ್ಸ್ ಆಗಿ ಸೇವೆ ಸಲ್ಲಿಸುವ ಮೂಲಕ ವೈದ್ಯಕೀಯ ಸಿಬ್ಬಂದಿಗಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಈ ಹಿಂದೆ ನರ್ಸ್ ಆಗಿದ್ದ ಕಿಶೋರಿ ಪೆಡ್ನೇಕರ್‌ ಮತ್ತೆ ನರ್ಸ್ ಉಡುಪು ತೊಟ್ಟು ಬಿಎಂಸಿಯ ನಾಯರ್‌ ಆಸ್ಪತ್ರೆಗೆ ಭೇಟಿ ಕೊಟ್ಟಿದ್ದರು.  ಈ ಮೂಲಕ ಕೊರೊನ ವೈರಸ್‌ ಸೋಂಕಿತರನ್ನು ಗುಣಮುಖರನ್ನಾಗಿಸಲು ಸತತವಾಗಿ ದುಡಿಯುತ್ತಿರುವ ನರ್ಸ್‌ಗಳಿಗೆ ಹಾಗೂ ಕೊರೋನಾ ವಾರಿಯರ್ಸ್‌ಗಳಿಗೆ ಮಾನಸಿಕವಾಗಿ ಬೆಂಬಲ ನೀಡುವ ಪ್ರಯತ್ನ ಮಾಡಿದ್ದಾರೆ. 

ರಾಜಕೀಯಕ್ಕೆ ಧುಮಕುವ ಮೊದಲು ಕಿಶೋರಿ ಪೆಡ್ನೇಕರ್‌ ಅವರು ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದರು, ಇದೀಗ ಕೊರೋನಾ ಸಾಂಕ್ರಾಮಿಕ ಸಂದರ್ಭದಲ್ಲಿ ಮತ್ತೆ ನರ್ಸ್ ಸಮವಸ್ತ್ರ ಧರಿಸುವ ಮೂಲಕ ವೈದ್ಯಕೀಯ ಸಿಬ್ಬಂದಿಗಳಿಗೆ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಸಂದೇಶ ಸಾರಿದ್ದಾರೆ.

ಇನ್ನು, ಮುಂಬೈಯಲ್ಲಿದ್ದ 1036 ಕಂಟೈನ್‌ಮೆಂಟ್‌ ಝೋನ್‌ಗಳ ಪೈಕಿ 231 ಝೋನ್‌ಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಕೋವಿಡ್‌ 19 ವಿರುದ್ಧ ಹೋರಾಡುತ್ತಿರುವ ಕೊರೊನಾ ವಾರಿಯರ್ಸ್‌ಗಳಿಗೆ ಬೆಂಬಲ ನೀಡಲು ಇಚ್ಚಿಸುತ್ತೇನೆ ಎಂದು ಮುಂಬಯಿ ಮಹಾನಗರದ ಮೇಯರ್‌  ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದಾರೆ.

ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 8,068 ಏರಿಕೆಯಾಗಿದ್ದು, ಈ ಪೈಕಿ 1,076 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. 342 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com