ಭಾರತದಲ್ಲಿ ಕೋವಿಡ್ ಲಸಿಕೆ ತಯಾರಿಸಲು ಎದುರು ನೋಡುತ್ತಿರುವ ರಷ್ಯಾ!

ಭಾರತದ ಸಹಭಾಗಿತ್ವದೊಂದಿಗೆ ಕೋವಿಡ್-19 ಲಸಿಕೆ ಸ್ಪುಟ್ನಿಕ್ ವಿ ಉತ್ಪಾದಿಸಲು ರಷ್ಯಾ ಎದುರು ನೋಡುತ್ತಿರುವುದಾಗಿ ರಷ್ಯಾನ್ ಡೈರೆಕ್ಟ್ ಇನ್ವೆಸ್ಟ್ ಫಂಡ್ ಸಿಇಒ ಕಿರಿಲ್ ಡಿಮಿಟ್ರಿವ್ ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಭಾರತದ ಸಹಭಾಗಿತ್ವದೊಂದಿಗೆ ಕೋವಿಡ್-19 ಲಸಿಕೆ ಸ್ಪುಟ್ನಿಕ್ ವಿ ಉತ್ಪಾದಿಸಲು ರಷ್ಯಾ ಎದುರು ನೋಡುತ್ತಿರುವುದಾಗಿ ರಷ್ಯಾನ್ ಡೈರೆಕ್ಟ್ ಇನ್ವೆಸ್ಟ್ ಫಂಡ್ ಸಿಇಒ ಕಿರಿಲ್ ಡಿಮಿಟ್ರಿವ್ ಹೇಳಿದ್ದಾರೆ.

ವಿಶ್ವದ ಮೊದಲ ಕೋವಿಡ್-19 ಲಸಿಕೆಯನ್ನು ರಷ್ಯಾ ಅಭಿವೃದ್ಧಿಪಡಿಸಿದ್ದು, ಅದು ಪರಿಣಾಮಕಾರಿಗೆ ಕೆಲಸ ಮಾಡಲಿದ್ದು, ರೋಗದ ವಿರುದ್ಧ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲಿದೆ ಎಂದು ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಘೋಷಿಸಿದ್ದರು.

ಆರ್ ಡಿಐಎಫ್ ಜೊತೆಗೆ ಗಾಮಾಲೆಯಾ ಸಾಂಕ್ರಾಮಿಕ ರೋಗಶಾಸ್ತ್ರ ಮತ್ತು ಸೂಕ್ಷ್ಮ ಜೀವವಿಜ್ಞಾನ ಸಂಶೋಧನಾ ಸಂಸ್ಥೆ ಸ್ಪುಟ್ನಿಕ್ ವಿ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಈ ಲಸಿಕೆಯ ಮೂರನೇ ಹಂತ ಅಥವಾ ಧೀರ್ಘ ಕಾಲದ ಕ್ಲಿನಿಕಲ್ ಪ್ರಯೋಗ ನಡೆದಿಲ್ಲ.

ಲ್ಯಾಟಿನ್ ಅಮೆರಿಕಾ, ಏಷ್ಯಾ ಮತ್ತು ಮಧ್ಯಪೂರ್ವದ ಅನೇಕ ರಾಷ್ಟ್ರಗಳು ಲಸಿಕೆ ಉತ್ಪಾದನೆಗೆ ಆಸಕ್ತಿ ತಾಳಿವೆ. ಲಸಿಕೆ ಉತ್ಪಾದನೆ
ಅತ್ಯಂತ ಪರಿಣಾಮಕಾರಿ ವಿಷಯವಾಗಿದೆ. ಪ್ರಸ್ತುತ, ಭಾರತದ ಸಹಭಾಗಿತ್ವದೊಂದಿಗೆ ಲಸಿಕೆ ಅಭಿವೃದ್ಧಿಪಡಿಸಲು ಎದುರು ನೋಡುತ್ತಿದ್ದೇವೆ.ಲಸಿಕೆ ಉತ್ಪಾದನೆಗೆ ಸಹಭಾಗಿತ್ವ ಹೊಂದುವ ರಾಷ್ಟ್ರಗಳ ಬೇಡಿಕೆಗೆ ತಕ್ಕಂತೆ ಲಸಿಕೆ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುವುದಾಗಿ ಡಿಮಿಟ್ರಿವ್ ಆನ್ ಲೈನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ರಷ್ಯಾ ಅಂತಾರಾಷ್ಟ್ರೀಯ ಸಹಕಾರವನ್ನು ಎದುರು ನೋಡುತ್ತಿದ್ದೇವೆ. ರಷ್ಯಾದಲ್ಲಿ ಮಾತ್ರವಲ್ಲದೇ ಯುಎಇ, ಸೌದಿ ಅರಬೀಯಾ, ಬ್ರೆಜಿಲ್, ಮತ್ತು ಭಾರತದಲ್ಲೂ ಕ್ಲಿನಿಕಲ್ ಪ್ರಯೋಗ ನಡೆಸಲಾಗಿದೆ. ಐದಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಲಸಿಕೆ ಉತ್ಪಾದಿಸಲು ಯೋಚಿಸಲಾಗಿದೆ. ಏಷ್ಯಾ, ಲ್ಯಾಟಿನ್ ಅಮೆರಿಕಾ, ಇಟಲಿ ಮತ್ತಿತರ ರಾಷ್ಟ್ರಗಳಿಂದ ಹೆಚ್ಚಿನ ಬೇಡಿಕೆ ಇರುವುದಾಗಿ ಡಿಮಿಟ್ರಿವ್ ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com