ಭಾರತದ ‘ನೆರೆಹೊರೆ ಪ್ರಥಮ ನೀತಿ'ಯಲ್ಲಿ ಬಾಂಗ್ಲಾದೇಶ ಮಹತ್ವದ ಆಧಾರಸ್ತಂಭವಾಗಿದೆ: ಪ್ರಧಾನಿ ಮೋದಿ 

ಭಾರತದ ನೆರೆಹೊರೆಯ ಪ್ರಥಮ ನೀತಿ(Neighbourhood First policy)ಗೆ ಬಾಂಗ್ಲಾದೇಶ ಪ್ರಮುಖ ಆಧಾರ ಸ್ತಂಭವಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ವರ್ಚುವಲ್ ಕಾನ್ಫರೆನ್ಸ್ ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ಪ್ರಧಾನ ಮಂತ್ರಿಗಳು
ವರ್ಚುವಲ್ ಕಾನ್ಫರೆನ್ಸ್ ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ಪ್ರಧಾನ ಮಂತ್ರಿಗಳು

ನವದೆಹಲಿ: ಭಾರತದ ನೆರೆಹೊರೆಯ ಪ್ರಥಮ ನೀತಿ(Neighbourhood First policy)ಗೆ ಬಾಂಗ್ಲಾದೇಶ ಪ್ರಮುಖ ಆಧಾರ ಸ್ತಂಭವಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಅವರ ಜೊತೆಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪ್ರಧಾನಿ ಮೋದಿ, ತಾವು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ದಿನದಿಂದ ಬಾಂಗ್ಲಾದೇಶದ ಜೊತೆಗೆ ಉತ್ತಮ ಬಲವಾದ ಬಾಂಧವ್ಯವನ್ನು ಹೊಂದಲು ಸರ್ಕಾರ ಗಮನ ಕೇಂದ್ರೀಕರಿಸಿಕೊಂಡು ಬಂದಿದೆ. ಈ ವಿಷಯ ತಮ್ಮ ಸರ್ಕಾರಕ್ಕೆ ಸವಾಲಾಗಿತ್ತು ಎಂದು ಹೇಳಿದರು.

ಇದಕ್ಕೂ ಮುನ್ನ ಉಭಯ ನಾಯಕರು, ಬಂಗಬಂದ್ಲು-ಬಾಪು ಡಿಜಿಟಲ್ ಪ್ರದರ್ಶನಕ್ಕೆ ಜಂಟಿಯಾಗಿ ಉದ್ಘಾಟನೆ ನೀಡಿದರು. ಶೇಖ್ ಮುಜಿಬುರ್ ರೆಹ್ ಮಾನ್ ಅವರ ಜನ್ಮ ಶತಮಾನೋತ್ಸವ ಸ್ಮರಣಾರ್ಥ ಅಂಚೆಚೀಟಿಯನ್ನು ಬಿಡುಗಡೆ ಮಾಡಲಾಯಿತು ಅಲ್ಲದೆ, ಐಟಿ ವಲಯವನ್ನು ಪ್ರಮುಖ ಆದ್ಯತೆಯಾಗಿಟ್ಟುಕೊಂಡು ಭಾರತ-ಬಾಂಗ್ಲಾದೇಶ ಸಿಇಒಗಳ ವೇದಿಕೆ ರಚನೆಗೆ ಒಪ್ಪಂದವನ್ನು ಮಾಡಿಕೊಂಡರು.

ಮಹಾತ್ಮಾ ಗಾಂಧಿ ಮತ್ತು ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ ಅವರಿಗೆ ಸಂಬಂಧಿಸಿದ ಡಿಜಿಟಲ್ ಪ್ರದರ್ಶನವನ್ನು ಬಿಡುಗಡೆ ಮಾಡುತ್ತಿರುವುದು ನನಗೆ ಹೆಮ್ಮೆಯ ವಿಷಯವಾಗಿದೆ. ಇವರು ಎಂದೆಂದಿಗೂ ಯುವಜನತೆಗೆ ಪ್ರೇರಣೆಯಾಗಿರುತ್ತಾರೆ ಎಂದರು.

ಕೊರೋನಾ ವೈರಸ್ ಕಾಲಿಟ್ಟ ನಂತರ ಅದನ್ನು ಎದುರಿಸುವುದು ಸವಾಲಿನ ವಿಷಯವಾಗಿತ್ತು, ಈ ಸಂದರ್ಭದಲ್ಲಿ ಭಾರತ ಮತ್ತು ಬಾಂಗ್ಲಾದೇಶಗಳ ಮಧ್ಯೆ ಉತ್ತಮ ಸಹಕಾರ ಏರ್ಪಟ್ಟಿತ್ತು ಎಂದು ಪ್ರಧಾನಿ ಮೋದಿ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ, 1971ರ ಬಾಂಗ್ಲಾ ವಿಮೋಚನೆ ಯುದ್ಧದಲ್ಲಿ ಹುತಾತ್ಮರಾದವರಿಗೆ ಗೌರವ ಸೂಚಿಸಿದರು. ವಿಮುಕ್ತಿಗೆ ಕಾರಣರಾದ, ಬೆಂಬಲ ನೀಡಿದ ಎಲ್ಲಾ ಭಾರತೀಯರು ಮತ್ತು ಅಲ್ಲಿನ ಸರ್ಕಾರಕ್ಕೆ ಕೃತಜ್ಞತೆ ಹೇಳುತ್ತೇನೆ ಎಂದರು. ಮೋದಿ ಸರ್ಕಾರ ಕೊರೋನಾ ವೈರಸ್ ನ್ನು ನಿರ್ವಹಿಸಿದ ರೀತಿ ಶ್ಲಾಘನೀಯ ಎಂದರು.
ಬಂಗಬಂಧು-ಬಾಪು ಡಿಜಿಟಲ್ ಪ್ರದರ್ಶನವನ್ನು ದೆಹಲಿಯಲ್ಲಿ ಪ್ರದರ್ಶಿಸಲಾಗುತ್ತದೆ, ತರುವಾಯ ಬಾಂಗ್ಲಾದೇಶ, ವಿಶ್ವಸಂಸ್ಥೆಯ ವಿವಿಧ ಸ್ಥಳಗಳಲ್ಲಿ ಪ್ರದರ್ಶಿಸಲಾಗುತ್ತದೆ, ಅಂತಿಮವಾಗಿ 2022 ರ ಆರಂಭದಲ್ಲಿ ಕೋಲ್ಕತ್ತಾದಲ್ಲಿ ಮುಕ್ತಾಯಗೊಳ್ಳಲಿದೆ.

ಭಾರತ ಮತ್ತು ಬಾಂಗ್ಲಾದೇಶ ಸಾರಿಗೆ ಮತ್ತು ಸಂಪರ್ಕವನ್ನು ಹೆಚ್ಚಿಸುವ ಪ್ರಯತ್ನಗಳನ್ನು ಮಾಡುತ್ತಿವೆ. ಭಾರತ ಮತ್ತು ಬಾಂಗ್ಲಾದೇಶದ ನಡುವಿನ 1965 ರ ಪೂರ್ವದ ಆರು ರೈಲು ಸಂಪರ್ಕಗಳನ್ನು ಪುನರುಜ್ಜೀವನಗೊಳಿಸಲು ಮತ್ತು ಕಾರ್ಯಗತಗೊಳಿಸಲು ಎರಡೂ ಕಡೆಯ ನಾಯಕತ್ವ ಬದ್ಧವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಲ್ಡಿಬಾರಿ-ಚಿಲಹತಿ ರೈಲು ಸಂಪರ್ಕದ ಉದ್ಘಾಟನೆಯೊಂದಿಗೆ, ಪ್ರಸ್ತುತ ಐದು ಸಂಪರ್ಕಗಳು ಕಾರ್ಯನಿರ್ವಹಿಸುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com