ಆತ್ಮನಿರ್ಭರ ಭಾರತ್: ದೇಶೀಯ ಆಕಾಶ್‌ ಕ್ಷಿಪಣಿ ವ್ಯವಸ್ಥೆ ರಫ್ತಿಗೆ ಸಂಪುಟ ಅನುಮೋದನೆ

ದೇಶೀಯ ಆಕಾಶ್ ಕ್ಷಿಪಣಿ ವ್ಯವಸ್ಥೆಯನ್ನು ರಫ್ತು ಮಾಡಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.
ಆಕಾಶ್ ಕ್ಷಿಪಣಿ ವ್ಯವಸ್ಥೆ
ಆಕಾಶ್ ಕ್ಷಿಪಣಿ ವ್ಯವಸ್ಥೆ

ನವದೆಹಲಿ: ದೇಶೀಯ ಆಕಾಶ್ ಕ್ಷಿಪಣಿ ವ್ಯವಸ್ಥೆಯನ್ನು ರಫ್ತು ಮಾಡಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.

ಇದು 5 ಬಿಲಿಯನ್ ರಕ್ಷಣಾ ರಫ್ತು ಗುರಿಯನ್ನು ಸಾಧಿಸಲು ಮತ್ತು ವಿದೇಶಗಳೊಂದಿಗೆ ಸ್ನೇಹಪರ ಕಾರ್ಯತಂತ್ರದ ಸಂಬಂಧವನ್ನು ಸುಧಾರಿಸಲು ಉದ್ದೇಶಿಸಿದೆ.

ಆದಾಗ್ಯೂ, ಆಕಾಶ್‌ನ ರಫ್ತು ಆವೃತ್ತಿಯು ಪ್ರಸ್ತುತ ಭಾರತೀಯ ಸಶಸ್ತ್ರ ಪಡೆಗಳೊಂದಿಗೆ ನಿಯೋಜಿಸಲಾಗಿರುವ ವ್ಯವಸ್ಥೆಗಳಿಗಿಂತ ಭಿನ್ನವಾಗಿರುತ್ತದೆ.

ಈ ಕುರಿತು ಟ್ವೀಟ್‌ ಮಾಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಆತ್ಮ ನಿರ್ಭರ ಭಾರತ್ ಅಡಿಯಲ್ಲಿ, ಭಾರತವು ವಿವಿಧ ರೀತಿಯ ರಕ್ಷಣಾ ವೇದಿಕೆಗಳು ಮತ್ತು ಕ್ಷಿಪಣಿಗಳನ್ನು ತಯಾರಿಸುವ ಸಾಮರ್ಥ್ಯದಲ್ಲಿ ಬೆಳೆಯುತ್ತಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com