ಕೊರೋನಾ ವೈರಸ್ : ಚೀನಾಕ್ಕೆ ಪ್ರಯಾಣಿಸಬೇಡಿ, ಹೊಸ ಸಲಹೆ ನೀಡಿದ ಕೇಂದ್ರ ಸರ್ಕಾರ

ಕೊರೋನಾ  ವೈರಸ್ ಹರಡುವಿಕೆಯನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಬ್ಬರೂ ಚೀನಾಕ್ಕೆ ಪ್ರಯಾಣಿಸುವುದನ್ನು ತಡೆಯುವಂತೆ ಕೇಂದ್ರ ಸರ್ಕಾರ  ಹೊಸ  ಸಲಹೆ ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಕೊರೋನಾ  ವೈರಸ್ ಹರಡುವಿಕೆಯನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಬ್ಬರೂ ಚೀನಾಕ್ಕೆ ಪ್ರಯಾಣಿಸುವುದನ್ನು ತಡೆಯುವಂತೆ ಕೇಂದ್ರ ಸರ್ಕಾರ  ಹೊಸ  ಸಲಹೆ ನೀಡಿದೆ.

ಚೀನಾದಿಂದ ಭಾರತಕ್ಕೆ ವಾಪಾಸ್ಸಾಗುವ ಪ್ರಯಾಣಿಕರನ್ನು ಪ್ರತ್ಯೇಕವಾಗಿ ನಿಗಾವಣೆಯಲ್ಲಿ ಇರುವಂತೆ ಸೂಚಿಸಲಾಗಿದೆ. ಜನವರಿ 15ರಿಂದಲೂ ಚೀನಾದಿಂದ ಭಾರತಕ್ಕೆ ವಾಪಾಸ್ ಆಗಿರುವ ಪ್ರಯಾಣಿಕರನ್ನು ಪ್ರತ್ಯೇಕ ನಿಗಾವಣೆಯಲ್ಲಿ ಇಡಬೇಕಾಗಿದೆ ಎಂದು ಕೇಂದ್ರ ಕುಟುಂಬ ಮತ್ತು ಕಲ್ಯಾಣ ಇಲಾಖೆ ಸಚಿವಾಲಯ ತಿಳಿಸಿದೆ.

ಇದಲ್ಲದೆ, ಇ-ವೀಸಾಗಳಲ್ಲಿ ಭಾರತಕ್ಕೆ ಪ್ರವಾಸಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದಾಗಿ ವಿದೇಶಾಂಗ ಸಚಿವಾಲಯ ಘೋಷಿಸಿದೆ.  ಚೀನಾ ಹಾಗೂ ಅದರ ಸುತ್ತಮುತ್ತಲಿನ ರಾಷ್ಟ್ರಗಳ ಅರ್ಜಿದಾರರಿಗೆ ಈ ಸೂಚನೆ ನೀಡಲಾಗಿದೆ. 

ಭಾನುವಾರ 445 ವಿಮಾನಗಳಿಂದ 58,658 ಪ್ರಯಾಣಿಕರನ್ನು ಪರೀಕ್ಷಿಸಲಾಗಿದೆ. ಇಂಟಿಗ್ರೇಟೆಡ್ ಡಿಸೀಸ್ ಕಣ್ಗಾವಲು ಕಾರ್ಯಕ್ರಮದಿಂದ ಒಟ್ಟು 142 ಪ್ರಯಾಣಿಕರನ್ನು ಈ ರೋಗ ಲಕ್ಷಣಗಳು ಕಂಡುಬಂದಿದ್ದು, ತೀವ್ರ ನಿಗಾ ಸೌಕರ್ಯಕ್ಕೆ ಶಿಫಾರಸು ಮಾಡಲಾಗಿದೆ. 

ವುಹಾನ್ ನಿಂದ 330 ಪ್ರಯಾಣಿಕರನ್ನು ಹೊಂದಿರುವ ಎರಡನೇ ತಂಡ ಭಾರತಕ್ಕೆ ಬಂದಿದೆ. ಈ ಪೈಕಿ ಏಳು ಮಾಲ್ಡೀವ್ಸ್ ಪ್ರಜೆಗಳು ಸೇರಿದಂತೆ 300 ಮಂದಿಯನ್ನು ದೆಹಲಿಯ ಐಟಿಬಿಪಿ ಚಾವ್ಲಾ ಕ್ಯಾಂಪ್ ನಲ್ಲಿ ಇರಿಸಲಾಗಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com