ನಿತೀಶ್ ಆಡಳಿತ: ಪ್ರಶಾಂತ್ ಕಿಶೋರ್ ತೀವ್ರ ವಾಗ್ದಾಳಿ

ಬಿಜೆಪಿ- ಜೆಡಿಯು ಮೈತ್ರಿಯ ವಿಷಯದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ತಮ್ಮ ನಡುವೆ ಸೈದ್ಧಾಂತಿಕ ಭಿನ್ನಾಭಿಪ್ರಾಯವಿತ್ತು ಎಂದು ಜೆಡಿಯುವಿನಿಂದ ಉಚ್ಛಾಟನೆಯಾಗಿರುವ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಬಿಜೆಪಿ- ಜೆಡಿಯು ಮೈತ್ರಿಯ ವಿಷಯದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ತಮ್ಮ ನಡುವೆ ಸೈದ್ಧಾಂತಿಕ ಭಿನ್ನಾಭಿಪ್ರಾಯವಿತ್ತು ಎಂದು ಜೆಡಿಯುವಿನಿಂದ ಉಚ್ಛಾಟನೆಯಾಗಿರುವ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

ಆದರೂ ಅವರ ಬಗ್ಗೆ ನನಗೆ ಗೌರವವಿದೆ ಎಂದು ಹೇಳಿದ್ದಾರೆ. ಗೋಡ್ಸೆ ಬೆಂಬಲಿಗರೊಂದಿಗೆ ಇರಲು ಆಗುವುದಿಲ್ಲ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಗುಜರಾತ್ ಮುಖಂಡರ ಆದೇಶಂತೆ ನಡೆಯುತ್ತಿದ್ದಾರೆ ರಾಜ್ಯಕ್ಕೆ ಎದೆಗಾರಿಕೆಯ ಬಲಿಷ್ಠ ನಾಯಕರ ಅಗತ್ಯವಿದೆ, ಎಂದೂ ಕಿಶೋರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕಳೆದ 15 ವರ್ಷದಲ್ಲಿ ಬಿಹಾರದಲ್ಲಿ ಅಭಿವೃದ್ಧಿ ಕಾರ್ಯ ನಡೆದೇ ಇಲ್ಲ ಎಂದು ತಾನು ಹೇಳುತ್ತಿಲ್ಲ. ಆದರೆ ಇತರ ರಾಜ್ಯಗಳೊಂದಿಗೆ ಬಿಹಾರ ಹೋಲಿಸಿದರೆ, ಅಭಿವೃದ್ಧಿ ಕಾರ್ಯದ ನಿಧಾನಗತಿ ಗೊತ್ತಾಗುತ್ತದೆ ಎಂದರು. ಈ ಕುರಿತಂತೆ ನಾನು ನಿತೀಶ್ ಕುಮಾರ್ ಅವರೊಂದಿಗೆ ಬಹಿರಂಗ ಚರ್ಚೆಗೆ ಸಿದ್ಧವಾಗಿದ್ದೇನೆ ಎಂದು ಕಿಶೋರ್ ಹೇಳಿದ್ದಾರೆ.

ಅಂತೆಯೇ ನಿತೀಶ್ ಕುಮಾರ್ ಬಿಜೆಪಿ ವಕ್ತಾರರಂತೆ ವರ್ತಿಸುತ್ತಿದ್ದು, ಅವರು ಗಾಂಧಿ ತತ್ವ ಅನುಸರಿಸುತ್ತಿದ್ದಾರೆಯೋ ಅಥವಾ ಅವರನ್ನು ಕೊಂದ ಗೋಡ್ಸೆ ತತ್ವವನ್ನು ಅನುಸರಿಸುತ್ತಿದ್ದಾರೆಯೋ ಎಂಬುದನ್ನು ಸ್ಪಷ್ಟಪಡಿಸಬೇಕು. 

ಇನ್ನು ಪ್ರಶಾಂತ್ ಕಿಶೋರ್ ವಾಗ್ದಾಳಿಗೆ ತಿರುಗೇಟು ನೀಡಿರುವ ಜೆಡಿಯು ವಕ್ತಾರ ಕೆಸಿ ತ್ಯಾಗಿ ಅವರು, ಪ್ರಶಾಂತ್ ಕಿಶೋರ್ ರಾಜಕೀಯಕ್ಕಿಂತ ರಾಜಕೀಯದ ಕುರಿತ ತಮ್ಮ ವ್ಯವಹಾರವನ್ನು ಮುಂದುವರೆಸಿದರೆ ಒಳಿತು. ಅಥವಾ ಆಪ್ ಪಕ್ಷದ ಕುರಿತು ತಮ್ಮ ಬ್ಯಾಟಿಂಗ್ ಮುಂದುವರೆಸಬೇಕು ವ್ಯಂಗ್ಯ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com