ಕೊರೋನ ವೈರಸ್: ಚೆನ್ನೈ ಬಂದರಿನಲ್ಲಿ ಶಂಕಿತ ಚೀನಾದ ಇಬ್ಬರು ಹಡಗು ಸಿಬ್ಬಂದಿ!

ಮಂಗಳವಾರ ಸಂಜೆ ಇಲ್ಲಿಗೆ ಆಗಮಿಸಿದ 'ಎಂ ವಿ ಮ್ಯಾಗ್ನೇಟ್' ಹಡಗಿನ 19 ಚೀನಾ ಸಿಬ್ಬಂದಿಗಳ ಪೈಕಿ ಕೊರೊನವೈರಸ್ ಶಂಕಿತ ಇಬ್ಬರನ್ನು ಪ್ರತ್ಯೇಕವಾಗಿ ಇರಿಸಲಾಗಿದ್ದು, ಅವರ ರಕ್ತಮಾದರಿಗಳನ್ನು ಪರೀಕ್ಷೆಗಾಗಿ ಇಂದು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಚೆನ್ನೈ ಬಂದರು
ಚೆನ್ನೈ ಬಂದರು

ಚೆನ್ನೈ: ಮಂಗಳವಾರ ಸಂಜೆ ಇಲ್ಲಿಗೆ ಆಗಮಿಸಿದ 'ಎಂ ವಿ ಮ್ಯಾಗ್ನೇಟ್' ಹಡಗಿನ 19 ಚೀನಾ ಸಿಬ್ಬಂದಿಗಳ ಪೈಕಿ ಕೊರೊನವೈರಸ್ ಶಂಕಿತ ಇಬ್ಬರನ್ನು ಪ್ರತ್ಯೇಕವಾಗಿ ಇರಿಸಲಾಗಿದ್ದು, ಅವರ ರಕ್ತಮಾದರಿಗಳನ್ನು ಪರೀಕ್ಷೆಗಾಗಿ ಇಂದು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

19 ಸಿಬ್ಬಂದಿಯಿದ್ದ ಹಡಗನ್ನು ಮುನ್ನೆಚ್ಚರಿಕೆ ಕ್ರಮವಾಗಿ ಚೀನಾ ಬಂದರಿನಲ್ಲಿ 14 ದಿನ ಪ್ರತ್ಯೇಕವಾಗಿ ಇಡಲಾಗಿತ್ತು. ಈ ಅವಧಿ ಪೂರ್ಣಗೊಂಡ ನಂತರ ಹಡಗು ಚೆನ್ನೈ ಬಂದರಿಗೆ ಆಗಮಿಸಿದೆ. ಆಗಮನಕ್ಕೂ ಮುನ್ನ ಎಲ್ಲ ಹಡಗು ಸಿಬ್ಬಂದಿ ಆರೋಗ್ಯವಾಗಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಂಡು ಬಂದರಿಗೆ ಅನುಮತಿಸಲಾಗಿದೆ ಎಂದು ಚೆನ್ನೈ ಬಂದರು ಮಂಡಳಿ ಹೇಳಿಕೆ ತಿಳಿಸಿದೆ. 

ಬಂದರು ಆರೋಗ್ಯ ಅಧಿಕಾರಿ ಸೇರಿದಂತೆ ಆರೋಗ್ಯ ಅಧಿಕಾರಿಗಳ ತಂಡ (ಪಿಎಚ್‌ಒ) ಮತ್ತು ಸಾರ್ವಜನಿಕ ಆರೋಗ್ಯ ತಜ್ಞರು ಹಡಗಿನಲ್ಲಿನ ಸಿಬ್ಬಂದಿಯ ಆರೋಗ್ಯ ಪರೀಕ್ಷಿಸಿದ್ದಾರೆ. 
  
ಒಟ್ಟು ಸಿಬ್ಬಂದಿಯಲ್ಲಿ ಇಬ್ಬರಿಗೆ ಉಸಿರಾಟ ತೊಂದರೆ ಕಂಡುಬಂದಿಲ್ಲವಾದರೂ ಸ್ವಲ್ಪ ಜ್ವರ ಇರುವುದು ಕಂಡುಬಂದಿದೆ. ಇದನ್ನು ಹೊರತುಪಡಿಸಿ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಹೇಳಿಕೆ ತಿಳಿಸಿದೆ. ಇಬ್ಬರು ಸಿಬ್ಬಂದಿಯನ್ನು ಹಡಗಿನೊಳಗೆ ಪ್ರತ್ಯೇಕವಾಗಿ ಇರಿಸಲಾಗಿದ್ದು, ಯಾರೊಬ್ಬರ ಸಂಪರ್ಕವೂ ಇರದಂತೆ ಎಚ್ಚರವಹಿಸಲಾಗಿದೆ. 

ರಾಜ್ಯ ಆರೋಗ್ಯ ತಂಡ ಮತ್ತು ಆರೋಗ್ಯಾಧಿಕಾರಿ ಇಂದು ಹಡಗಿಗೆ ಭೇಟಿ ನೀಡಿದ್ದು,  ಎಲ್ಲ ಮುನ್ನೆಚ್ಚರಿಕೆಗಳ ಸಿಬ್ಬಂದಿಯ ನಂತರ ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಈ ಮಾದರಿಗಳನ್ನು ಪರೀಕ್ಷೆಗಾಗಿ ಗಿಂಡಿಯಲ್ಲಿರುವ ಕಿಂಗ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಪರೀಕ್ಷೆಯ ವರದಿಗಳು ಬಂದ ನಂತರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಹೇಳಿಕೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com