ಡೊನಾಲ್ಡ್ ಟ್ರಂಪ್, ಪ್ರಧಾನಿ ಮೋದಿ ಒಂದೇ ದೋಣಿಯಲ್ಲಿ ಸಾಗುತ್ತಿದ್ದಾರೆ: ಹೆಚ್ ಡಿ ಕುಮಾರಸ್ವಾಮಿ

ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಂದೇ ದೋಣಿಯಲ್ಲಿ ಸಾಗುತ್ತಿದ್ದಾರೆ ಎಂದು  ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಹಿರಿಯ ನಾಯಕ ಹೆಚ್.ಡಿ. ಕುಮಾರಸ್ವಾಮಿ ಸೋಮವಾರ  ಹೇಳಿದ್ದಾರೆ.
ಮೋದಿ-ಟ್ರಂಪ್-ಕುಮಾರಸ್ವಾಮಿ
ಮೋದಿ-ಟ್ರಂಪ್-ಕುಮಾರಸ್ವಾಮಿ

ಹಾಸನ: ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಂದೇ ದೋಣಿಯಲ್ಲಿ ಸಾಗುತ್ತಿದ್ದಾರೆ ಎಂದು  ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಹಿರಿಯ ನಾಯಕ ಹೆಚ್.ಡಿ. ಕುಮಾರಸ್ವಾಮಿ ಸೋಮವಾರ  ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಅವರು, ಈ ಇಬ್ಬರೂ ನಾಯಕರು  ತಕ್ಷಣವೇ  ಅಗತ್ಯವಾಗಿ  ಪರಿಹರಿಸಬೇಕಾದ ಸರಣಿ ಸಮಸ್ಯೆಗಳಿಂದ ತಮ್ಮ ದೇಶದ ಜನರ ಗಮನವನ್ನು ಅನ್ಯ ವಿಷಯಗಳತ್ತ ತಿರುಗಿಸುವ ತಂತ್ರಗಳಲ್ಲಿ ನಿರತರಾಗಿದ್ದಾರೆ ಎಂದು ದೂರಿದರು.

ಡೊನಾಲ್ಡ್ ಟ್ರಂಪ್ ಅಮೆರಿಕಾ- ಇರಾನ್ ನಡುವೆ ಯುದ್ದದದಂತಹ ಪರಿಸ್ಥಿತಿ ನಿರ್ಮಾಣಮಾಡಿದ್ದಾರೆ. ಟ್ರಂಪ್ ತನ್ನ ದೇಶದಲ್ಲಿಯೇ ವಾಗ್ದಂಡನೆಯ ಮೂಲಕ ಪದಚ್ಯುತಿಯ ಸ್ಥಿತಿ ಎದುರಿಸುತ್ತಿದ್ದಾರೆ. ಅವರು ಆದಷ್ಟು ಶೀಘ್ರ  ಚುನಾವಣೆ ಎದುರಿಸಬೇಕಾಗಿದೆ. ಹಾಗಾಗಿ ಪ್ರಮುಖ ವಿಷಯಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಟ್ರಂಪ್ ಪ್ರಯತ್ನಿಸುತ್ತಿದ್ದಾರೆ. ಇದರಿಂದ ಜಗತ್ತಿನೆಲ್ಲೆಡೆ ಮೂರನೇ ವಿಶ್ವಯುದ್ದದ ಮಾತುಕತೆಗಳು ನಡೆಯುತ್ತಿವೆ ಎಂದರು.

ಅಮೆರಿಕಾದಂತೇ ಭಾರತದಲ್ಲೂ ಸಹ ದೇಶದಲ್ಲಿನ ತೀವ್ರ ನಿರುದ್ಯೋಗ ಸಮಸ್ಯೆ, ಚೇತರಿಕೆಯೇ ಸಾಧ್ಯವಾಗದ ಆರ್ಥಿಕ ಬಿಕ್ಕಟ್ಟಿನಿಂದ ಜನರ ಗಮನ ಅನ್ಯ ವಿಷಯಗಳತ್ತ ತಿರುಗಿಸಲು ವಿವಾದಗಳೇ ಅಲ್ಲದ, ಸಿಎಎ ಹಾಗೂ ಎನ್ಆರ್ ಸಿಯಂತಹ ವಿಷಯಗಳನ್ನು ಮುನ್ನಲೆಗೆ ತಂದು ದೇಶಾದ್ಯಂತ ಜನರು ಆಕ್ರೋಶಗೊಳ್ಳುವಂತೆ ಮಾಡಿ ಬೀದಿಗಿಳಿದು ಚಳುವಳಿ ನಡೆಸುವಂತೆ ಮಾಡಿದ್ದಾರೆ ಎಂದು ದೂರಿದರು.

ಸಿಎಎ ಹಾಗೂ ಎನ್‌ಆರ್‌ಸಿ ವಿರುದ್ದ ದೇಶಾದ್ಯಂತ ನಡೆಯುತ್ತಿರುವ ಘಟನೆಗಳು ದೇಶದ ಜನರಲ್ಲಿ ಕಳವಳಕಾರಿ  ಪರಿಸ್ಥಿತಿಯನ್ನು ಸೃಷ್ಟಿಸಿವೆ ಎಂದು ಅವರು ಹೇಳಿದರು.

ಜೆಎನ್ ಯು ಕ್ಯಾಂಪಸ್ ನಲ್ಲಿ ವಿದ್ಯಾರ್ಥಿಗಳ ಮೇಲೆ ನಿನ್ನೆ ನಡೆದ ದಾಳಿಯನ್ನು ಪ್ರಸ್ತಾಪಿಸಿದ ಕುಮಾರಸ್ವಾಮಿ, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ದೇಶಾದ್ಯಂತ ವಿಸ್ತರಿಸಬಹುದು ಎಂಬ ಭಯ ತಮ್ಮನ್ನು ಕಾಡುತ್ತಿದೆ. ಜನರು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲಿ ಎಂದು ಹಾರೈಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com