ಪತ್ನಿಯ ಕತ್ತು ಹಿಸುಕಿ, ಕಲ್ಲಿನಿಂದ ಜಜ್ಜಿ ಗಂಡನಿಂದ ಭೀಕರ ಕೊಲೆ, ಕಾರಣ ಕೇಳಿದ್ರೆ ಬೆಚ್ಚಿ ಬೀಳ್ತೀರಾ?

6 ಸಾವಿರ ಫೇಸ್‌ಬುಕ್ ಫಾಲೋವರ್ಸ್ ಹೊಂದಿದ್ದ ಪತ್ನಿಯು ಸದಾ ಮೊಬೈಲ್ ನಲ್ಲಿ ಬ್ಯುಸಿಯಾಗಿರುವುದರಿಂದ ರೋಸಿ ಹೋದ ಗಂಡ ಆಕೆಯ ಕತ್ತು ಹಿಸುಕಿ ಕಲ್ಲಿನಿಂದ ಜಜ್ಜಿ ಕ್ರೂರವಾಗಿ ಕೊಲೆ ಮಾಡಿದ್ದಾನೆ.
ನೈನಾ ಮಂಗಲಾನಿ
ನೈನಾ ಮಂಗಲಾನಿ

ಜೈಪುರ: 6 ಸಾವಿರ ಫೇಸ್‌ಬುಕ್ ಫಾಲೋವರ್ಸ್ ಹೊಂದಿದ್ದ ಪತ್ನಿಯು ಸದಾ ಮೊಬೈಲ್ ನಲ್ಲಿ ಬ್ಯುಸಿಯಾಗಿರುವುದರಿಂದ ರೋಸಿ ಹೋದ ಗಂಡ ಆಕೆಯ ಕತ್ತು ಹಿಸುಕಿ ಕಲ್ಲಿನಿಂದ ಜಜ್ಜಿ ಕ್ರೂರವಾಗಿ ಕೊಲೆ ಮಾಡಿದ್ದಾನೆ. 

ಪತಿ 26 ವರ್ಷದ ಅಜಾಜ್ ಅಹಮದ್ ಅನ್ಸಾರಿ ತನ್ನ ಪತ್ನಿ 22 ವರ್ಷದ ನೈನಾ ಮಂಗಲಾನಿ(ರೇಷ್ಮಾ)ಗೆ ಸುತ್ತಾಡಿಕೊಂಡು ಬರುವ ಅಂತ ಕರೆದುಕೊಂಡು ಜೈಪುರ-ದೆಹಲಿಯ ಹೆದ್ದಾರಿಗೆ ಹೋಗಿದ್ದಾನೆ. ಅಲ್ಲಿ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಗುರುತು ಸಿಗಬಾರದು ಎಂದು ಕಲ್ಲಿನಿಂದ ಆಕೆಯ ಮುಖವನ್ನು ಜಜ್ಜಿ ವಿರೂಪಗೊಳಿಸಿದ್ದಾನೆ. 

ಕೊಲೆ ಪ್ರಕರಣವನ್ನ ಕೈಗೆತ್ತಿಕೊಂಡು ತನಿಖೆ ಕೈಗೊಂಡಿದ್ದ ಪೊಲೀಸರು ಮೊದಲಿಗೆ ಪತಿಯನ್ನು ಕರೆದು ವಿಚಾರಣೆ ನಡೆಸಿದಾಗ ಅನ್ಸಾರಿ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಕೊಲೆಗೆ ಕಾರಣ ಪತ್ನಿ ಫೇಸ್ ಬುಕ್ ನಲ್ಲಿ ಆರು ಸಾವಿರ ಫಾಲೋವರ್ಸ್ ಗಳು ಹೊಂದಿದ್ದಳು. ಹೀಗಾಗಿ ಸದಾ ಮೊಬೈಲ್ ನಲ್ಲಿಯೇ ಬ್ಯುಸಿಯಾಗಿರುತ್ತಿದ್ದಳು. ಈ ಕಾರಣಕ್ಕೆ ಕೊಲೆ ಮಾಡಿರುವುದಾಗಿ ಹೇಳಿದ್ದಾನೆ. 

ದಂಪತಿಗೆ ಮೂರು ತಿಂಗಳ ಗಂಡು ಮಗುವಿದೆ. ಇನ್ನು ಪತ್ನಿ ಸದಾ ಮೊಬೈಲ್ ನಲ್ಲಿ ಬ್ಯುಸಿಯಾಗಿದ್ದರಿಂದ ಆಕೆಯ ಮೇಲೆ ಅನುಮಾನಗೊಂಡು ಈ ರೀತಿ ಕೊಲೆ ಮಾಡಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com