ಬ್ರೆಜಿಲ್ ಅಧ್ಯಕ್ಷ ಬೋಲ್ಸೋನಾರೊ ಅವರಿಗೆ ಆತ್ಮೀಯ ಸ್ವಾಗತ ಕೋರಿದ ಪ್ರಧಾನಿ ಮೋದಿ

4 ದಿನಗಳ ಅಧಿಕೃತ ಭೇಟಿಗಾಗಿ ರಾಜಧಾನಿ ದೆಹಲಿಗೆ ಆಗಮಿಸಿರುವ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸೋನಾರೊ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಆತ್ಮೀಯ ಸ್ವಾಗತ ಕೋರಿದ್ದಾರೆ.
ಬ್ರೆಜಿಲ್ ಅಧ್ಯಕ್ಷ ಬೋಲ್ಸೋನಾರೊ ಅವರಿಗೆ ಆತ್ಮೀಯ ಸ್ವಾಗತ ಕೋರಿದ ಪ್ರಧಾನಿ ಮೋದಿ
ಬ್ರೆಜಿಲ್ ಅಧ್ಯಕ್ಷ ಬೋಲ್ಸೋನಾರೊ ಅವರಿಗೆ ಆತ್ಮೀಯ ಸ್ವಾಗತ ಕೋರಿದ ಪ್ರಧಾನಿ ಮೋದಿ

ನವದೆಹಲಿ: 4 ದಿನಗಳ ಅಧಿಕೃತ ಭೇಟಿಗಾಗಿ ರಾಜಧಾನಿ ದೆಹಲಿಗೆ ಆಗಮಿಸಿರುವ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸೋನಾರೊ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಆತ್ಮೀಯ ಸ್ವಾಗತ ಕೋರಿದ್ದಾರೆ.

ದೆಹಲಿಗೆ ಆಗಮಿಸಿದ ಬೋಲ್ಸೋನಾರೋ ಅವರು ಕೇಂದ್ರ ಸಚಿವ ವಿ. ಮುರಳೀಧರನ್ ಅವರ ಜೊತೆಗೂಡಿ ರಾಜ್ ಘಾಟ್'ಗೆ ತೆರಳಿ ಮಹಾತ್ಮ ಗಾಂಧಿಯವರ ಸಮಾಧಿಗೆ ಹೂಗುಚ್ಛ ಇರಿಸುವ ಮೂಲಕ ಗೌರವ ಸಲ್ಲಿಸಿದರು. 

ಶುಕ್ರವಾರ ಭಾರತಕ್ಕೆ ಆಗಮಿಸಿದ ಬ್ರೆಜಿಲ್ ಅಧ್ಯಕ್ಷ ವಿದೇಶಾಂಗ ಸಚಿವ ಜೈ.ಶಂಕರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಬೋಲ್ಸನಾರೊ ಅವರು ತಮ್ಮ ಜೊತೆಗೆ 8 ಸಚಿವರು, ನಾಲ್ಕು ಸದಸ್ಯರು ಮತ್ತು ವಾಣಿಜ್ಯ ನಿಯೋಗದೊಂದಿಗೆ ಭಾರತಕ್ಕೆ ಆಗಮಿಸಿದ್ದು, ನಾಲ್ಕು ದಿನಗಳ ಕಾಲ ಭಾರತ ಪ್ರವಾಸದಲ್ಲಿರಲಿದ್ದಾರೆ. 

ಉಭಯ ರಾಷ್ಟ್ರಗಳ ನಾಯಕರು ಭೇಟಿಯಾಗುತ್ತಿರುವ ಹಿನ್ನೆಲೆಯಲ್ಲಿ ಭಾರತ- ಬ್ರೆಜಿಲ್ ನಡುವೆ ತೈಲ ಮತ್ತು ಅನಿಲ, ಗಣಿಗಾರಿಕೆ ಮತ್ತು ಸೈಬರ್ ಭದ್ರತಾವಲಯದಲ್ಲಿ ಪರಸ್ಪರ ಸಹಕಾರ ಹೆಚ್ಚಿಸುವ 15 ಮಹತ್ವದ ಒಪ್ಪಂದಗಳಿಗೆ ಸಹಿ ಆಗುವ ಸಾಧ್ಯತೆಗಳಿವೆ ಎಂದು ಉನ್ನತ ಮೂಲಗಳು ಹೇಳಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com