ಗಣರಾಜ್ಯೋತ್ಸವ: ಗೂಗಲ್‌ನಿಂದ ವಿಶಿಷ್ಟ ಡೂಡಲ್ ಮೂಲಕ ಆಚರಣೆ

ಭಾರತದ 71ನೇ ಗಣರಾಜ್ಯೋತ್ಸವವನ್ನು ಗೂಗಲ್, ಅತ್ಯಂತ ವಿಶಿಷ್ಟವಾದ ಡೂಡಲ್‌ನೊಂದಿಗೆ ಆಚರಿಸಿದ್ದು, ಏಷ್ಯಾದ ವೈವಿಧ್ಯಮಯ ಉಪಖಂಡವನ್ನು ವ್ಯಾಪಿಸಿರುವ ಮತ್ತು ಒಂದುಗೂಡಿಸುವ ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸಿದೆ.
ಗೂಗಡ್ ಡೂಡಲ್
ಗೂಗಡ್ ಡೂಡಲ್

ನವದೆಹಲಿ: ಭಾರತದ 71ನೇ ಗಣರಾಜ್ಯೋತ್ಸವವನ್ನು ಗೂಗಲ್, ಅತ್ಯಂತ ವಿಶಿಷ್ಟವಾದ ಡೂಡಲ್‌ನೊಂದಿಗೆ ಆಚರಿಸಿದ್ದು, ಏಷ್ಯಾದ ವೈವಿಧ್ಯಮಯ ಉಪಖಂಡವನ್ನು ವ್ಯಾಪಿಸಿರುವ ಮತ್ತು ಒಂದುಗೂಡಿಸುವ ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸಿದೆ.

ಈ ವರ್ಷದ ಡೂಡಲ್ ಅನ್ನು ಸಿಂಗಾಪುರ ಮೂಲದ ಅತಿಥಿ ಕಲಾವಿದ ಮೆರೂ ಸೇಠ್ ರಚಿಸಿದ್ದಾರೆ. ವಿಶ್ವಪ್ರಸಿದ್ಧ ಹೆಗ್ಗುರುತುಗಳಾದ ತಾಜ್ ಮಹಲ್, ಇಂಡಿಯಾ ಗೇಟ್‌, ರಾಷ್ಟ್ರೀಯ ಪಕ್ಷಿ (ಭಾರತೀಯ ನವಿಲು), ಶಾಸ್ತ್ರೀಯ ಕಲೆಗಳು, ಜವಳಿ ಮತ್ತು ನೃತ್ಯಗಳು ಮುಂತಾದವುಗಳನ್ನು ಒಳಗೊಂಡಂತೆ ವಿಭಿನ್ನತೆಯಲ್ಲಿ ಏಕತೆಯನ್ನು, ಸಾಮರಸ್ಯವನ್ನು ಪ್ರದರ್ಶಿಸುವ ಮಾದರಿಯಲ್ಲಿ ಡೂಡಲ್‌ ಅನ್ನು ರಚಿಸಲಾಗಿದೆ.

ಇಂದು ದೇಶಾದ್ಯಂತ 71ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ದೇಶದೆಲ್ಲೆಡೆ ತ್ರಿವರ್ಣ ಧ್ವಜವನ್ನು ಹಾರಿಸಿ ಗಣರಾಜ್ಯೋತ್ಸವದ ಆಚರಣೆ ಮಾಡಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com