ಭಾರತದ ಮೇಲೆ ಕೆಟ್ಟ ಕಣ್ಣು ಹಾಕಿದರೆ ತಕ್ಕ ಶಾಸ್ತಿ: ಚೀನಾ ವಿರುದ್ಧ ಹರಿಹಾಯ್ದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್

ಚೀನಾ ಆ್ಯಪ್ ಗಳ ಬ್ಯಾನ್ ನ್ನು 'ಡಿಜಿಟಲ್ ಸ್ಟ್ರೈಕ್ ' ಎಂದು ಕರೆದಿರುವ ಕೇಂದ್ರ ಸಂವಹನ ಸಚಿವ ರವಿಶಂಕರ್ ಪ್ರಸಾದ್, ಭಾರತ ಶಾಂತಿಯನ್ನು ಬಯಸುತ್ತದೆ. ಆದರೆ, ಯಾರಾದರೂ ಕೆಟ್ಟ ಕಣ್ಣು ಹಾಕಿದರೆ  ಅವರಿಗೆ ತಕ್ಕ ಶಾಸ್ತಿ ಮಾಡಲಾಗುವುದು ಎಂದು  ಚೀನಾದ ವಿರುದ್ಧ ಹರಿಹಾಯ್ದಿದ್ದಾರೆ.
ರವಿಶಂಕರ್ ಪ್ರಸಾದ್
ರವಿಶಂಕರ್ ಪ್ರಸಾದ್

ಕೊಲ್ಕತ್ತಾ: ಚೀನಾ ಆ್ಯಪ್ ಗಳ ಬ್ಯಾನ್ ನ್ನು 'ಡಿಜಿಟಲ್ ಸ್ಟ್ರೈಕ್ ' ಎಂದು ಕರೆದಿರುವ ಕೇಂದ್ರ ಸಂವಹನ ಸಚಿವ ರವಿಶಂಕರ್ ಪ್ರಸಾದ್, ಭಾರತ ಶಾಂತಿಯನ್ನು ಬಯಸುತ್ತದೆ. ಆದರೆ, ಯಾರಾದರೂ ಕೆಟ್ಟ ಕಣ್ಣು ಹಾಕಿದರೆ  ಅವರಿಗೆ ತಕ್ಕ ಶಾಸ್ತಿ ಮಾಡಲಾಗುವುದು ಎಂದು  ಚೀನಾದ ವಿರುದ್ಧ ಹರಿಹಾಯ್ದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ದಕ್ಷ ಆಡಳಿತವನ್ನು ಶ್ಲಾಘಿಸಿದ ರವಿಶಂಕರ್ ಪ್ರಸಾದ್, ನಮ್ಮ ದೇಶದ 20 ಯೋಧರು ಹುತಾತ್ಮರಾಗಿದ್ದರೆ ಚೀನಾದ ಸೈನಿಕರ ಸಂಖ್ಯೆ ದುಪ್ಪಟ್ಟಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಬಂಗಾಳದಲ್ಲಿ ನಡೆದ ಜನಸಂವಾದ ವರ್ಚುವಲ್ ರ್‍ಯಾಲಿಯಲ್ಲಿ ಮಾತನಾಡಿದ ಅವರು, 'ಈಗ ನೀವು ಎರಡು 'ಸಿ'ಗಳ ಬಗ್ಗೆ ಕೇಳುತ್ತಿದ್ದೀರಿ.ಒಂದು ಕೊರೋನಾವೈರಸ್ ಮತ್ತೊಂದು ಚೀನಾ. ಭಾರತ ಶಾಂತಿ ಮತ್ತು ಚರ್ಚೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದರಲ್ಲಿ ನಂಬಿಕೆ ಹೊಂದಿದೆ. ಆದರೆ, ಯಾರಾದರೂ ಭಾರತದ ಮೇಲೆ ಕೆಟ್ಟ ಕಣ್ಣು ಹಾಕಿದರೆ ಅವರಿಗೆ ತಕ್ಕ ಶಾಸ್ತಿ ಮಾಡಲಾಗುವುದು ಎಂದರು.

ನಮ್ಮ ದೇಶದ 20 ಯೋಧರು ಹುತಾತ್ಮರಾಗಿದ್ದರೆ ಅವರ ಸಂಖ್ಯೆ ನಮಗಿಂತಲೂ ಹೆಚ್ಚಾಗಿದೆ.ಅವರು ಯಾವುದೇ ಸಾವು -ನೋವಿನ ಸಂಖ್ಯೆ ನೀಡದಿರುವುದನ್ನು ಎಲ್ಲರೂ ಗಮನಿಸರಬೇಕು ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ನಡೆದ ಭಯೋತ್ಪಾದಕ ದಾಳಿ ನಂತರ ಭಾರತ ಯಾವ ರೀತಿಯಲ್ಲಿ ಪ್ರತ್ಯುತ್ತರ ನೀಡಿದೆ ಎಂಬುದನ್ನು ನೆನಪಿಸಿಕೊಂಡ ರವಿಶಂಕರ್ ಪ್ರಸಾದ್, ಉರಿ ಮತ್ತು ಪುಲ್ವಾಮಾ ಉಗ್ರ ದಾಳಿ ನಂತರ ಹೇಗೆ ಪ್ರತಿಕ್ರಿಯೆ ನೀಡಿದ್ದೇವೆ ಎಂಬುದು ಎಲ್ಲರೂ ನೆನಪಿಸಿಕೊಳ್ಳಬೇಕು, ನಮ್ಮ ಯೋಧರ ತ್ಯಾಗ ವ್ಯರ್ಥವಾಗಲ್ಲ ಎಂದು ಪ್ರಧಾನಿ ಹೇಳುವುದರಲ್ಲಿ ಅರ್ಥವಿದೆ. ನಮ್ಮ ಸರ್ಕಾರಕ್ಕೆ ಇಚ್ಚಾ ಶಕ್ತಿ ಇರುವುದಾಗಿ ಸಮರ್ಥಿಸಿಕೊಂಡರು.

ಚೀನಾ ಆ್ಯಪ್ ಗಳನ್ನು ಬ್ಯಾನ್ ಮಾಡುವ ಮೂಲಕ ದೇಶವಾಸಿಗಳ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಇದಕ್ಕೆ ಟಿಎಂಸಿ ಏಕೆ ವಿರೋಧಿಸುತ್ತಿದೆ ಎಂಬುದನ್ನು ತಿಳಿಯಬೇಕಾಗಿದೆ.ಇದು ವಿಚಿತ್ರ, ಬಿಕ್ಕಟ್ಟಿನ ಸಮಯದಲ್ಲಿ ಅವರು ಸರ್ಕಾರದೊಂದಿಗೆ ಏಕೆ ನಿಲ್ಲಲು ಸಾಧ್ಯವಾಗುತ್ತಿಲ್ಲ ಎಂದು ರವಿಶಂಕರ್ ಪ್ರಸಾದ್ ಪ್ರಶ್ನಿಸಿದರು. 59 ಚೀನಾ ಆ್ಯಪ್ ಬ್ಯಾನ್ ನಿರ್ಧಾರ ಕಣ್ಣೂರೆಸುವತಂತ್ರ ಎಂದು ತೃಣಮೂಲ ಕಾಂಗ್ರೆಸ್ ಸದಸ್ಯ ನುಸ್ರತ್ ಜಹಾನ್ ಬುಧವಾರ ಹೇಳಿಕೆ ನೀಡಿದ್ದರು.

ಚೀನಾ- ಇಂಡಿಯಾ ಗಡಿ ವಿವಾದಕ್ಕೆ ಸಂಬಂಧಿಸಿದಂತೆ  ಮೌನವಾಗಿರುವ ಸಿಪಿಐ-ಎಂ ಮೇಲೂ ಕಿಡಿಕಾರಿದ ರವಿಶಂಕರ್ ಪ್ರಸಾದ್, ಚೀನಾವನ್ನು ಟೀಕಿಸದ ಸಿಪಿಐ-ಎಂ ನಡೆ ಆಶ್ಚರ್ಯವನ್ನುಂಟುಮಾಡಿದೆ.ಇದೇ ಸಿಪಿಐ-ಎಂ 1962ರಲ್ಲಿ ಆಡಳಿತದಲ್ಲಿ ಇದ್ದೀತಾ? ಎಂದು ಪ್ರಶ್ನಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com