ಹಾಟ್ ಸ್ಪ್ರಿಂಗ್ಸ್ ಮತ್ತು ಗೋಗ್ರಾದಲ್ಲಿ ಕೆಲ ದಿನಗಳಲ್ಲೇ ಭಾರತ-ಚೀನಾ ಸೇನೆ ಸಂಪೂರ್ಣ ಹಿಂದಕ್ಕೆ: ಸೇನಾ ಮೂಲಗಳು

ಪೂರ್ವ ಲಡಾಖ್ ನ ಹಾಟ್ ಸ್ಪ್ರಿಂಗ್ಸ್ ಮತ್ತು ಗೋಗ್ರಾದಲ್ಲಿ ಭಾರತ ಮತ್ತು ಚೀನಾ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆಯು ನಡೆಯುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಎರಡೂ ಸ್ಥಳಗಳಲ್ಲಿ ಸೇನೆ ನಿಯೋಜನೆ ಸಂಪೂರ್ಣ ನಿಷ್ಕ್ರಿಯಗೊಳ್ಳಲಿದೆ ಎಂದು ಭಾರತೀಯ ಸೇನೆ ಮೂಲಗಳಿಂದ ತಿಳಿದುಬಂದಿದೆ.
ಭಾರತ-ಚೀನಾ ಸೇನೆ
ಭಾರತ-ಚೀನಾ ಸೇನೆ

ನವದೆಹಲಿ: ಪೂರ್ವ ಲಡಾಖ್ ನ ಹಾಟ್ ಸ್ಪ್ರಿಂಗ್ಸ್ ಮತ್ತು ಗೋಗ್ರಾದಲ್ಲಿ ಭಾರತ ಮತ್ತು ಚೀನಾ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆಯು ನಡೆಯುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಎರಡೂ ಸ್ಥಳಗಳಲ್ಲಿ ಸೇನೆ ನಿಯೋಜನೆ ಸಂಪೂರ್ಣ ನಿಷ್ಕ್ರಿಯಗೊಳ್ಳಲಿದೆ ಎಂದು ಭಾರತೀಯ ಸೇನೆ ಮೂಲಗಳಿಂದ ತಿಳಿದುಬಂದಿದೆ.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಜುಲೈ 5ರಂದು ದೂರವಾಣಿ ಸಂಭಾಷಣೆ ನಡೆಸಿ ವಾಸ್ತವ ಗಡಿ ರೇಖೆ(ಎಲ್‌ಎಸಿ)ಯಲ್ಲಿ 'ತ್ವರಿತ' ವಿಸರ್ಜನೆಗೆ ಒಪ್ಪಿದ ಒಂದು ದಿನದ ನಂತರ, ಚೀನಾದ ಹಲವಾರು ಸೈನಿಕರು ಹಿಂದಕ್ಕೆ ಹೋಗಲು ಪ್ರಾರಂಭಿಸಿದ್ದಾರೆ.

ಕಳೆದ ಎಂಟು ವಾರಗಳಿಂದ ಪೂರ್ವ ಮತ್ತು ಲಡಾಖ್‌ನ ಅನೇಕ ಸ್ಥಳಗಳಲ್ಲಿ ಭಾರತೀಯ ಮತ್ತು ಚೀನೀ ಸೈನ್ಯಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿತ್ತು. ಜೂನ್ 15 ರಂದು ಗಾಲ್ವಾನ್ ಕಣಿವೆಯಲ್ಲಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಭಾರತೀಯ ಸೈನಿಕರ ಮೇಲೆ 'ಪೂರ್ವನಿಯೋಜಿತ' ದಾಳಿಯನ್ನು ನಡೆಸಿದ ನಂತರ ಏಷ್ಯಾದ ಇಬ್ಬರು ದೈತ್ಯರ ನಡುವಿನ ಸಂಬಂಧ ಹದಗೆಟ್ಟಿತು. 

ಈ ಸಂಘರ್ಷದಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಅಲ್ಲದೆ ಚೀನಾ ಕಡೆಯೂ ಸುಮಾರು 30-40 ಸೈನಿಕರು ಸಹ ಸಾವನ್ನಪ್ಪಿದ್ದಾರೆ ಎಂದು ವರದಿಗಳು ಪ್ರಕಟವಾಗಿದ್ದರೂ ಬೀಜಿಂಗ್ ಮಾತ್ರ ಇನ್ನೂ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.

ಗೋಗ್ರಾ(ಪ್ಯಾಟ್ರೋಲಿಂಗ್ ಪಾಯಿಂಟ್ 15) ಹಾಗೂ ಹಾಟ್ ಸ್ಪ್ರಿಂಗ್ಸ್(ಪ್ಯಾಟ್ರೋಲಿಂಗ್ ಪಾಯಿಂಟ್ 17)ನಿಂದ ಚೀನಾ ತನ್ನ ಸೇನೆಯನ್ನು ಹಿಂದಕ್ಕೆ ಪಡೆಯಲು ಆರಂಭಿಸಿದೆ. ಇದೇ ವೇಳೆ ಚೀನಾ ಸೈನಿಕರು ಕೂಡ ಪಿಂಗರ್ 4ರಲ್ಲಿ ನಿರ್ಮಿಸಿದ್ದ ತನ್ನ ರಚನೆಗಳನ್ನು ಕೂಡ ತೆಗೆದು ಹಾಕಲು ಕ್ರಮಕೈಗೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com