ಭಾರತದ ಗಡಿ ನುಸುಳಲು ಸಜ್ಜಾಗಿ ನಿಂತಿದ್ದಾರೆ 250-300 ಉಗ್ರರು: ಮೇಜರ್ ಜನರಲ್ ವೀರೇಂದ್ರ ವತ್ಸ್
ಗಡಿಗಳಲ್ಲಿರುವ ಲಾಂಚ್ ಪ್ಯಾಡ್ ಗಳಲ್ಲಿ ಸಂಪೂರ್ಣವಾಗಿ ಭರ್ತಿಗೊಂಡಿದ್ದು, ಭಾರತದ ಗಡಿ ನುಸುಳಲು 250 ರಿಂದ 300 ಉಗ್ರರು ಸಜ್ಜಾಗಿ ನಿಂತಿದ್ದಾರೆಂದು ಮೇಜರ್ ಜನರಲ್ ವೀರೇಂದ್ರ ವತ್ಸ್ ಅವರು ಶನಿವಾರ ಹೇಳಿದ್ದಾರೆ.
Published: 11th July 2020 01:22 PM | Last Updated: 11th July 2020 01:22 PM | A+A A-

ವೀರೇಂದ್ರ ವತ್ಸ್
ಶ್ರೀನಗರ: ಗಡಿಗಳಲ್ಲಿರುವ ಲಾಂಚ್ ಪ್ಯಾಡ್ ಗಳಲ್ಲಿ ಸಂಪೂರ್ಣವಾಗಿ ಭರ್ತಿಗೊಂಡಿದ್ದು, ಭಾರತದ ಗಡಿ ನುಸುಳಲು 250 ರಿಂದ 300 ಉಗ್ರರು ಸಜ್ಜಾಗಿ ನಿಂತಿದ್ದಾರೆಂದು ಮೇಜರ್ ಜನರಲ್ ವೀರೇಂದ್ರ ವತ್ಸ್ ಅವರು ಶನಿವಾರ ಹೇಳಿದ್ದಾರೆ.
ಇಂದು ಬೆಳಿಕ್ಕೆ ನೌಗಾಮ್ ಗಡಿ ನಿಯಂತರಣ ರೇಖೆ ಬಳಿ ಭಾರತದೊಳಗೆ ನುಸುಳಲು ಯತ್ನಿಸುತ್ತಿದ್ದ ಇಬ್ಬರು ಉಗ್ರರನ್ನು ಕಾರ್ಯಾಚರಣೆ ನಡೆಸಿ ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಡಿಯಲ್ಲಿರುವ ಲಾಂಚ್ ಪ್ಯಾಡ್ ಗಳಲ್ಲಿ 250-300 ಉಗ್ರರಿರುವ ಮಾಹಿತಿಗಳು ಬಂದಿವೆ. ಈ ಉಗ್ರರು ಭಾರತದೊಳಗೆ ನಿಸುಳಲು ಯತ್ನ ನಡೆಸುತ್ತಿದ್ದಾರೆಂದು ಹೇಳಿದ್ದಾರೆ.
ನೌಗಾಮ್ ಸೆಕ್ಟರ್ ಬಳಿರುವ ಗಡಿ ನಿಯಂತ್ರಣ ರೇಖೆ ಕೆಲ ಅನುಮಾನಾಸ್ಪ ಓಡಾಟಗಳನ್ನು ನಮ್ಮ ಸೇನಾಪಡೆ ಗಮನಿಸಿತ್ತು. ಗಡಿನಿಯಂತ್ರಣ ರೇಖೆ ಬಳಿಯಿರುವ ಬೇಲಿಯನ್ನು ಕತ್ತರಿಸಿ ಭಾರತದೊಳಗೆ ನುಸುಳಲು ಯತ್ನ ನಡೆಸುತ್ತಿದ್ದರು. ಕೂಡಲೇ ಕಾರ್ಯಾಚರಣೆ ನಡೆಸಿ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಯಿತು. ಹತ್ಯೆಯಾದ ಇಬ್ಬರು ಉಗ್ರಹಿಂದ 2 ಎಕೆ 47 ರೈಫಲ್ಸ್ ಗಳು, 12 ನಿಯತಕಾಲಿಕೆಗಳು, ಒಂದು ಪಿಸ್ತೂಲ್, ಕೆಲ ಗ್ರೆನೇಡ್ ಗಳು, ಭಾರತ ಮತ್ತು ಪಾಕಿಸ್ತಾನಕ್ಕೆ ಸೇರಿದ 1.5 ಲಕ್ಷ ಹಣವನ್ನು ವಶಕ್ಕೆ ಪಡೆಯಲಾಗಿದ್ದು, ಎಲ್ಲವನ್ನೂ ಸ್ಯಾನಿಟೈಸ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.