ಪೊಲೀಸ್ ಆಗುವ ಕನಸು: ಬಾಲಕನಿಗೆ ತರಬೇತಿ ನೀಡಲು ಶಿಕ್ಷಕನಾದ ಮಧ್ಯಪ್ರದೇಶ ಪೊಲೀಸ್ ಇನ್ಸ್'ಪೆಕ್ಟರ್!

ಪೊಲೀಸ್ ಆಗಬೇಕೆಂಬ ಕನಸ್ಸನ್ನು ಬೆನ್ನತ್ತಿರುವ ಬಾಲಕನೊಬ್ಬನಿಗೆ ತರಬೇತಿ ನೀಡಲು ಮಧ್ಯಪ್ರದೇಶ ಪೊಲೀಸ್ ಒಬ್ಬರು ಶಿಕ್ಷಕರಾಗಿ ಪರಿವರ್ತನೆಗೊಂಡಿದ್ದು, ಪೊಲೀಸ್ ಇನ್ಸ್'ಪೆಕ್ಟರ್'ರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆಗಳು ವ್ಯಕ್ತವಾಗತೊಡಗಿವೆ. 
ಬಾಲಕನಿಗೆ ಪಾಠ ಹೇಳಿಕೊಡುತ್ತಿರುವ ಪೊಲೀಸ್
ಬಾಲಕನಿಗೆ ಪಾಠ ಹೇಳಿಕೊಡುತ್ತಿರುವ ಪೊಲೀಸ್

ಭೋಪಾಲ್: ಪೊಲೀಸ್ ಆಗಬೇಕೆಂಬ ಕನಸ್ಸನ್ನು ಬೆನ್ನತ್ತಿರುವ ಬಾಲಕನೊಬ್ಬನಿಗೆ ತರಬೇತಿ ನೀಡಲು ಮಧ್ಯಪ್ರದೇಶ ಪೊಲೀಸ್ ಒಬ್ಬರು ಶಿಕ್ಷಕರಾಗಿ ಪರಿವರ್ತನೆಗೊಂಡಿದ್ದು, ಪೊಲೀಸ್ ಇನ್ಸ್'ಪೆಕ್ಟರ್'ರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆಗಳು ವ್ಯಕ್ತವಾಗತೊಡಗಿವೆ. 

ಮಧ್ಯಪ್ರದೇಶದ ಅಪರಾಧ ಹಾಗೂ ಆರ್ಥಿಕತೆಯ ರಾಜಧಾನಿಯಾಗಿರುವ ಇಂದೋರ್ ನಲ್ಲಿರುವ ಪಲಾಸಿಯಾ ಪೊಲೀಸ್ ಠಾಣೆ ಎಸ್'ಐ ವಿನೋದ್ ದೀಕ್ಷಿತ್ ಅವರೇ ಶಿಕ್ಷಕರಾಗಿ ಪರಿವರ್ತನೆಗೊಂಡಿರುವ ಪೊಲೀಸ್ ಆಗಿದ್ದಾರೆ. ಪೊಲೀಸ್ ಆಗಬೇಕೆಂಬ ಕನಸ್ಸಿನ ಬೆನ್ನು ಹತ್ತಿರುವ 12 ವರ್ಷದ ಬಾಲಕ ರಾಜ್'ಗೆ ದೀಕ್ಷಿತ್ ಅವರು ಪ್ರತೀನಿತ್ಯ ತರಬೇತಿ ನೀಡುವ ಕೆಲಸ ಮಾಡುತ್ತಿದ್ದಾರೆ. 

ಬಾಲಕ ಸ್ಥಳೀಯ ಶಾಲೆಯೊಂದರಲ್ಲಿ ನಾಲ್ಕನೇ ತರಗತಿ ಓದುತ್ತಿದ್ದು, ರಾಜ್'ಗೆ ದೀಕ್ಷಿತ್ ಅವರು ಪ್ರತೀನಿತ್ಯ ಸಂಜೆ ಸಮಯದಲ್ಲಿ 1 ತಾಸು ಅಥವಾ 2 ತಾಸುಗಳ ಕಾಲ ತರಬೇತಿ ನೀಡುವ ಕೆಲಸ ಮಾಡುತ್ತಿದ್ದಾರೆ. 

ಬಾಲಕನಿಗೆ ತರಬೇತಿ ನೀಡಲು ದೀಕ್ಷಿತ್ ಅವರು ಯಾವುದೇ ಕ್ಲಾಸ್ ರೂಮ್ ಬಳಕೆ ಮಾಡುತ್ತಿಲ್ಲ. ರಸ್ತೆಯ ಬೀದಿ ದೀಪಗಳನ್ನು ಬಳಸಿಕೊಂಡು ಕಾರಿನ ಬೋನೆಟ್ ಮೇಲೆ ಶಿಕ್ಷಣ ನೀಡುವ ಕೆಲಸ ಮಾಡುತ್ತಿದ್ದಾರೆ. ದೀಕ್ಷಿತ್ ಅವರ ಈ ಕಾರ್ಯಕ್ಕೆ ಇದೀಗ ಸಾಕಷ್ಟು ಶ್ಲಾಘನೆಗಳು ವ್ಯಕ್ತವಾಗತೊಡಗಿವೆ. 

ಗೂಂಡಾಗಳ ವಾಸಸ್ಥಾನವಾಗಿರುವ ಬ್ಯಾರಿ ಗ್ವಾಲ್ಟೋಲಿ ಪ್ರದೇಶಕ್ಕೆ ತೆರಳಿದ್ದೆವು. ಈ ವೇಳೆ ನನ್ನ ಬಳಿ ಬಂದ 12 ವರ್ಷದ ಈ ಪುಟ್ಟ ಬಾಲಕ ನಾನು ಪೊಲೀಸ್ ಆಗಬೇಕು. ನನ್ನ ಕನಸನ್ನು ನನಸಾಗಿಸಿಕೊಳ್ಳಲು ನೀವು ಸಹಾಯ ಮಾಡುತ್ತೀರಾ ಎಂದು ಕೇಳಿದ್ದ. 

ನಿಜವಾಗಿಯೂ ಪೋಲೀಸ್ ಆಗಬೇಕೆಂದು ಬಯಸಿದ್ದೇ ಆದರೆ, ಕಠಿಣ ಅಧ್ಯಯನ ಮಾಡಬೇಕಾಗಿತ್ತು ಮತ್ತು ಒಂದು ದಿನ ಪೊಲೀಸ್ ನೇಮಕಾತಿ ಪರೀಕ್ಷೆಯನ್ನು ಭೇದಿಸಲು ದೈಹಿಕವಾಗಿ ತುಂಬಾ ಬಲಶಾಲಿಯಾಗಿರಬೇಕೆಂದು ಬಾಲಕನಿಗೆ ತಿಳಿಸಿದ್ದೆ. 

ಈ ವೇಳೆ ಮಾತನಾಡಿದ್ದ ಬಾಲಕ, ನನಗೆ ಯಾರು ಮಾರ್ಗದರ್ಶನ ನೀಡುತ್ತಾರೆ. ಯಾರು ಹೇಳಿಕೊಡುತ್ತಾರೆ? ನನ್ನ ಕುಟುಂಬ ಆರ್ಥಿಕವಾಗಿ ಹಿಂದುಳಿದಿದ್ದು, ನನ್ನ ಶಿಕ್ಷಣಕ್ಕೆ ಹೆಚ್ಚುವರಿಯಾಗುವ ವೆಚ್ಚ ಭರಿಸಲು ಅವರಿಗೆ ಸಾಧ್ಯವಾಗುವುದಿಲ್ಲ ಎಂದಿದ್ದ. ಬಳಿಕ ನಾನು ಮಾರ್ಗದರ್ಶನ ನೀಡುತ್ತೇನೆಂದು ಹೇಳಿದ್ದೆ. ಇದರಂತೆ ಇಬ್ಬರ ನಡುವೆ ಮಾತುಕತೆ ಮುಂದುವರೆದಿದ್ದು, ಬಾಲಕ ದೀಕ್ಷಿತ್ ಅವರ ಹೃದಯ ಗೆದ್ದಿದ್ದಾನೆ. 

ಅಂದಿನಿಂದ ರಾಜ್'ಗೆ ನಾನು ಪ್ರತೀನಿತ್ಯ ಇಂಗ್ಲೀಷ್ ಹಾಗೂ ಗಣಿತ ಪಾಠವನ್ನು ಹೇಳಿಕೊಡುತ್ತಿದ್ದೇನೆ. ಕೆಲ ದಿನಗಳ ಬಳಿಕ ರಾಜ್ ಸ್ನೇಹಿತರೂ ಕೂಡ ಸೇರಿಕೊಂಡಿದ್ದಾರೆ. ಇದೀಗ ವಿಜ್ಞಾನವನ್ನು ಹೇಳಿಕೊಡಲಾಗುತ್ತಿದೆ. 

ಬಾಲಕ ರಾಜ್ ಬ್ಯಾರಿ ಗ್ವಾಲ್ಟೋಲಿ ಪ್ರದೇಶ ನಿವಾಸಿಯಾಗಿರುವ ದಂಪತಿಗಳ ಮೂರನೇ ಪುತ್ರನಾಗಿದ್ದಾನೆ. ಕೊರೋನಾ ಪರಿಣಾಮ ಈ ಪ್ರದೇಶದಲ್ಲಿ ನಡೆಸಲಾಗುತ್ತಿದ್ದ ಟಿಫಿನ್ ಸೆಂಟರ್ ನ್ನು ಬಂದ್ ಮಾಡಲಾಗಿದೆ. ಇದೀಗ ದಿನಗೂಲಿ ಕೆಲಸ ಮಾಡುತ್ತಾ ರಾಜ್ ತಂದೆ ಜೀವನ ನಡೆಸುತ್ತಿದ್ದಾರೆ. ಇನ್ನು ಬಾಲಕನ ತಾತ ತರಕಾರಿ ಮಾಡುವ ವ್ಯಾಪಾರ ಮಾಡುತ್ತಿದ್ದಾರೆ. 

ನಾವಿರುವ ಪ್ರದೇಶದಲ್ಲಿ ದೀಕ್ಷಿತ್ ಸರ್ ಗೂಂಡಾಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿರುವುದನ್ನು ನೋಡಿದ್ದೆ. ಅವರನ್ನು ನೋಡಿದ ಮೇಲೆ ನಾನು ಪೊಲೀಸ್ ಆಗಬೇಕೆಂದು ಬಯಸಿದ್ದೆ. ಅಂಕಲ್ ಇದೀಗ ನನಗೆ ಉಚಿತವಾಗಿ ತರಬೇತಿ ನೀಡುತ್ತಿದ್ದು, ಇದರಿಂದ ನಾನು ನನ್ನ ಗುರಿ ತಲುಪಲು ಸಹಾಯಕವಾಗುತ್ತದೆ ಎಂದು ಬಾಲಕ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com