ಪೂರ್ವ ಲಡಾಖ್: ಭಾರತ-ಚೀನಾದಿಂದ ಬೃಹತ್ ಉಪಕರಣ ಮತ್ತು ಶಸ್ತ್ರಾಸ್ತ್ರ ಜಮಾವಣೆ!

ಗಡಿಯಲ್ಲಿ ಭಾರತ ಮತ್ತು ಚೀನಾ ನಡುವಿನ ಬಿಕ್ಕಟ್ಟು ತಾರಕ್ಕೇರಿದ್ದು ಯುದ್ಧದ ಕಾರ್ಮೋಡ ಆವರಿಸಿದೆ. ಇದರ ಮಧ್ಯೆ ಎರಡು ದೇಶಗಳ ಸೇನೆಗಳು ಗಡಿಯಲ್ಲಿ ಭಾರೀ ಪ್ರಮಾಣದ ಉಪಕರಣ ಮತ್ತು ಶಸ್ತ್ರಾಸ್ತ್ರಗಳನ್ನು ಜಮೆ ಮಾಡುತ್ತಿದೆ.
ಭಾರತೀಯ ಸೇನೆ
ಭಾರತೀಯ ಸೇನೆ

ನವದೆಹಲಿ: ಗಡಿಯಲ್ಲಿ ಭಾರತ ಮತ್ತು ಚೀನಾ ನಡುವಿನ ಬಿಕ್ಕಟ್ಟು ತಾರಕ್ಕೇರಿದ್ದು ಯುದ್ಧದ ಕಾರ್ಮೋಡ ಆವರಿಸಿದೆ. ಇದರ ಮಧ್ಯೆ ಎರಡು ದೇಶಗಳ ಸೇನೆಗಳು ಗಡಿಯಲ್ಲಿ ಭಾರೀ ಪ್ರಮಾಣದ ಉಪಕರಣ ಮತ್ತು ಶಸ್ತ್ರಾಸ್ತ್ರಗಳನ್ನು ಜಮೆ ಮಾಡುತ್ತಿದೆ.

ಪೂರ್ವ ಲಡಾಖ್‌ನ ವಿವಾದಿತ ಪ್ರದೇಶಗಳಿಗೆ ಸಮೀಪವಿರುವ ಸೇನಾ ಶಿಬಿರಗಳಲ್ಲಿ ಉಭಯ ದೇಶಗಳೂ ಫಿರಂಗಿ ಬಂದೂಕುಗಳು ಮತ್ತು ಯುದ್ಧ ವಾಹನಗಳು ಸೇರಿದಂತೆ ಭಾರೀ ಉಪಕರಣಗಳು ಮತ್ತು ಶಸ್ತ್ರಾಸ್ತ್ರಗಳನ್ನು ಜಮೆ ಮಾಡುತ್ತಿವೆ.

ಗಡಿಯಲ್ಲಿ ಕಳೆದ 25 ದಿನಗಳಿಂದ ಉಭಯ ಸೇನೆಯ ನಡುವೆ ಕಲ್ಲು ತೂರಾಟ, ಹೊಡೆದಾಟ ಬಡೆದಾಟುಗಳು ನಡೆಯುತ್ತಿದ್ದು ಇದೀಗ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದು ಶಸ್ತ್ರಾಸ್ತ್ರಗಳನ್ನು ಜಮೆ ಮಾಡುವಲ್ಲಿ ನಿರತವಾಗಿವೆ ಎಂದು ಸೇನೆಯ ಮೂಲಗಳಿಂದ ತಿಳಿದುಬಂದಿದೆ. 

ಸೇನಾ ಮುಖ್ಯಸ್ಥರು ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆಗಳ ಮೂಲಕ ವಿವಾದವನ್ನು ಬಗೆಹರಿಸಲು ಎರಡೂ ದೇಶಗಳು ಪ್ರಯತ್ನಗಳನ್ನು ಮುಂದುವರೆಸುತ್ತಿದ್ದೂ ಇದರ ನಡುವೆ ಈ ಪ್ರದೇಶದಲ್ಲಿ ಎರಡು ಸೇನೆಗಳಿಂದ ಯುದ್ಧ ಸಾಮಗ್ರಿಗಳನ್ನು ಸಂಗ್ರಹಿಸುತ್ತಿವೆ.

ಚೀನಾ ಸೈನ್ಯವು ಪೂರ್ವ ಲಡಾಕ್‌ನ ವಾಸ್ತವಿಕ ನಿಯಂತ್ರಣ ರೇಖೆಯ ಬಳಿಯಿರುವ ಹಿಂಭಾಗದ ನೆಲೆಗಳಲ್ಲಿ ಫಿರಂಗಿ ಬಂದೂಕುಗಳು, ಕಾಲಾಳುಪಡೆ ಯುದ್ಧ ವಾಹನಗಳು ಮತ್ತು ಭಾರೀ ಮಿಲಿಟರಿ ಉಪಕರಣಗಳನ್ನು ಜಮೆ ಮಾಡುವುದನ್ನು ಹೆಚ್ಚಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಚೀನಾದ ನಿರ್ಮಾಣಕ್ಕೆ ಆಕ್ರಮಣಕಾರಿಯಾಗಿ ಹೊಂದಿಕೊಳ್ಳಲು ಭಾರತೀಯ ಸೈನ್ಯವು ಹೆಚ್ಚುವರಿ ಸೈನ್ಯದ ಜೊತೆಗೆ ಉಪಕರಣಗಳು ಮತ್ತು ಫಿರಂಗಿ ಬಂದೂಕುಗಳಂತಹ ಶಸ್ತ್ರಾಸ್ತ್ರಗಳನ್ನು ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com