'ಇಂಡಿಯಾ' ಬದಲಿಗೆ 'ಭಾರತ': ಹೆಸರು ಬದಲಾವಣೆ ಕೋರಿದ ಅರ್ಜಿ ಸುಪ್ರೀಂನಲ್ಲಿ ವಜಾ

ಇಂಡಿಯಾ ಎನ್ನುವ ಹೆಸರನ್ನು "ಭಾರತ" ಎಂದು ಬದಲಾಯಿಸಲುನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ. ಆದರೆ ಇದೇ ವಿಚಾರವನ್ನು ಸಂಬಂಧಪಟ್ಟ ಕೇಂದ್ರ ಸಚಿವಾಲಯಗಳ ಮುಂದೆ ಪ್ರಸ್ತಾವಿಸಿ ಪ್ರಾತಿನಿಧ್ಯ ಎಂದು ಪರಿಗಣಿಸಲು ಅವಕಾಶ ಮಾಡಿಕೊಟ್ಟಿತು.
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ನವದೆಹಲಿ: ಇಂಡಿಯಾ ಎನ್ನುವ ಹೆಸರನ್ನು "ಭಾರತ" ಎಂದು ಬದಲಾಯಿಸಲುನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ. ಆದರೆ ಇದೇ ವಿಚಾರವನ್ನು ಸಂಬಂಧಪಟ್ಟ ಕೇಂದ್ರ ಸಚಿವಾಲಯಗಳ ಮುಂದೆ ಪ್ರಸ್ತಾವಿಸಿ ಪ್ರಾತಿನಿಧ್ಯ ಎಂದು ಪರಿಗಣಿಸಲು ಅವಕಾಶ ಮಾಡಿಕೊಟ್ಟಿತು.

ಇಂಡಿಯಾವನ್ನು "ಭಾರತ" ಎಂದು ಸಹ ಕರೆಯಲಾಗುತ್ತದೆ ಎಂದು ದು ಸಂವಿಧಾನವೇ ಹೇಳುತ್ತಿರುವುದರಿಂದ ಮತ್ತೆ ಈ ವಿಚಾರವನ್ನು ನ್ಯಾಯಾಲಯದ ಮುಂದೆ ತರುವ ಅಗತ್ಯವೇನಿತ್ತು? ಎಂದು ಮುಖ್ಯ ನ್ಯಾಯಮೂರ್ತಿಗಳಾದ ಎಸ್.ಎ. ಬೊಬ್ಡೆ, ಹಾಗೂ ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ, ಹೃಷಿಕೇಶ ರಾಯ್ ಅವರನ್ನೊಳಗೊಂಡ ಪೀಠ ಪ್ರಶ್ನೆ ಮಾಡಿದೆ.

ಅರ್ಜಿದಾರರ ಪರ ವಕೀಲಅಸ್ವಿನ್ ವೈಶ್, 'ಇಂಡಿಯಾ' ಎಂಬ ಹೆಸರು ಗ್ರೀಕ್ ಪದ "ಇಂಡಿಕಾ" ದಿಂದ ಬಂದಿದೆ ಎಂದು ವಾದಿಸಿದರು ಮತ್ತು ಆ ಹೆಸರಿನ ಬದಲು "ಭಾರತ" ಎಂದು ಕರೆಯಬೇಕು ಆ ಮೂಲಕ ಪರದೇಶೀಯರ ಗುಲಾಮಗಿರಿಯ ನೆರಳೈನಿಂದ ತಪ್ಪಿಸಬೇಕು ಎಂದು ಅಭಿಪ್ರಾಯಪಟ್ಟರು. 

ಆದರೆ ಅರ್ಜಿದಾರರ ವಾದ ಆಲಿಸಿದ ನ್ಯಾಯಾಲಯ ಇಂತಹಾ ಅರ್ಜಿಯನ್ನು ಮನರಂಜನೆಗಾಗಿ ನ್ಯಾಯಾಲಯದ ಮುಂದೆ ತರುವುದು ಸಲ್ಲದು ಎಂದಿದ್ದು ಅರ್ಜಿ ವಜಾ ಮಾಡಿದೆ. ಆದರೆ ಅರ್ಜಿಯನ್ನು ಸಂಬಂಧಪಟ್ಟ ಸಚಿವಾಲಯದ ಮುಂದೆ ಪ್ರಾತಿನಿಧ್ಯದಡಿಯ;ಲ್ಲಿ ಪರಿಗಣಿಸಲು ನ್ಯಾಯಾಲಯವು ಅನುಮತಿ ನೀಡಿತು.

ಭಾರತೀಯ ಸಂವಿಧಾನಕ್ಕೆ ತಿದ್ದುಪಡಿ ತರುವ ಮೂಲಕ ಇಂಡಿಯಾ ಎಂಬ ಹೆಸರನ್ನು ಭಾರತ ಅಥವಾ ಹಿಂದೂಸ್ಥಾನ ಎಂದು ಬದಲಾಯಿಸುವಂತೆ ನಮಃ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ಮುಘಲ್ ದೊರೆಗಳ ಆಡಳಿತದಲ್ಲಿ ಹಿಂದೂಸ್ಥಾನವಾಗಿದ್ದ ನಮ್ಮ ದೇಶವು, ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಇಂಡಿಯಾ ಆಗಿ ಬದಲಾಗಿದೆ. ಬ್ರಿಟಿಷರು ಇಟ್ಟ ಹೆಸರು ನಮಗೆ ಬೇಡ. ಹೀಗಾಗಿ ಭಾರತ ಅಥವಾ ಹಿಂದೂಸ್ಥಾನವಾಗಿ ಬದಲಿಸುವಂತೆ ಕೋರಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com