ಕೋವಿಡ್-19: ದೆಹಲಿ ಆಸ್ಪತ್ರೆ ದೆಹಲಿಗರಿಗಷ್ಟೇ ಸೀಮಿತ- ಸಿಎಂ ಕೇಜ್ರಿವಾಲ್

ಕೊರೋನಾ ವೈರಸ್ ವ್ಯಾಪಕವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕೊರೋನಾಗೆ ಚಿಕಿತ್ಸೆ ನೀಡುತ್ತಿರುವ ದೆಹಲಿ ಆಸ್ಪತ್ರೆಗಳು ದೆಹಲಿ ಜನರಿಗಷ್ಟೇ ಸೀಮಿತವಾಗಿರಲಿವೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಭಾನುವಾರ ಹೇಳಿದ್ದಾರೆ.
ಕೇಜ್ರಿವಾಲ್
ಕೇಜ್ರಿವಾಲ್

ನವದೆಹಲಿ: ಕೊರೋನಾ ವೈರಸ್ ವ್ಯಾಪಕವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕೊರೋನಾಗೆ ಚಿಕಿತ್ಸೆ ನೀಡುತ್ತಿರುವ ದೆಹಲಿ ಆಸ್ಪತ್ರೆಗಳು ದೆಹಲಿ ಜನರಿಗಷ್ಟೇ ಸೀಮಿತವಾಗಿರಲಿವೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಭಾನುವಾರ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ದೆಹಲಿ ಆಸ್ಪತ್ರೆ ದೆಹಲಿ ಜನತೆಗಷ್ಟೇ ಸೀಮಿತವಾಗಿರಲಿದ್ದು, ಕೇಂದ್ರೀಯ ಆಸ್ಪತ್ರೆಗಳು ಎಲ್ಲರಿಗೂ ಸೇವೆ ಸಲ್ಲಿಸಲಿವೆ. ನರಶಸ್ತ್ರಚಿಕಿತ್ಸೆಯಂತಹ ವಿಶೇಷ ಶಸ್ತ್ರಚಿಕಿತ್ಸೆಗಲನ್ನು ಹೊರತುಪಡಿಸಿ ಖಾಸಗಿ ಆಸ್ಪತ್ರೆಗಳೂ ಕೂಡ ದೆಹಲಿ ನಿವಾಸಿಗಳಿಗೆ ಕಾಯ್ದಿರಿಸಲಾಗಿದೆ ಎಂದು ಹೇಳಿದ್ದಾರೆ. 

ಜೂನ್ ಅಂತ್ಯದ ವೇಳೆಗೆ 15,000 ಹಾಸಿಗೆಗಳ ಅಗತ್ಯತೆ ಬೀಳಲಿದೆ. ನಾಳೆಯಿಂದ ದೆಹಲಿಯ ಎಲ್ಲಾ ಗಡಿಯನ್ನು ತೆರೆಯಲಾಗುತ್ತದೆ. ಹೋಟೆಲ್, ಬ್ಯಾಂಕ್ವೆಟ್ ಹಾಲ್ ಗಳು ಎಂದಿನಂತೆ ಬಂದ್ ಆಗಿರಲಿವೆ. ಇನ್ನು ರೆಸ್ಟೋರೆಂಟ್, ಮಾಲ್ ಹಾಗೂ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ನಿಯಮಗಳಿಗನುಸಾರವಾಗಿ ಅನುಮತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com