1962ರಲ್ಲಿ ಚೀನಾ 37,244 Sq KM ಜಾಗವನ್ನ ವಶಪಡಿಸಿಕೊಂಡಿದೆ: ರಾಹುಲ್‍ಗೆ ಲಡಾಖ್ ಎಂಪಿ ತಿರುಗೇಟು!

ಲಡಾಖ್ ಗಡಿಯಲ್ಲಿ ಚೀನಾ ಸೇನೆ ಅತಿಕ್ರಮಣ ಮಾಡಿ ಭಾರತದ ನೆಲವನ್ನು ಕಬಳಿಸಿದ್ದು ಈ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆಗ್ರಹಿಸಿದ್ದರು. ಇದಕ್ಕೆ ಲಡಾಖ್ ಬಿಜೆಪಿ ಸಂಸದ ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್ ಪ್ರತ್ಯುತ್ತರ ನೀಡಿದ್ದಾರೆ.
ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್-ರಾಹುಲ್
ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್-ರಾಹುಲ್

ನವದೆಹಲಿ: ಲಡಾಖ್ ಗಡಿಯಲ್ಲಿ ಚೀನಾ ಸೇನೆ ಅತಿಕ್ರಮಣ ಮಾಡಿ ಭಾರತದ ನೆಲವನ್ನು ಕಬಳಿಸಿದ್ದು ಈ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆಗ್ರಹಿಸಿದ್ದರು. ಇದಕ್ಕೆ ಲಡಾಖ್ ಬಿಜೆಪಿ ಸಂಸದ ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್ ಪ್ರತ್ಯುತ್ತರ ನೀಡಿದ್ದಾರೆ. 

ಜಮ್ಯಾಂಗ್ ಅವರು ಭಾರತದ ನೆಲ ಸುರಕ್ಷಿತವಾಗಿರುವುದನ್ನು ಸಾಬೀತುಪಡಿಸಿದ್ದಾರೆ. ಲಡಾಖ್ ನ ಒಂದು ಇಂಚು ಭೂಮಿಯೂ ಚೀನಾದ ಪಾಲಾಗಿಲ್ಲ. ಆದರೆ ರಾಹುಲ್ ಗಾಂಧಿ ಮಾತ್ರ ಜನರ ದಾರಿ ತಪ್ಪಿಸುವ ಕೆಲ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ. 

ಅದೇ ಅಲ್ಲದೆ ಕಾಂಗ್ರೆಸ್ ಅವಧಿಯಲ್ಲಿ ಭಾರತ ಭೂಮಿಯನ್ನು ಚೀನಾ ಪಡೆಸಿಕೊಂಡಿರುವುದಕ್ಕೆ ಮಾಹಿತಿ ನೀಡಿದ್ದಾರೆ. ಹೌದು ಲಡಾಖ್ ನಲ್ಲಿ ಭಾರತದ ನೆಲವನ್ನು ಕಬಳಿಸಲಾಗಿದೆ. ಕಾಂಗ್ರೆಸ್ ಆಡಳಿತದ ಅವಧಿಗಳಲ್ಲಿ ಚೀನಿಯರ ಪಾಲಾಗಿರುವ ಲಡಾಖ್ ನ ಪ್ರದೇಶಗಳ ಕುರಿತು ಮಾಹಿತಿ ನೀಡಿದ್ದಾರೆ. 

1962ರಲ್ಲಿ ಕಾಂಗ್ರೆಸ್ ಆಡಳಿತವಾಧಿಯಲ್ಲಿ ಅಕ್ಸಾಯ್ ಚಿನ್ ನ 37,244 ಚದರ ಕಿ.ಮೀ ಜಾಗವನ್ನು ಚೀನಾ ಆಕ್ರಮಿಸಿಕೊಂಡಿತ್ತು. ಯುಪಿಎ ಅವಧಿಯಲ್ಲಿ ಟಿಯಾ ಪಂಗ್ನಾಕ್ ಮತ್ತು ಚಬ್ಜಿ ವ್ಯಾಲಿ ಚೀನಾ ವಶ. 2008ರಲ್ಲಿ ಯುಪಿಎ ಆಡಳಿತಾವಧಿಯಲ್ಲಿ ಡೆಮ್ಜಾಕ್ ನ ಜೊರಾವರ್ ಕೋಟೆಯನ್ನು ಚೀನಾ ಸೇನೆ ನಾಶಪಡಿಸಿತ್ತು. ಡೂಮ್ ಚೆಲೆ ಭೂಪ್ರದೇಶ ಯುಪಿಎ ಅವಧಿಯಲ್ಲಿ ಚೀನಾ ಕೈವಶ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com