ನೇಪಾಳದ ಜೊತೆಗಿನ 'ತಪ್ಪು ಗ್ರಹಿಕೆ'ಗಳನ್ನು ಶೀಘ್ರ ಪರಿಹರಿಸುತ್ತೇವೆ: ಕೇಂದ್ರ ಸಚಿವ ರಾಜನಾಥ್ ಸಿಂಗ್

ನೇಪಾಳದ ಜೊತೆಗಿನ 'ತಪ್ಪು ಗ್ರಹಿಕೆ'ಗಳನ್ನು ಭಾರತ ಶೀಘ್ರವೇ ಪರಿಹರಿಸಿಕೊಳ್ಳಲಿದೆ ಎಂದು ಕೇಂದ್ರ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ರಾಜನಾಥ್ ಸಿಂಗ್
ರಾಜನಾಥ್ ಸಿಂಗ್

ನವದೆಹಲಿ: ನೇಪಾಳದ ಜೊತೆಗಿನ 'ತಪ್ಪು ಗ್ರಹಿಕೆ'ಗಳನ್ನು ಭಾರತ ಶೀಘ್ರವೇ ಪರಿಹರಿಸಿಕೊಳ್ಳಲಿದೆ ಎಂದು ಕೇಂದ್ರ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜನಾಥ್ ಸಿಂಗ್ ಅವರು, ನೇಪಾಳದ ಜೊತೆಗಿನ 'ತಪ್ಪು ಗ್ರಹಿಕೆ'ಗಳನ್ನು ಭಾರಕ ಶೀಘ್ರವೇ ಪರಿಹರಿಸಿಕೊಳ್ಳಲಿದೆ. ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ನೇಪಾಳ ಸರ್ಕಾರದ ನಡೆಯನ್ನು ಭಾರತ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಭಾರತ ರಸ್ತೆ ಕಾಮಗಾರಿ ನಡೆಸುತ್ತಿರುವ ಲಿಪುಲೇಖ್ ಪಾಸ್ ಸಂಪೂರ್ಣ ಭಾರತದ ಪ್ರದೇಶವಾಗಿದೆ. ಈ ಬಗ್ಗೆ ನೇಪಾಳಕ್ಕೆ ಶೀಘ್ರವೇ ಮನವರಿಕೆ ಮಾಡಿಕೊಡಲಾಗುತ್ತದೆ. ಅಂತೆಯೇ ಈ ಕುರಿತಂತೆ ನೇಪಾಳದೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಾಗುತ್ತದೆ ಎಂದು  ಹೇಳಿದರು.

ಉತ್ತರಾಖಂಡಕ್ಕಾಗಿ ವರ್ಚುವಲ್ ರ್ಯಾಲಿಯಲ್ಲ ಪಾಲ್ಗೊಂಡು ಮಾತನಾಡಿದ ರಾಜನಾಥ್ ಸಿಂಗ್ ಅವರು, ನೇಪಾಳ ಮತ್ತು ಭಾರತ ನಡುವೆ ಈಗಲೂ ಗಟ್ಟಿಯಾದ ಸೌಹಾರ್ಧ ಸಂಬಂಧವಿದೆ. ನಮ್ಮ ಸಂಬಂಧವನ್ನು ವಿಶ್ವದ ಯಾವುದೇ ಶಕ್ತಿಯೂ ಬೇರ್ಪಡಿಸಲಾಗದು. ಐತಿಹಾಸಿಕವಾಗಿ ಮಾತ್ರವಲ್ಲದೇ, ಸಾಂಸ್ಕೃತಿಕ, ಧಾರ್ಮಿಕವಾಗಿಯೂ ನೇಪಾಳ ನಮ್ಮ ಸಹೋದರ ರಾಷ್ಟ್ಪವಾಗಿದೆ ಎಂಬುದನ್ನು ಭಾರತ ಎಂದೂ ಮರೆಯುವುದಿಲ್ಲ ಎಂದು ಹೇಳಿದರು.

ಕಳೆದ ಶನಿವಾರ ನೇಪಾಳ ಸಂಸತ್ತು ಭಾರತದ ಗಡಿ ಪ್ರದೇಶವನ್ನೂ ಕೂಡ ತನ್ನ ಗಡಿ ಭಾಗಕ್ಕೆ ಸೇರಿಸಿದ್ದ ಭೂ ನಕ್ಷಗೆ ಅನುಮೋದನೆ ನೀಡಿತ್ತು. ಇದು ಭಾರತ ಮತ್ತು ನೇಪಾಳದ ನಡುವಿನ ಶೀಥಲ ಸಮರಕ್ಕೆ ದಾರಿ ಮಾಡಿಕೊಟ್ಟಿತ್ತು, ಇದೀಗ ಈ ವಿಚಾರವನ್ನು ಮಾತುಕತೆ ಮೂಲಕ ಬಗೆ ಹರಿಸಿಕೊಳ್ಳುತ್ತೇವೆ ಎಂದು ಭಾರತ ಸರ್ಕಾರ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com