ವಿದೇಶಿ ಯೋಧರು ಗಡಿ ಪ್ರವೇಶಿಸಿದ್ದರೂ, 7 ವಾರಗಳಿಂದ ಪ್ರಧಾನಿ ಮೋದಿ ಮೌನವಾಗಿದದ್ದೇಕೆ: ಚಿದಂಬರಂ ಪ್ರಶ್ನೆ

ವಿದೇಶದ ಸೈನಿಕರು ನಮ್ಮ ಗಡಿ ಪ್ರವೇಶಿಸಿದ್ದರೂ, ಕಳೆದ 7 ವಾರಗಳಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೌನ ತಾಳಿದ್ದೇಕೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ಅವರು ಪ್ರಶ್ನಿಸಿದ್ದಾರೆ. 
ಚಿದಂಬರಂ
ಚಿದಂಬರಂ

ನವದೆಹಲಿ: ವಿದೇಶದ ಸೈನಿಕರು ನಮ್ಮ ಗಡಿ ಪ್ರವೇಶಿಸಿದ್ದರೂ, ಕಳೆದ 7 ವಾರಗಳಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೌನ ತಾಳಿದ್ದೇಕೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ಅವರು ಪ್ರಶ್ನಿಸಿದ್ದಾರೆ. 

ಲಡಾಖ್ ಗಡಿಯಲ್ಲಿ ಉಭಯ ಸೇನೆಗಳ ನಡುವೆ ಸಂಘರ್ಷ ಮುಂದುವರೆಸಿದ್ದರೂ ಪ್ರಧಆನಿ ಮೋದಿಯವರು ಮೇ.5 ರಿಂದ ಈ ಬಗ್ಗೆ ತುಟಿಬಿಚ್ಚಿ ಮಾತನಾಡಿಲ್ಲ. ವಿದೇಶಿ ಸೈನಿಕರು ಒಂದು ದೇಶದ ಗಡಿ ದಾಟಿ ಬಂದಿದ್ದರೂ, ಯಾವುದೇ ರಾಷ್ಟ್ರದ ಮುಖ್ಯಸ್ಥರು ಇಷ್ಟು ದಿನ ಮೌನವಾಗಿರುವುದನ್ನು ನೋಡಿದ್ದೀರಾ? ಎಂದು ಟ್ವಿಟರ್ ನಲ್ಲಿ ಪ್ರಶ್ನಿಸಿದ್ದಾರೆ. 

ಈ ಬಗ್ಗೆ ರಕ್ಷಣಾ ಸಚಿವಾಲಯವಾಗಲೀ, ಸೇನಾ ಮುಖ್ಯ ಕಚೇರಿಯಾಗಲೀ ಅಧಿಕೃತವಾಗಿ ಹೇಳಿಕೆ ನೀಡುವುದನ್ನು ಇಡೀ ದೇಶ ಎದುರು ನೋಡುತ್ತಿದೆ. 

ಸಂಘರ್ಷದಲ್ಲಿ ಹಲವು ಭಾರತೀಯ ಯೋಧರು ಪ್ರಾಣತೆತ್ತಿದ್ದಾರೆ. ಇದರಲ್ಲಿ ತ್ಯಾಗ ಮಾಡಿದವರಾರು? ತಮಿಳುನಾಡಿನ ರಾಮನಾಥಪುರಂನ ಯೋಧರೊಬ್ಬರು ಹುತಾತ್ಮರಾಗಿದ್ದಾರೆಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com