'ಓರ್ವ ಮಗನ ಹೆರಲು ಹೋಗಿ 5 ಹೆಣ್ಣು ಮಕ್ಕಳ ಹೆತ್ತ ಕೇಂದ್ರ ಸರ್ಕಾರ': ಕಾಂಗ್ರೆಸ್ ಮುಖಂಡನ ವಿವಾದಾತ್ಮಕ ಹೇಳಿಕೆ

ಕೇಂದ್ರದ ಮೋದಿ ಸರ್ಕಾರ ವಿಕಾಸ ಎಂಬ ಓರ್ವ ಮಗನನ್ನು ಹೆರಲು ಹೋಗಿ ಜಿಎಸ್ ಟಿ, ನೋಟು ರದ್ಧತಿಯಂತಹ ಐದು ಹೆಣ್ಣುಮಕ್ಕಳನ್ನು ಹೆತ್ತಿದೆ ಎಂದು ಮಧ್ಯ ಪ್ರದೇಶದ ಕಾಂಗ್ರೆಸ್ ಮುಖಂಡ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಮುಖಂಡ ಜಿತು ಪಟ್ವಾರಿ
ಕಾಂಗ್ರೆಸ್ ಮುಖಂಡ ಜಿತು ಪಟ್ವಾರಿ

ಭೋಪಾಲ್: ಕೇಂದ್ರದ ಮೋದಿ ಸರ್ಕಾರ ವಿಕಾಸ ಎಂಬ ಓರ್ವ ಮಗನನ್ನು ಹೆರಲು ಹೋಗಿ ಜಿಎಸ್ ಟಿ, ನೋಟು ರದ್ಧತಿಯಂತಹ ಐದು ಹೆಣ್ಣುಮಕ್ಕಳನ್ನು ಹೆತ್ತಿದೆ ಎಂದು ಮಧ್ಯ ಪ್ರದೇಶದ ಕಾಂಗ್ರೆಸ್ ಮುಖಂಡ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕೇಂದ್ರದ ಮೋದಿ ಸರ್ಕಾರದ ಯೋಜನೆಗಳನ್ನು ಟೀಕಿಸುವ ಭರದಲ್ಲಿ ಮಧ್ಯ ಪ್ರದೇಶದ ಕಾಂಗ್ರೆಸ್ ಮುಖಂಡ ಜಿತು ಪಟ್ವಾರಿ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದು, ಸರ್ಕಾರ ವಿಕಾಸ ಎಂಬ ಓರ್ವ ಮಗನನ್ನು ಹೆರಲು ಹೋಗಿ ಐದು ಹೆಣ್ಣುಮಕ್ಕಳನ್ನು ಹೆತ್ತಿದೆ ಎಂದು ಹೇಳಿದ್ದಾರೆ. 

ಜಿಎಸ್ ಟಿ, ನೋಟು ರದ್ದತಿ ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳನ್ನು ಜಿತು ಪಟ್ವಾರಿ ಹೆಣ್ಣುಮಕ್ಕಳಿಗೆ ಹೋಲಿಕೆ ಮಾಡಿದ್ದು, ವಿಕಾಸ ಅಥವಾ ಅಭಿವೃದ್ಧಿಯನ್ನು ಗಂಡುಮಗುವಿಗೆ ಹೋಲಿಕೆ ಮಾಡಿದ್ದಾರೆ. 

ಜನ ಗಂಡು ಮಗುವಾಗುತ್ತದೆ ಎಂದು ಭಾವಿಸಿದ್ದರು. ಆದರೆ ಅವರು ಐದು ಹೆಣ್ಣುಮಕ್ಕಳನ್ನು ಕೊಟ್ಟಿದ್ದಾರೆ. ಓರ್ವ ಮಗನನ್ನು ಹೆರಲು ಹೋಗಿ ಕೇಂದ್ರ ಸರ್ಕಾರ ಐದು ಹೆಣ್ಣುಮಕ್ಕಳನ್ನು ಹೆತ್ತಿದೆ. ಆದರೂ ಈವರೆಗೂ ವಿಕಾಸ ಎಂಬ ಗಂಡುಮಗುವನ್ನು ಹೆರಲು ಕೇಂದ್ರ ಸರ್ಕಾರದಿಂದ ಸಾಧ್ಯವಾಗಿಲ್ಲ ಎಂದು ಜಿತು ಪಟ್ವಾರಿ ಟ್ವೀಟ್ ಮಾಡಿದ್ದಾರೆ.

ಮಧ್ಯ ಪ್ರದೇಶದ ಮಾಜಿ ಶಿಕ್ಷಣ ಸಚಿವರೂ ಕೂಡ ಆಗಿದ್ದ ಜಿತು ಪಟ್ವಾರಿ ಅವರೇ ಹೆಣ್ಣುಮಕ್ಕಳು ಕೀಳುಮಟ್ಟದಲ್ಲಿ ಮಾತನಾಡಿರುವುದು ಇದೀಗ ವಿವಾದಕ್ಕೆ ಗ್ರಾಸವಾಗಿದೆ.

ಇನ್ನು ತನ್ನ ಟ್ವೀಟ್ ವಿವಾದಕ್ಕೆ ಗ್ರಾಸವಾಗುತ್ತಿದ್ದಂತೆಯೇ ಆ ಟ್ವೀಟ್ ಡಿಲೀಟ್ ಮಾಡಿರುವ ಜಿತು ಪಟ್ವಾರಿ, ನನ್ನ ಟ್ವೀಟ್ ನಿಂದ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ಯಾವುದೇ ಹೆಣ್ಣನ್ನೂ ನೋಯಿಸುವ ಭಾವನೆ ನನಗಿರಲಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಸ್ತ್ರೀಯರನ್ನು ದೈವತ್ವಹೊಂದಿರುವವರು ಎಂದು ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com