ಸಿಎಎ, ಎನ್ ಪಿಆರ್ ಭೀತಿ: ತಮಿಳುನಾಡು ಮುಸ್ಲಿಂ ಮುಖಂಡರಿಂದ ರಜನಿಕಾಂತ್ ಭೇಟಿ!

ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಜನಂಸಂಖ್ಯಾ ನೋಂದಣಿ ವಿಚಾರವಾಗಿ ತಮಿಳುನಾಡಿನ ಮುಸ್ಲಿಂ ಮುಖಂಡರು ಇಂದು ಸೂಪರ್​ ಸ್ಟಾರ್​ ರಜಿನಿಕಾಂತ್ ಅವರನ್ನ ಭೇಟಿ ಚರ್ಚೆ ನಡೆಸಿದರು.
ಮುಸ್ಲಿಂ ಮುಖಂಡರಿಂದ ರಜನಿಕಾಂತ್ ಭೇಟಿ
ಮುಸ್ಲಿಂ ಮುಖಂಡರಿಂದ ರಜನಿಕಾಂತ್ ಭೇಟಿ

ಚೆನ್ನೈ: ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಜನಂಸಂಖ್ಯಾ ನೋಂದಣಿ ವಿಚಾರವಾಗಿ ತಮಿಳುನಾಡಿನ ಮುಸ್ಲಿಂ ಮುಖಂಡರು ಇಂದು ಸೂಪರ್​ ಸ್ಟಾರ್​ ರಜಿನಿಕಾಂತ್ ಅವರನ್ನ ಭೇಟಿ ಚರ್ಚೆ ನಡೆಸಿದರು.

ಚೆನ್ನೈನಲ್ಲಿರುವ ರಜನಿಕಾಂತ್ ಅವರ ಮನೆಗೆ ಜಮಾತ್​​-ಉಲ್​​-ಉಲಾಮಾ ಸಬಾಯ್ ಸಂಘಟನೆಯ ನಿಯೋಗ ಆಗಮಿಸಿ ರಜಿನಿಕಾಂತ್ ಅವರನ್ನು ಭೇಟಿಯಾಗಿದೆ. ಈ ವೇಳೆ ಎನ್​ಪಿಆರ್(national population register)​ ಕುರಿತು ಮನವಿಯನ್ನು ಸಲ್ಲಿಸಿದೆ.

ಭೇಟಿ ಬಳಿಕ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಂಘಟನೆಯ ಅಧ್ಯಕ್ಷ ಕೆ.ಎಂ ಬಖಾವಿ, ನಮ್ಮ ನಿಯೋಗ ರಜಿನಿಕಾಂತ್​ರನ್ನ ಭೇಟಿಯಾಗಿ, ಎನ್​ಪಿಆರ್​ಗೆ ಸಂಬಂಧಿಸಿದಂತೆ ಕೆಲವು ವಿಚಾರಗಳನ್ನ ಚರ್ಚಿಸಲಾಯ್ತು. ಎನ್​ಪಿಆರ್​ನಿಂದ ಮುಸ್ಲಿಮರಿಗೆ ಆಗುವ ಸಮಸ್ಯೆಗಳ ಬಗ್ಗೆ ನಾವು ವಿವರಿಸಿದ್ದೇವೆ. ರಜಿನಿಕಾಂತ್ ಅವರು ನಮ್ಮ ವಾದವನ್ನ ಅರ್ಥ ಮಾಡಿಕೊಂಡಿದ್ದಾರೆ. ಮುಸ್ಲಿಮರಲ್ಲಿ ಆತಂಕ ನಿವಾರಿಸಲು ಅಗತ್ಯವಾದ ಕೆಲಸವನ್ನ ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com