ಬಂಗಾಳದಲ್ಲಿರುವ ಎಲ್ಲ ಬಾಂಗ್ಲಾದೇಶಿಗರೂ ಭಾರತೀಯರೇ.. ಎಲ್ಲರಿಗೂ ಭಾರತೀಯ ಪೌರತ್ವ ನೀಡಲಾಗಿದೆ: ಸಿಎಂ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದಲ್ಲಿ ನೆಲೆಸಿರುವ ಎಲ್ಲ ಬಾಂಗ್ಲಾದೇಶಿಗರೂ ಭಾರತೀಯರೇ ಆಗಿದ್ದು, ಅವರಿಗೆ ಈಗಾಗಲೇ ಭಾರತೀಯ ಪೌರತ್ವ ನೀಡಲಾಗಿದೆ ಎಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ನೆಲೆಸಿರುವ ಎಲ್ಲ ಬಾಂಗ್ಲಾದೇಶಿಗರೂ ಭಾರತೀಯರೇ ಆಗಿದ್ದು, ಅವರಿಗೆ ಈಗಾಗಲೇ ಭಾರತೀಯ ಪೌರತ್ವ ನೀಡಲಾಗಿದೆ ಎಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಬಂಗಾಶದ ಕಾಲಿಯಾಗಂಜ್ ನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ಸಿಎಎ ಕುರಿತಂತೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಪಶ್ಚಿಮ ಬಂಗಾಳದಲ್ಲಿ ನೆಲೆಸಿರುವ ಎಲ್ಲ ಬಾಂಗ್ಲಾದೇಶಿಗರೂ ಭಾರತೀಯರೇ ಆಗಿದ್ದು, ಅವರಿಗೆ ಈಗಾಗಲೇ ಭಾರತೀಯ ಪೌರತ್ವ ನೀಡಲಾಗಿದೆ. ನೀವು ಹೊಸದಾಗಿ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸುವ ಅವಶ್ಯಕತೆ ಇಲ್ಲ ಎಂದು  ಹೇಳಿದ್ದಾರೆ.

'ಬಂಗಾಳ ಮತ್ತೊಂದು ದೆಹಲಿಯಾಗಲು ನಾನು ಬಿಡುವುದಿಲ್ಲ. ಬಾಂಗ್ಲಾದೇಶದಿದ ಬಂದು ಇಲ್ಲಿ ವರ್ಷಗಳಿಂದಲೂ ನೆಲೆಸಿರುವವರು ಭಾರತೀಯರೇ ಆಗಿದ್ದಾರೆ. ಅವರಿಗೆಲ್ಲರಿಗೂ ಪೌರತ್ವ ದೊರೆತಿದ್ದು, ನೀವು ಈಗಾಗಲೇ ಲೋಕಸಭೆ ಚುನಾವಣೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡಿದ್ದೀರಿ. ಹೀಗಾಗಿ ಮತ್ತೆ ನೀವು ನಿಮ್ಮ ಪೌರತ್ವ ಸಾಬೀತು ಪಡಿಸುವ ಅವಶ್ಯಕತೆ ಇಲ್ಲ. ಚುನಾವಣೆ ಮುಗಿದ ಬಳಿಕ ಅವರು ಈಗ ನೀವು ಭಾರತೀಯರಲ್ಲ ಎಂದು ಹೇಳುತ್ತಿದ್ದಾರೆ. ಅವರ ಮಾತಿಗೆ ಸೊಪ್ಪು ಹಾಕಬೇಡಿ ಎಂದು ಹೇಳಿದ್ದಾರೆ.

ಅಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಮಾತನಾಡಿದ ದೀದಿ, ಇದು ಪಶ್ಚಿಮ ಬಂಗಾಳ ಎನ್ನುವುದನ್ನು ಮರೆಯದಿರಿ. ದೆಹಲಿಯಲ್ಲಿ ಆಗಿದ್ದು ಇಲ್ಲಿ ಆಗಲು ಸಾಧ್ಯವೇ ಇಲ್ಲ. ಆಗಲು ನಾನು ಬಿಡುವುದೂ ಇಲ್ಲ, ಬಂಗಾಳ ಮತ್ತೊಂದು ದೆಹಲಿ ಅಥವಾ ಉತ್ತರ ಪ್ರದೇಶ ಆಗಲು ನಾನು ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com