ದೆಹಲಿ ರಕ್ತಪಾತಕ್ಕೆ ಹೈದರಾಬಾದ್ ವಿದ್ಯಾರ್ಥಿಗಳ ಬಳಸಿ ವದಂತಿ ಸಂದೇಶ ಸೃಷ್ಟಿ: ದೊಡ್ಡ ಸಂಚು ಬಯಲಿಗೆಳೆದ ಗುಪ್ತಚರ ಇಲಾಖೆ

ದೆಹಲಿಯಲ್ಲಿ ರಕ್ತಪಾತ ಸೃಷ್ಟಿಸಲು ಹೈದರಾಬಾದ್ ವಿದ್ಯಾರ್ಥಿಗಳನ್ನು ಬಳಸಿಕೊಂಡು ಸಾಮಾಜಿನ ಮಾಧ್ಯಮಗಳಲ್ಲಿ ವದಂತಿಗಳನ್ನು ಹಬ್ಬಿಸಲು ಯತ್ನಗಳು ನಡೆದಿದ್ದು, ಈ ಕುರಿತ ದೊಡ್ಡ ಸಂಚನ್ನು ಗುಪ್ತಚರ ದಳದ ಅಧಿಕಾರಿಗಳು ಬಯಲಿಗೆಳೆದಿದ್ದಾರೆ.

Published: 03rd March 2020 08:03 AM  |   Last Updated: 03rd March 2020 08:03 AM   |  A+A-


Delhi violence

ದೆಹಲಿ ಹಿಂಸಾಚಾರ

Posted By : Manjula VN
Source : Online Desk

ನವದೆಹಲಿ: ದೆಹಲಿಯಲ್ಲಿ ರಕ್ತಪಾತ ಸೃಷ್ಟಿಸಲು ಹೈದರಾಬಾದ್ ವಿದ್ಯಾರ್ಥಿಗಳನ್ನು ಬಳಸಿಕೊಂಡು ಸಾಮಾಜಿನ ಮಾಧ್ಯಮಗಳಲ್ಲಿ ವದಂತಿಗಳನ್ನು ಹಬ್ಬಿಸಲು ಯತ್ನಗಳು ನಡೆದಿದ್ದು, ಈ ಕುರಿತ ದೊಡ್ಡ ಸಂಚನ್ನು ಗುಪ್ತಚರ ದಳದ ಅಧಿಕಾರಿಗಳು ಬಯಲಿಗೆಳೆದಿದ್ದಾರೆ. 

ವದಂತಿಗಳನ್ನು ಹಬ್ಬಿಸಲು ಬಳಸಲಾದ ನಕಲಿ ಸಂದೇಶಗಳ ಪಟ್ಟಿಯನ್ನು ಗುಪ್ತಚರ ದಳ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆಂದು ವರದಿಗಳು ತಿಳಿಸಿವೆ. 

ಇಂತಹದ್ದೇ ಹ್ಯಾಷ್ ಟ್ಯಾಗ್ ಬಳಸಿ ಸಂದೇಶಗಳನ್ನು ಸೃಷ್ಟಿಸಬೇಕು ಎಂಬ ಸೂಚನೆಯನ್ನು ವಿದ್ಯಾರ್ಥಿಗಳಿಗೆ ನೀಡಲಾಗಿದೆ ಎಂಬ ವಿಚಾರ ತಿಳಿದುಬಂದಿದೆ. 

ಈ ನಡುವೆ ಭಾರತದಲ್ಲಿನ ಮುಸ್ಲಿಮರನ್ನು ಪ್ರಚೋದಿಸುವ ಪಾಕಿಸ್ತಾನ ಸರ್ಕಾರದ ಟ್ವಿಟರ್ ಖಾತೆಯನ್ನು ಕೂಡ ಬಳಸಿಕೊಳ್ಳಲಾಗುತ್ತಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. 

ಜನಗಣಮನ ಹೇಳಲು ಬಲವಂತಪಡಿಸಿ ಫೈಜಾನ್ ಎಂಬಾದನನನ್ನು ದೆಹಲಿ ಪೊಲೀಸರು ಹಿಗ್ಗಾಮುಗ್ಗಾ ಥಳಿಸಿದ್ದು, ಬಳಿಕ ಆತ ಸಾವನ್ನಪ್ಪಿದ್ದಾನೆ. ಫೈಜಾನ್ ಸಾವಿಗೆ ದೆಹಲಿ ಪೊಲೀಸರೇ ಹೊಣೆ. ಆತ ಯಾವುದೇ ವೈದ್ಯಕೀಯ ಉಪಚಾರವಿಲ್ಲದೇ ಸಾವನ್ನಪ್ಪಿದ್ದಾನೆ. ದೆಹಲಿ ಪೊಲೀಸರು ಕೊಲೆಗಾರರು. ಫೈಜಾನ್'ಗೆ ನ್ಯಾಯಬೇಕು. ಫೈಜಾನ್'ಗೆ ನ್ಯಾಯಬೇಕು. ಅಮಿತ್ ಶಾ ರಾಜೀನಾಮೆ ನೀಡಬೇಕು. ಫೈಜಾನ್ ಸಾವಿಗೆ ಅಮಿತ್ ಶಾ, ದೆಹಲಿ ಪೊಲೀಸರು ಮೌನ ತಾಳಿಸಿದ್ದಾರೆಂದು ನಕಲಿ ಟ್ವೀಟ್ ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತೆ ವಿದ್ಯಾರ್ಥಿಗಳಿಗೆ ಆದೇಶಿಸಿದ್ದಾರೆ ಹೇಳಲಾಗುತ್ತಿದೆ. 

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp