ಕೊರೋನಾ ವಿರುದ್ಧ ಹೋರಾಟಕ್ಕೆ ಕೈ ಜೋಡಿಸಿದ ಅಂಬಾನಿ, 15 ದಿನದಲ್ಲೇ 100 ಬೆಡ್ ಸಾಮರ್ಥ್ಯವುಳ್ಳ ಆಸ್ಪತ್ರೆ ನಿರ್ಮಾಣ, ನಿತ್ಯ 1 ಲಕ್ಷ ಮಾಸ್ಕ್ ತಯಾರಿ
ವಿಶ್ವಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ವಿರುದ್ಧದ ಭಾರತದ ಹೋರಾಟಕ್ಕೆ ಖ್ಯಾತ ಉಧ್ಯಮಿ ಮುಖೇಶ್ ಅಂಬಾನಿ ಕೈ ಜೋಡಿಸಿದ್ದು, ಕೊರೋನ ಸೋಂಕಿತರಿಗಾಗಿ 15 ದಿನದಲ್ಲೇ 100 ಬೆಡ್ ಸಾಮರ್ಥ್ಯವುಳ್ಳ ಆಸ್ಪತ್ರೆ ನಿರ್ಮಿಸಿದ್ದಾರೆ.
Published: 24th March 2020 02:15 PM | Last Updated: 24th March 2020 02:15 PM | A+A A-

ಮುಖೇಶ್ ಅಂಬಾನಿ ಅವರ ಕೊರೋನಾ ವೈರಸ್ ಚಿಕಿತ್ಸಾ ಆಸ್ಪತ್ರೆ
ಮುಂಬೈ: ವಿಶ್ವಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ವಿರುದ್ಧದ ಭಾರತದ ಹೋರಾಟಕ್ಕೆ ಖ್ಯಾತ ಉಧ್ಯಮಿ ಮುಖೇಶ್ ಅಂಬಾನಿ ಕೈ ಜೋಡಿಸಿದ್ದು, ಕೊರೋನ ಸೋಂಕಿತರಿಗಾಗಿ 15 ದಿನದಲ್ಲೇ 100 ಬೆಡ್ ಸಾಮರ್ಥ್ಯವುಳ್ಳ ಆಸ್ಪತ್ರೆ ನಿರ್ಮಿಸಿದ್ದಾರೆ.
ಇತ್ತೀಚೆಗಷ್ಟೇ ಮಹಾರಾಷ್ಟ್ರ ಸಿಎಂ ಅವರ ನಿಧಿಗೆ ಮುಖೇಶ್ ಅಂಬಾನಿ ಐದು ಕೋಟಿ ರೂಪಾಯಿಗಳ ಸಹಾಯ ಧನವನ್ನು ನೀಡಿದ್ದರು. ಇದರ ಬೆನ್ನಲ್ಲೇ ಮುಂಬೈ ಮಹಾನಗರ ಪಾಲಿಕೆಯ ನೆರವು ಪಡೆದು ಹೆಚ್.ಎನ್. ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯನ್ನು, ಮುಂಬೈನ ಸವೆನ್ ಹಿಲ್ಸ್ ಏರಿಯಾದಲ್ಲಿ ಕೇವಲ ಎರಡು ವಾರದ ಸಮಯದಲ್ಲೇ ಆಸ್ಪತ್ರೆಯೊಂದನ್ನು ನಿರ್ಮಿಸಿದ್ದಾರೆ.
ಈ ವಿಶೇಷ ಆಸ್ಪತ್ರೆಯಲ್ಲಿ ಒಟ್ಟು 200 ಬೆಡ್ ಗಳ ಸಾಮರ್ಥ್ಯವಿದ್ದು, ಅಲ್ಲದೆ ನೆಗೆಟಿವ್ ಪ್ರೆಶರ್ ಕೊಠಡಿಯಂತಹ ಸೌಲಭ್ಯ ಕೂಡಾ ಇದೆ. ಅಲ್ಲದೇ ಲೋದಿವಲಿಯಲ್ಲಿ ಆರ್.ಐ.ಎಲ್. ಇಂಡಸ್ಟ್ರೀಸ್ ವತಿಯಿಂದ ಐಸೋಲೇಶನ್ ಸೌಲಭ್ಯವನ್ನು ನೀಡಲಾಗಿದೆ. ರಿಲಯನ್ಸ್ ಅಗತ್ಯವಿರುವ ಮಾಸ್ಕ್ ಗಳ ತಯಾರಿಕೆಯಲ್ಲಿ ಕೂಡಾ ತೊಡಗಿಕೊಂಡಿದ್ದು ಪ್ರತಿದಿನ ಒಂದು ಲಕ್ಷಕ್ಕೂ ಅಧಿಕ ಮಾಸ್ಕ್ ತಯಾರಿಸುವ ಕಾಯಕವನ್ನು ರಿಲಯನ್ಸ್ ತನ್ನ ಸಂಸ್ಥೆಗಳ ಮೂಲಕ ಮಾಡುತ್ತಿದೆ.
ಇನ್ನು ದೇಶದಲ್ಲಿ ಕೊರೋನಾ ವೈರಸ್ ವಿರುದ್ಧ ಹೋರಾಡಲು ದೇಶದ ಪ್ರಮುಖ ಉದ್ಯಮಿಗಳು ತಮ್ಮ ಕೈಲಾದ ಸಹಾಯವನ್ನು ಮಾಡಲು ಮುಂದಾಗಿದ್ದಾರೆ. ಚಿತ್ರನಟ ಸೂಪರ್ ಸ್ಟಾರ್ ರಜನಿಕಾಂತ್ ಅವರು ತಮಿಳುನಾಡು ಸಿನಿಮಾ ಸಿಬ್ಬಂದಿಗಳ ಒಕ್ಕೂಟಕ್ಕೆ 50 ಲಕ್ಷ ರೂ ಸಹಾಯಧನ ನೀಡಿದ್ದರು. ಅಂತೆಯೇ ವೆಂಡೇಟಾದ ಅಧ್ಯಕ್ಷ ಅನಿಲ್ ಅಗರವಾಲ್ ಅವರು 100 ಕೋಟಿ ರೂ ನೀಡುವುದಾಗಿ ಹೇಳಿದ್ದರು. ಅಂತೆಯೇ ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಅವರು ತಮ್ಮ ರೆಸಾರ್ಟ್ ಗಳನ್ನು ಕೊರೋನಾ ಪೀಡಿತರ ಚಿಕಿತ್ಸೆಗೆ ಬಳಸಿಕೊಳ್ಳಿ ಎಂದು ಹೇಳಿದ್ದರು.