ಕೊರೋನಾ ವೈರಸ್ ಪರೀಕ್ಷೆಗೆ ತಯಾರಾಯ್ತು ಮೊದಲ ಮೇಡ್ ಇನ್ ಇಂಡಿಯಾ ಕಿಟ್: ತಯಾರಿಸಿದ್ದು ಯಾರು ಗೊತ್ತೇ?

ದೇಶಾದ್ಯಂತ ಕೊರೋನಾ ವೈರಸ್ ಹರಡುತ್ತಿದ್ದು, ಶಂಕಿತ ಸೋಂಕಿತರಿಗೆ ರೋಗಲಕ್ಷಣಗಳನ್ನು ದೃಢಪಡಿಸುವುದಕ್ಕೆ ಟೆಸ್ಟ್ ಕಿಟ್ ಗಳ ತುರ್ತು ಅಗತ್ಯವಿದೆ. ಈ ಸಂದರ್ಭದಲ್ಲೇ ಮೊದಲ ಮೇಡ್ ಇನ್ ಇಂಡಿಯಾ ಕಿಟ್ ತಯಾರಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪುಣೆ: ದೇಶಾದ್ಯಂತ ಕೊರೋನಾ ವೈರಸ್ ಹರಡುತ್ತಿದ್ದು, ಶಂಕಿತ ಸೋಂಕಿತರಿಗೆ ರೋಗಲಕ್ಷಣಗಳನ್ನು ದೃಢಪಡಿಸುವುದಕ್ಕೆ ಟೆಸ್ಟ್ ಕಿಟ್ ಗಳ ತುರ್ತು ಅಗತ್ಯವಿದೆ. ಈ ಸಂದರ್ಭದಲ್ಲೇ ಮೊದಲ ಮೇಡ್ ಇನ್ ಇಂಡಿಯಾ ಕಿಟ್ ತಯಾರಾಗಿದೆ. 

ಪುಣೆ ಮೂಲದ ಮಾಲಿಕ್ಯುಲರ್ ಡೈಯಾಗ್ನೋಸ್ಟಿಕ್ಸ್ ಕಂಪನಿ, ಮೈಲ್ಯಾಬ್ ಡಿಸ್ಕವರಿ ಸೊಲ್ಯೂಷನ್ಸ್, ಕೊರೋನಾ ವೈರಸ್ ಸೋಂಕು ಪರೀಕ್ಷೆಗೆ ಮೊಟ್ಟ ಮೊದಲ ಮೇಡ್ ಇನ್ ಇಂಡಿಯಾ ಕಿಟ್ ನ್ನು ತಯಾರಿಸಿದೆ. 

ಕೇವಲ 6 ವಾರಗಳಲ್ಲಿ ಕಿಟ್ ತಯಾರಾಗಿದ್ದು, ದಾಖಲೆಯನ್ನು ನಿರ್ಮಿಸಿದೆ. ಈ ಟೆಸ್ಟಿಂಗ್ ಕಿಟ್ ಭಾರತೀಯ ಎಫ್ ಡಿಎ/ ಕೇಂದ್ರ ಔಷಧಿಗಳ ಪ್ರಮಾಣಿತ ನಿಯಂತ್ರಣ ಸಂಸ್ಥೆ (ಸಿಡಿಎಸ್ ಸಿಒ)ಯಿಂದ ವಾಣಿಜ್ಯ ಅನುಮೋದನೆ ದೊರೆತಿದೆ. 

ಸ್ಥಳೀಯ ಹಾಗೂ ಕೇಂದ್ರ ಸರ್ಕಾರದ ಸಹಕಾರದಿಂದ ಮೈಲ್ಯಾಬ್ ಪ್ಯಾಥೋ ಡಿಟೆಕ್ಟ್ ಕೋವಿಡ್-19 ಕ್ವಾಲಿಟೆಟೀವ್ ಪಿಸಿಆರ್ ಕಿಟ್ (Mylab PathoDetect COVID-19 Qualitative PCR kit) ನ್ನು ತಯಾರಿಸುವುದಕ್ಕೆ ಸಾಧ್ಯವಾಗಿದೆ. ಕೋವಿಡ್-19 ಕಿಟ್ ನ್ನು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಸಿಡಿಸಿ ಮಾರ್ಗಸೂಚಿಗಳ ಪ್ರಕಾರ ದಾಖಲೆಯ ಸಮಯದಲ್ಲಿ ತಯಾರಿಸಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹಸ್ಮುಖ್ ರಾವಲ್ ಹೇಳಿದ್ದಾರೆ. ಈ ಕಿಟ್ ನಿಂದ ಕೇವಲ 2.5 ಗಂಟೆಗಳಲ್ಲಿ ಸೋಂಕು ಪರೀಕ್ಷೆ ಫಲಿತಾಂಶ ಲಭ್ಯವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com