21 ದಿನದಲ್ಲಿ 9 ಬಡ ಕುಟುಂಬಗಳಿಗೆ ಸಹಾಯ ಮಾಡಿ, ವೈದ್ಯರಿಗೆ ಕಿರುಕುಳ ನೀಡದಿರಿ: ಪ್ರಧಾನಿ ಮೋದಿ

21 ದಿನಗಳಲ್ಲಿ 9 ಬಡ ಕುಟುಂಬಗಳಿಗೆ ಆಹಾರ ನೀಡಿ, ಸಹಾಯ ಮಾಡಿ. ಚಿಕಿತ್ಸೆ ನೀಡುವ ವೈದ್ಯರಿಗೆ ಕಿರುಕುಳ ನೀಡದಿರಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜನತೆ ಬಳಿ ಮನವಿ ಮಾಡಿಕೊಂಡಿದ್ದಾರೆ. 
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ನವದೆಹಲಿ: 21 ದಿನಗಳಲ್ಲಿ 9 ಬಡ ಕುಟುಂಬಗಳಿಗೆ ಆಹಾರ ನೀಡಿ, ಸಹಾಯ ಮಾಡಿ. ಚಿಕಿತ್ಸೆ ನೀಡುವ ವೈದ್ಯರಿಗೆ ಕಿರುಕುಳ ನೀಡದಿರಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜನತೆ ಬಳಿ ಮನವಿ ಮಾಡಿಕೊಂಡಿದ್ದಾರೆ. 

ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಯ ಜನತೆಯನ್ನುದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿರುವ ಅವರು, ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಕಾಶಿ ದೇಶದ ಪ್ರತೀಯೊಬ್ಬರಿಗೂ ಮಾರ್ಗದರ್ಶನ, ಸಹಕಾರ, ಸೂಕ್ಷತೆಯನ್ನು ಬೋಧಿಸಲಿದೆ. ನಿಮ್ಮ ಸಂಸದನಾಗಿ, ಇಂತಹ ಸಂದರ್ಭದಲ್ಲಿ ನಿಮ್ಮೊಂದಿಗೆ ನಾನಿರುತ್ತೇನೆ. ದೆಹಲಿಯಲ್ಲಾಗುತ್ತಿರುವ ಬೆಳವಣಿಗೆಗಳು ನಿಮಗೆ ತಿಳಿದಿದೆ ಎಂದುಕೊಂಡಿದ್ದೇನೆ. ಎಲ್ಲಿಯೇ ಇದ್ದರೂ ವಾರಣಾಸಿ ಪರಿಸ್ಥಿತಿ ಬಗ್ಗೆ ಅಧಿಕಾರಿಗಳಿಂದ ನಿಂತರವಾಗಿ ಮಾಹಿತಿ ಪಡೆಯುತ್ತಲೇ ಇರುತ್ತೇನೆ. ವಿಶ್ವದೆಲ್ಲೆಡೆ 1 ಲಕ್ಷ ಜನತೆಗೆ ವೈರಸ್'ನಿಂದ ಗುಣಮುಖರಾಗಿದ್ದಾರೆಂಬುದನ್ನು ನೀವು ಮನದಲ್ಲಿಟ್ಟುಕೊಳ್ಳಬೇಕು. ಇಟಲಿಯಲ್ಲಿ 90 ವರ್ಷದ ವಯಸ್ಸಾದ ಮಹಿಳೆಯೊಬ್ಬರು ವೈರಸ್ ನಿಂದ ಗುಣಮುಖರಾಗಿದ್ದಾರೆಂಬುದು ಇತ್ತೀಚೆಗಷ್ಟೇ ತಿಳಿಯಿತು ಎಂದು ಹೇಳಿದ್ದಾರೆ. 

ಕೊರೋನಾ ವೈರಸ್ ಕುರಿತು ನಿಖರ ಹಾಗೂ ಸರಿಯಾದ ಮಾಹಿತಿಗಳನ್ನು ನೀಡಲು ಈಗಾಗಲೇ ವಾಟ್ಸ್ ಅ್ಯಪ್ ಹಾಗೂ ಸಹಾಯವಾಣಿ ಕೇಂದ್ರಗಳನ್ನು ಸೃಷ್ಟಿಸಲಾಗಿದೆ ಎಂದು ತಿಳಿಸಿದ್ದಾರೆ. 

ವೈದ್ಯರು ನಮ್ಮ ಜೀವ ರಕ್ಷಣೆ ಮಾಡುತ್ತಿದ್ದಾರೆ. ಅವರ ಋಣವನ್ನು ಎಂದಿಗೂ ತೀರಿಸಲು ಸಾಧ್ಯವಿಲ್ಲ. ವುಹಾನ್ ನಿಂದ ರಕ್ಷಣೆಗೊಳಗಾದ ಜನರಿಗೆ ಪತ್ರ ಬರೆಯಲಾಗಿದ್ದು, ಆ ಸಮಯ ಅತ್ಯಂತ ಭಾವನಾತ್ಮಕವಾಗಿತ್ತು. ಕೆಲ ವೈದ್ಯರು ನೀಡುವ ಚಿಕಿತ್ಸೆಗಳ ಬಗ್ಗೆಯೂ ಎಚ್ಚರಿಕೆಯಿಂದಿರಿ.

ಬೇಜಬ್ದಾರಿತನದಿಂದ ವರ್ತಿಸುವ ವೈದ್ಯರು ಎಲ್ಲಿಯೇ ಕಂಡು ಅಂತಹ ಬೆಳವಣಿಗೆಗಳ ಬಗ್ಗೆ ನಮ್ಮ ಗಮನಕ್ಕೆ ತನ್ನಿ. ಇತರೆ ಜನರಿಗೂ ಈ ಬಗ್ಗೆ ಮಾಹಿತಿ ನೀಡಿ. ಈಗಷ್ಟೇ ಹಬ್ಬ ಆರಂಭವಾಗಿದ್ದು, ಮುಂದಿನ 21 ದಿನಗಳವರೆಗೆ 9 ಬಡ ಕುಟುಂಬಗಳಿಗೆ ಸಹಾಯ ಮಾಡುವ ಪ್ರತಿಜ್ಞೆಯನ್ನು ನಾವು ತೆಗೆದುಕೊಳ್ಳೋಣ. ದೇವರಿಗೆ ಇದಕ್ಕಿಂತಲೂ ದೊಡ್ಡ ಪೂಜೆ ಯಾವುದೂ ಇಲ್ಲ. ವೈರಸ್ ನಿಂದ ಆಂತಕಪಡುವ ಯಾವುದೇ ಅವಶ್ಯಕತೆಯಿಲ್ಲ. ಪರಿಸ್ಥಿತಿಯ ಮೂಲಕ ಆ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಎಲ್ಲರೂ ಒಂದಾಗೋಣ. ಕೇಂದ್ರ ಆಡಳಿತಕ್ಕೆ ಸಹಾಯ ಮಾಡುವಂತೆ ಇದೇ ವೇಳೆ ಭಾರತೀಯರನ್ನು ಒತ್ತಾಯಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com