ಚಾಲಕರಿಗೆ ಹಣಕಾಸು ಸಂಸ್ಥೆಗಳಿಂದ ಕಿರುಕುಳವಾಗದಂತೆ ಪ್ರಧಾನಿ ಮೋದಿ ನೋಡಿಕೊಳ್ಳಬೇಕು: ಗಂಡಸಿ ಸದಾನಂದ ಸ್ವಾಮಿ

ದೇಶಾದ್ಯಂತ ತೀವ್ರ ಆತಂಕ ಸೃಷ್ಟಿಸಿರುವ ಕೊರೋನಾ ವೈರಸ್ ಮಹಾಮಾರಿ ನಿಯಂತ್ರಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ದೇಶಾದ್ಯಂತ ಏಕಾಏಕಿ ಘೋಷಿಸಿರುವ 21 ದಿನಗಳ ಲಾಕ್ ಡೌನ್ ನಿಂದಾಗಿ ಚಾಲಕರು ಮತ್ತವರ ಕುಟುಂಬ ದಿಘ್ಭ್ರಮೆಗೊಳಗಾಗಿದ್ದು,  ಮುಂದೇನು ಎನ್ನುವ ಆತಂಕದಲ್ಲಿದೆ ಎಂದು ರಾಷ್ಟ್ರೀಯ ಚಾಲಕರ ಒಕ್ಕೂಟದ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ದೇಶಾದ್ಯಂತ ತೀವ್ರ ಆತಂಕ ಸೃಷ್ಟಿಸಿರುವ ಕೊರೋನಾ ವೈರಸ್ ಮಹಾಮಾರಿ ನಿಯಂತ್ರಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ದೇಶಾದ್ಯಂತ ಏಕಾಏಕಿ ಘೋಷಿಸಿರುವ 21 ದಿನಗಳ ಲಾಕ್ ಡೌನ್ ನಿಂದಾಗಿ ಚಾಲಕರು ಮತ್ತವರ ಕುಟುಂಬ ದಿಘ್ಭ್ರಮೆಗೊಳಗಾಗಿದ್ದು,  ಮುಂದೇನು ಎನ್ನುವ ಆತಂಕದಲ್ಲಿದೆ ಎಂದು ರಾಷ್ಟ್ರೀಯ ಚಾಲಕರ ಒಕ್ಕೂಟದ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ತೀರ್ಮಾನದಿಂದ 21 ಕೋಟಿಗೂ ಹೆಚ್ಚು ಚಾಲಕರು ಮತ್ತವರ ಕುಟುಂಬ ಸದಸ್ಯರು ದಿಕ್ಕಾಪಾಲಾಗಿದ್ದು, ಇಂತಹ ಸಂದರ್ಭದಲ್ಲಿ ಚಾಲಕ ಸಮುದಾಯದ ಬೇಡಿಕೆಗಳನ್ನು ಈಡೇರಿಸಿ ಹಿತರಕ್ಷಿಸುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜ್ಯದ  ಲಕ್ಷಾಂತರ ಚಾಲಕರು, ಮತ್ತು ಕುಟುಂಬ ಸದಸ್ಯರಿಂದ ಪತ್ರ ಚಳವಳಿ ಆರಂಭಿಸಲಾಗಿದೆ ಎಂದಿದ್ದಾರೆ.

ಈ ಕುರಿತು ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಗಂಡಸಿ ಸದಾನಂದ ಸ್ವಾಮಿ, ಈಗಾಗಲೇ ಚಾಲಕರ ಸಂಘದಿಂದ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದು, ಸಂಘಟನೆಯ 120ಕ್ಕೂ ಹೆಚ್ಚು ಶಾಖೆಗಳಿಂದಲೂ ಪತ್ರ ಬರೆಯಲಾಗುತ್ತಿದೆ. ದೇಶದಲ್ಲಿ ಸುಮಾರು 218,288.000ಕ್ಕೂ  ಹೆಚ್ಚು ಲಾರಿ, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್, ವಾಣಿಜ್ಯ ಬಳಕೆ ವಾಹನಗಳ ಚಾಲಕರು ಕಾರ್ಯನಿರ್ವಹಿಸುತ್ತಿದ್ದಾರೆ. ಭಾರತದಲ್ಲಿ ಕೊರೋನಾ ವೈರಸ್‍ನ್ನು ಸಂಪೂರ್ಣವಾಗಿ ನಿಯಂತ್ರಣ ಮತ್ತು ನಿರ್ಮೂಲನೆ ಮಾಡುವ ಸಲುವಾಗಿ 21 ದಿನಗಳ ಲಾಕ್‍ಡೌನ್‍ ವಿಧಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ  ಚಾಲಕರು ತಮ್ಮ ವಾಹನಗಳ ಮೇಲಿನ ಸಾಲದ ಮೇಲಿನ ಮಾಸಿಕ ಕಂತು (ಇಎಂಐ) ಕಟ್ಟುವುದು ಬಹಳ ಕಷ್ಟಕರವಾಗಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com