ದೆಹಲಿಯಲ್ಲಿ 15 ಬಿಎಸ್ಎಫ್ ಯೋಧರಲ್ಲಿ ಕೊರೋನಾ ಪಾಸಿಟಿವ್!
ಚೀನಾದಲ್ಲಿ ಹುಟ್ಟಿ ಇಡೀ ವಿಶ್ವಕ್ಕೆ ಕಂಟಕವಾಗಿ ಪರಿಣಮಿಸಿರುವ ಕೊರೋನಾ ವೈರಸ್, ಭಾರತವನ್ನೂ ಬೆನ್ನು ಬಿಡದಂತೆ ಕಾಡುತ್ತಿದ್ದು, ಇದೀಗ 15 ಮಂದಿ ಗಡಿ ಭದ್ರತಾ ಪಡೆಗಳಲ್ಲಿಯೂ ಸೋಂಕು ದೃಢಪಟ್ಟಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
Published: 03rd May 2020 09:38 AM | Last Updated: 03rd May 2020 09:38 AM | A+A A-

ಸಂಗ್ರಹ ಚಿತ್ರ
ನವದೆಹಲಿ: ಚೀನಾದಲ್ಲಿ ಹುಟ್ಟಿ ಇಡೀ ವಿಶ್ವಕ್ಕೆ ಕಂಟಕವಾಗಿ ಪರಿಣಮಿಸಿರುವ ಕೊರೋನಾ ವೈರಸ್, ಭಾರತವನ್ನೂ ಬೆನ್ನು ಬಿಡದಂತೆ ಕಾಡುತ್ತಿದ್ದು, ಇದೀಗ 15 ಮಂದಿ ಗಡಿ ಭದ್ರತಾ ಪಡೆಗಳಲ್ಲಿಯೂ ಸೋಂಕು ದೃಢಪಟ್ಟಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ಬಿಎಸ್ಎಪ್ 126 ಬೆಟಾಲಿಯನ್ ಹಾಗೂ 178 ಬೆಟಾಲಿಯನ್ ಪಡೆಯ 15 ಮಂದಿ ಯೋಧರಲ್ಲಿ ವೈರಸ್ ದೃಢಪಟ್ಟಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದೆಹಲಿ ಜಮ್ಮಾ ಮಸೀದಿ ಹಾಗೂ ಚಾಂದಿನಿ ಮಹಲ್ ಪ್ರದೇಶದಲ್ಲಿ ಭದ್ರತೆಗೆ ನಿಯೋಜಿಸಲಾಗಿದ್ದ ಯೋಧರಲ್ಲಿ ವೈರಸ್ ಪತ್ತೆಯಾಗಿದೆ ಎನ್ನಲಾಗುತ್ತಿದೆ. ಇದೀಗ ಎಲ್ಲಾ ಯೋಧರನ್ನು ಐಸೋಲೇಷನ್ ನಲ್ಲಿಟ್ಟು ಚಿಕಿತ್ಸೆ ಆರಂಭಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ವೈರಸ್ ನಿಂದ ಬಳಲುತ್ತಿರುವ 8 ಮಂದಿ ಯೋಧರನ್ನು ದೆಹಲಿಯ ಆರ್'ಕೆ ಪುರಂ ನಲ್ಲಿರುವ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಇದರಲ್ಲಿ ಇಬ್ಬರು ಯೋಧರಲ್ಲಿ ಕ್ಯಾನ್ಸರ್ ಇರುವುದಾಗಿ ತಿಳಿದುಬಂದಿದೆ.