ಕೊರೋನಾ ವೈರಸ್: ಅತಿಹೆಚ್ಚು ಸೋಂಕಿತರ ಪಟ್ಟಿಯಲ್ಲಿ ದೆಹಲಿಯನ್ನು ಮೀರಿಸಿದ ತಮಿಳುನಾಡು!

ಮಾರಕ ಕೊರೋನಾ ವೈರಸ್ ಆರ್ಭಟಕ್ಕೆ ನೆರೆಯ ತಮಿಳುನಾಡು ಅಕ್ಷರಶಃ ತತ್ತರಿಸಿ ಹೋಗಿದ್ದು, ಅತೀ ಹೆಚ್ಚು ಸೋಂಕಿತರ ಪಟ್ಟಿಯಲ್ಲಿ ದೆಹಲಿಯನ್ನೇ ಮೀರಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚೆನ್ನೈ: ಮಾರಕ ಕೊರೋನಾ ವೈರಸ್ ಆರ್ಭಟಕ್ಕೆ ನೆರೆಯ ತಮಿಳುನಾಡು ಅಕ್ಷರಶಃ ತತ್ತರಿಸಿ ಹೋಗಿದ್ದು, ಅತೀ ಹೆಚ್ಚು ಸೋಂಕಿತರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದ ದೆಹಲಿಯನ್ನೇ ಮೀರಿಸಿದೆ.

ಹೌದು.. ತಮಿಳುನಾಡಿನಲ್ಲಿ ಕೊರೋನಾ ವೈರಸ್ ಆರ್ಭಟ ಮತ್ತಷ್ಟು ಜೋರಾಗಿದ್ದು, ನಿನ್ನೆ ಒಂದೇ ದಿನ ಮತ್ತೆ 669 ಹೊಸ ಸೋಂಕು ಪ್ರಕರಗಳು ದಾಖಲಾಗಿದೆ. ಆ ಮೂಲಕ ಇಲ್ಲಿ ಸೋಂಕಿತರ ಸಂಖ್ಯೆ 7,200ಕ್ಕೆ ಏರಿಕೆಯಾಗಿದೆ. ಆ ಮೂಲಕ ತಮಿಳುನಾಡು 3ನೇ ಸ್ಥಾನಕ್ಕೇರಿದೆ. ಚೆನ್ನೈ  ಮಹಾನಗರಿಯೊಂದರಲ್ಲೇ ನಿನ್ನೆ 509 ಹೊಸ ಪ್ರಕರಣಗಳು ದಾಖಲಾಗಿವೆ. ಪ್ರಮುಖವಾಗಿ ಕೊಯಂಬೇಡು ತರಕಾರಿ ಮಾರುಕಟ್ಟೆ ತಮಿಳುನಾಡಿನ ಕೊರೋನಾ ಹಾಟ್ ಸ್ಪಾಟ್ ಆಗಿದ್ದು, ಇಲ್ಲಿ ಸೋಂಕಿತರ ಸಂಖ್ಯೆ ಬರೊಬ್ಬರಿ 2,005ರಷ್ಟಿದೆ. ತಮಿಳುನಾಡಿನಲ್ಲಿ ಈ ವರೆಗೂ 47  ಸೋಂಕಿತರು ಸಾವನ್ನಪ್ಪಿದ್ದು, 1, 959 ಸೋಂಕಿತರು ಗುಣಮುಖರಾಗಿದ್ದಾರೆ.  

ಇನ್ನು 20,200 ಸೋಂಕಿತರನ್ನು ಹೊಂದಿರುವ ಮಹಾರಾಷ್ಟ್ರ ಅಗ್ರಸ್ಥಾನದಲ್ಲಿದ್ದು, 7,800 ಸೋಂಕಿತರನ್ನು ಹೊಂದಿರುವ ಗುಜರಾತ್ 2ನೇ ಸ್ಥಾನದಲ್ಲಿದೆ. 7,000 ಸೋಂಕಿತರನ್ನು ಹೊಂದಿರುವ ರಾಜಧಾನಿ ದೆಹಲಿ 4ನೇ ಸ್ಥಾನಕ್ಕೆ ಕುಸಿದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com